Hyundai: ಹ್ಯುಂಡೈ ಔರಾ ಕಾರ್ಪೊರೇಟ್ ವೇರಿಯೆಂಟ್ ಬಿಡುಗಡೆ.. ಬೆಲೆ ಇಷ್ಟೇನಾ, ವಿಶೇಷತೆಗಳೇನು?
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India), ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತದೆ. ಹ್ಯುಂಡೈ ಕಂಪನಿ ಮಾರಾಟಗೊಳಿಸುವ ಪ್ರಮುಖ ಕಾರುಗಳಲ್ಲಿ 'ಔರಾ' ಪ್ರಖ್ಯಾತ ಸೆಡಾನ್ ಆಗಿ ಹೊರಹೊಮ್ಮಿದೆ. ಸದ್ಯ, ಈ ಕಾರಿನ ಹೊಸ ರೂಪಾಂತರವನ್ನು (ವೇರಿಯೆಂಟ್) ಕೂಡ ಬಿಡುಗಡೆಗೊಳಿಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನೂತನ ಹ್ಯುಂಡೈ ಔರಾ ಕಾರ್ಪೊರೇಟ್ (Hyundai Aura Corporate) ರೂಪಾಂತರ ಕೈಗೆಟುಕುವ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದರ ಪೆಟ್ರೋಲ್ ಮಾಡೆಲ್ ರೂ.7.48 ಲಕ್ಷ ಮತ್ತು ಸಿಎನ್‌ಜಿ ಮಾಡೆಲ್ ರೂ.8.47 ಲಕ್ಷ ಎಕ್ಸ್-ಶೋರೂಂ ದರವನ್ನು ಒಳಗೊಂಡಿದೆ. ಈ ಕಾರಿನಲ್ಲಿಯೂ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು.

ಈ ಹ್ಯುಂಡೈ ಔರಾ ಕಾರ್ಪೊರೇಟ್ ರೂಪಾಂತರ, 2 ಪವರ್‌ಟ್ರೇನ್ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. 1.2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್, 83 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 114 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಮತ್ತೊಂದು 1.2-ಲೀಟರ್ ಸಿಎನ್‌ಜಿ ಎಂಜಿನ್, 69 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಇವೆರೆಡು ಮಾಡೆಲ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಪಡೆದಿವೆ. 17 ರಿಂದ 28.4 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತವೆ.
ಹೊಸ ಕಾರು, 6.5 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು (ಡಿಆರ್‌ಎಲ್‌ಗಳು) 15 - ಇಂಚಿನ ಸ್ಟೀಲ್ ವೀಲ್‌ಗಳು, ರೇರ್ ವಿಂಗ್ ಸ್ಪಾಯ್ಲರ್, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ರೇರ್ ಎಸಿ ವೆಂಟ್‌ಗಳು, ಇಂಟಿಗ್ರೇಟೆಡ್ ಕಪ್ ಹೋಲ್ಡರ್‌ಗಳು, ರೇರ್ ಆರ್ಮ್‌ರೆಸ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಔರಾ ಇತರೆ ರೂಪಾಂತರಗಳು & ಬಣ್ಣಗಳು: ಈ ಕಾರು ಇ, ಎಸ್, ಎಸ್ಎಕ್ಸ್ ಮತ್ತು ಎಸ್ಎಕ್ಸ್ (ಒ) ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ. ಫೈರಿ ರೆಡ್, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಟೈಟಾನ್ ಗ್ರೇ ಹಾಗೂ ಟೀಲ್ ಬ್ಲೂ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ಇನ್ನು, ಹ್ಯುಂಡೈ ಔರಾ ಕಾರ್ಪೊರೇಟ್ ವೇರಿಯೆಂಟ್ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ದೊಡ್ಡ ಸಂಖ್ಯೆಯಲ್ಲಿಯೂ ಮಾರಾಟವಾಗುವ ನಿರೀಕ್ಷೆಯಿದೆ. ಈ ಹ್ಯುಂಡೈ ಔರಾ ಸೆಡಾನ್‌ಗೆ ಮಾರುತಿ ಸುಜುಕಿ ಡಿಜೈರ್ (Maruti Suzuki Dzire), ಹೋಂಡಾ ಅಮೇಜ್ (Honda Amaze) ಹಾಗೂ ಟಾಟಾ ಟಿಗೂರ್ (Tata Tigor) ಕಾರುಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








