Honda: 16.92 ಮೈಲೇಜ್.. 5-ಸೀಟರ್, 11.91 ಲಕ್ಷ ಬೆಲೆ.. ಹೊಸ ದಾಖಲೆ, ಈ ಪ್ರಖ್ಯಾತ ಕಾರಿಗಾಗಿ ಮುಗಿಬಿದ್ದ ಗ್ರಾಹಕರು!

ಹೋಂಡಾ ಕಾರ್ಸ್ ಇಂಡಿಯಾ (Honda Cars India), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುತ್ತಿರುವ 'ಎಲಿವೇಟ್‌' ಎಸ್‌ಯುವಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಇದೇ ಕಾರಿನ ಮಾರಾಟದಲ್ಲಿ ಹೋಂಡಾ ಕಂಪನಿಯು ದೊಡ್ಡ ದಾಖಲೆಯೊಂದನ್ನು ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ವಿಶ್ವದಾದ್ಯಂತ ಹೋಂಡಾ ಕಾರ್ಸ್ ಇಂಡಿಯಾ, ಮಿಡ್-ಸೈಜ್ ಎಸ್‌ಯುವಿ ಎಲಿವೇಟ್‌ನ 1 ಲಕ್ಷಕ್ಕೂ ಅಧಿಕ ಯುನಿಟ್‌ಗಳನ್ನು ಮಾರಾಟ ಮಾಡಿದೆ. ದೇಶೀಯವಾಗಿ 53,326 ಯುನಿಟ್‌ಗಳು ಮಾರಾಟಗೊಂಡರೆ, ವಿದೇಶಕ್ಕೆ 47,653 ಯುನಿಟ್‌ಗಳನ್ನು ರಫ್ತು ಮಾಡಲಾಗಿದೆ. ಈ ಕಾರನ್ನು ಭಾರತ ಮಾತ್ರವಲ್ಲದೆ, ಜಪಾನ್, ದಕ್ಷಿಣ ಆಫ್ರಿಕಾ ಭೂತಾನ್ ಹಾಗೂ ನೇಪಾಳದಲ್ಲಿಯೂ ಮಾರಾಟಗೊಳಿಸಲಾಗುತ್ತದೆ.

Honda Elevate Suv Crosses 1 00 000 Units Sales Worldwide Details

ಹೋಂಡಾ ಎಲಿವೇಟ್‌ (Honda Elevate) ವಿಶೇಷತೆಗಳೇನು: ಈ ಎಸ್‌ಯುವಿ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.11.91 ಲಕ್ಷ ಮತ್ತು ಗರಿಷ್ಠ ರೂ.16.73 ಲಕ್ಷ (ಎಕ್ಸ್ - ಶೋರೂಂ) ಬೆಲೆಯನ್ನು ಹೊಂದಿದೆ. ಎಸ್‌ವಿ, ವಿ, ವಿಎಕ್ಸ್ ಮತ್ತು ಜಡ್ಎಕ್ಸ್ ಎಂಬ ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಪಡೆದಿದೆ.

ಈ ಕಾರು ಹೊರಭಾಗದಲ್ಲಿ ಬಾಕ್ಸಿ ಆಕಾರವನ್ನು ಒಳಗೊಂಡಿದೆ. 4312 ಎಂಎಂ ಉದ್ದ, 1790 ಎಂಎಂ ಅಗಲ, 1650 ಎಂಎಂ ಎತ್ತರ ಹಾಗೂ 2650 ಎಂಎಂ ವೀಲ್‌ಬೇಸ್‌ನ್ನು ಹೊಂದಿದೆ. ಫೀನಿಕ್ಸ್ ಆರೆಂಜ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್ ಹಾಗೂ ಪ್ಲಾಟಿನಂ ವೈಟ್ ಪರ್ಲ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

Honda Elevate Suv Crosses 1 00 000 Units Sales Worldwide Details

ನೂತನ ಎಲಿವೇಟ್‌ ಎಸ್‌ಯುವಿ,1.5-ಲೀ. ಪೆಟ್ರೋಲ್ ಎಂಜಿನ್‌ನ್ನು ತನ್ನದಾಗಿಸಿಕೊಂಡಿದೆ. 121 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 145 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್/ ಸಿವಿಟಿ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಜೊತೆಗೆ 15.31 ರಿಂದ 16.92 ಕೆಎಂಪಿಎಲ್‌ವರೆಗೂ ಮೈಲೇಜ್ ಸಹ ಕೊಡುತ್ತದೆ.

ಈ ಹೊಸ ಕಾರು 5 ಆಸನಗಳನ್ನು ಒಳಗೊಂಡಿದೆ. ಹೆಚ್ಚಿನ ಲಗೇಜ್ ಕೊಂಡೊಯ್ಯಲು 458 ಲೀ.ನ ಬೂಟ್ ಸ್ಪೇಸ್‌ನ್ನು ಪಡೆದಿದೆ. 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ನೂತನ ಹೋಂಡಾ ಎಲಿವೇಟ್‌ ಎಸ್‌ಯುವಿ ಸುರಕ್ಷತೆಗೂ ಹೆಸರುವಾಸಿಯಾಗಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಪಡೆದಿದೆ. ಈ ಕಾರಿಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಫಾರ್ಚುನರ್, ಸಿಟ್ರಸ್ ಸಿ3 ಏರ್‌ಕ್ರಾಸ್, ಸ್ಕೋಡಾ ಕುಶಾಕ್ ಎಸ್‌ಯುವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, February 26, 2025, 10:20 [IST]
English summary
Honda elevate suv crosses 100000 units sales worldwide details
Read more on honda india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+