ಜನಪ್ರಿಯ ಸಿಟಿ ಕಾರಿನ ಗ್ರಾಹಕರಿಗೆ ಶಾಕ್ ನೀಡಿದ ಹೋಂಡಾ
ಜಪಾನ್ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇಂಡಿಯಾ (Honda Cars India ) ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರ್ ಆದ ಸಿಟಿ ಮಾದರಿಯ ಬೆಲೆಗಳನ್ನು 20,000 ರೂ.ವರೆಗೆ ಹೆಚ್ಚಿಸಿದೆ. ಈ ಹೆಚ್ಚಳವು ಸರಣಿಯಲ್ಲಿರುವ ನಿರ್ದಿಷ್ಟ ರೂಪಾಂತರಗಳಿಗೆ ಅನ್ವಯಿಸುತ್ತದೆ. ಈ ಬೆಲೆ ಏರಿಕೆಯು ಹೋಂಡಾ ಸಿಟಿ (Honda City) ಕಾರಿನ SV MT, V MT, VX MT, VX CVT, ZX MT, ಮತ್ತು ZX CVT ರೂಪಂತರಗಳು ಸೇರಿವೆ.
ಬೆಲೆ ಏರಿಕೆಯು ಹೋಂಡಾ ಸಿಟಿ ಕಾರಿನ ಹೈಬ್ರಿಡ್ (e:HEV) ಮಾದರಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಈಗ ಹೋಂಡಾ ಸಿಟಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ. 11.82 ಲಕ್ಷದಿಂದ ರೂ. 16.63 ಲಕ್ಷದವರೆಗೆ ಇದೆ. ಈ ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ 1.5-ಲೀಟರ್, ನ್ಯಾಚುರಲ್-ಆಸ್ಪೈರಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 120 bhp ಪವರ್ ಮತ್ತು 145 Nm ಟಾರ್ಕ್ ಅನ್ನು ಉತ್ಪಾದಿಸುವುದನ್ನು ಮುಂದುವರೆಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ CVT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇನ್ನು 1.5-ಲೀಟರ್ ಅಟ್ಕಿನ್ಸನ್ ಸೈಕಲ್ ಎಂಜಿನ್ 97 bhp ಪೀಕ್ ಪವರ್ ಮತ್ತು 127 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಹೈಬ್ರಿಡ್ ಸಿಸ್ಟಂ ಭಾಗವಾಗಿರುವ ಎಲೆಕ್ಟ್ರಿಕ್ ಮೋಟಾರ್ 108 bhp ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಒಟ್ಟಾರೆಯಾಗಿ, ಹೈಬ್ರಿಡ್ ಸಿಸ್ಟಂ ಒಟ್ಟಾಗಿ 125 bhp ಮತ್ತು 253 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಹೊಸ ನವೀಕರಣದೊಂದಿಗೆ ಸೆಡಾನ್ ವಿಭಾಗದಲ್ಲಿ ಜನಪ್ರಿಯ ಸಿಟಿ ಕಾರಿನ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೋಂಡಾ ಪ್ರಯತ್ನಿಸುತ್ತಿದೆ.

ವಿಶಿಷ್ಟವಾದ ಹೋಂಡಾ ಶೈಲಿಯಲ್ಲಿ, ಸಿಟಿ ಫೇಸ್‌ಲಿಫ್ಟ್‌ನಲ್ಲಿನ ಬದಲಾವಣೆಗಳು ಬಹಳ ಸೂಕ್ಷ್ಮವಾಗಿದೆ. ಹೋಂಡಾ ಕಂಪನಿಯು ಈ ಹೋಂಡಾ ಕಾರಿನಲ್ಲಿ ಕೆಲವು ಫೀಚರ್ಸ್ ಮತ್ತು ಹೊಸ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ. ಹೋಂಡಾ ಸಿಟಿ ಫೇಸ್‌ಲಿಫ್ಟ್‌ನೊಂದಿಗೆ, ಹೋಂಡಾದ ಪ್ರಮುಖ ಬದಲಾವಣೆಯು ಅದರ ಮುಂಭಾಗದ ಬಂಪರ್‌ನಲ್ಲಿದೆ.
ಹೊಸ ಹೋಂಡಾ ಸಿಟಿ ಸಾಕಷ್ಟು ಫೀಚರ್ಸ್-ಲೋಡ್ ಸೆಡಾನ್ ಆಗಿದೆ. ಇದರಲ್ಲಿ ಲೆದರ್ ಸುತ್ತಿದ ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್, ಪ್ಯಾಡ್ಡ್ ಡೋರ್ ಪ್ಯಾಡ್‌ಗಳು, ಆಟೋ-ಡಿಮ್ಮಿಂಗ್ IRVM, ಎಲೆಕ್ಟ್ರಿಕಲ್ ಆಪರೇಟೆಡ್ ಮತ್ತು ಫೋಲ್ಡಬಲ್ ORVM ಗಳು ಮತ್ತು 8" ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಇದರೊಂದಿಗೆ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸನ್‌ರೂಫ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿವೆ.

ಹೋಂಡಾ ಸಿಟಿ ಫೇಸ್‌ಲಿಫ್ಟ್ ಕಾರಿನಲ್ಲಿ ತನ್ನ ಕ್ಯಾಮೆರಾ ಆಧಾರಿತ ADAS ತಂತ್ರಜ್ಞಾನದ ಸೆನ್ಸಿಂಗ್ ಸೂಟ್ ಅನ್ನು ಸೇರಿಸಿದೆ. ಇನ್ನು ಈ ಕಾರಿನಲ್ಲಿ ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿದೆ. ನಾವು ಇದರಲ್ಲಿ ರಾಡಾರ್ ಆಧಾರಿತ ADAS ಸೂಟ್‌ನೊಂದಿಗೆ ಮುಂಬರುವ ಹ್ಯುಂಡೈ ವೆರ್ನಾ ಭಿನ್ನವಾಗಿ, ಹೋಂಡಾದ ಕ್ಯಾಮೆರಾ ಯುನಿಟ್ ಅನ್ನು ಅದರ IRVM ಅನ್ನು ನೋಡಬಹುದು.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








