ಗುಡ್‌ನ್ಯೂಸ್.. ಹ್ಯುಂಡೈ ಕಂಪನಿಯಿಂದ ರೂ.75,000 ವರೆಗೆ ರಿಯಾಯಿತಿ ಘೋಷಣೆ, ರೂ.5.98 ಲಕ್ಷಕ್ಕೆ ಹೊಸ ಕಾರು!
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor India) ಪ್ರಖ್ಯಾತ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಗ್ರ್ಯಾಂಡ್ ಐ10 ನಿಯೋಸ್, ಐ20, ಐ20 ಎನ್ ಲೈನ್, ಔರಾ, ವೆರ್ನಾ, ಎಕ್ಸ್‌ಟರ್, ವೆನ್ಯೂ, ವೆನ್ಯೂ ಎನ್ ಲೈನ್, ಅಲ್ಕಾಜರ್ ಫೇಸ್‌ಲಿಫ್ಟ್, ಟಕ್ಸನ್ ಹಾಗೂ ಕ್ರೆಟಾ ಕಾರುಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸದ್ಯ, ಈ ಏಪ್ರಿಲ್ ತಿಂಗಳಲ್ಲಿ ಕರ್ನಾಟಕದ ಹ್ಯುಂಡೈ ಕಂಪನಿಯ ವಿವಿಧ ಡೀಲರ್‌ಶಿಪ್‌ಗಳು ಬಹುತೇಕ ಎಲ್ಲ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮೊದಲಿಗೆ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ (Hyundai Grand i10 NIOS) ಹೊಂದುರುವ ಹಣಕಾಸಿನ ಪ್ರಯೋಜನದ ಬಗ್ಗೆ ಮಾತನಾಡೋಣ. ಈ ಹ್ಯಾಚ್‌ಬ್ಯಾಕ್ ಒಟ್ಟು ರೂ.68,000 ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ಇದರಲ್ಲಿ ರೂ.30,000 ನಗದು ರಿಯಾಯಿತಿ, ರೂ.35,000 ಸ್ಕ್ರ್ಯಾಪೇಜ್ ಬೋನಸ್ ಮತ್ತು ರೂ.3,000 ಪ್ರೈಡ್ ಆಫ್ ಇಂಡಿಯಾ ಆಫರ್ ಕೂಡ ಸೇರಿದೆ. ನೂತನ ಗ್ರ್ಯಾಂಡ್ ಐ10 ನಿಯೋಸ್ ಕಾರು ರೂ.5.98 ಲಕ್ಷದಿಂದ ರೂ.8.62 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.

ಹ್ಯುಂಡೈ ಐ20 (Hyundai i20) ಸಹ ಬರೋಬ್ಬರಿ ರೂ.65,000 ವರೆಗೆ ಹಣಕಾಸಿನ ಪ್ರಯೋಜನವನ್ನು ಹೊಂದಿದೆ. ಈ ಕಾರು, ರೂ.7.04 ಲಕ್ಷದಿಂದ ರೂ.11.25 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ಅದೇ ರೀತಿಯಲ್ಲಿ ಹ್ಯುಂಡೈ ಐ20 ಎನ್ ಲೈನ್ (Hyundai i20 N Line) ಹ್ಯಾಚ್‌ಬ್ಯಾಕ್ ಸರಿ ಸುಮಾರು ರೂ.60,000 ವರೆಗೆ ರಿಯಾಯಿತಿಯನ್ನು ಒಳಗೊಂಡಿದೆ. ಈ ಕಾರು ರೂ.9.99 ಲಕ್ಷದಿಂದ ರೂ.12.56 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ನೂತನ ಹ್ಯುಂಡೈ ಔರಾ (Hyundai Aura) ಸೆಡಾನ್ ಒಟ್ಟಾರೆ ರೂ.53,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿದೆ. ಇದರೊಳಗೆ ರೂ.35,000 ನಗದು ರಿಯಾಯಿತಿ, ರೂ.15,000 ಸ್ಕ್ರ್ಯಾಪೇಜ್ ಬೋನಸ್ ಮತ್ತು 3,000 ಪ್ರೈಡ್ ಆಫ್ ಇಂಡಿಯಾ ಆಫರ್‌ನ್ನು ಹೊಂದಿದೆ. ಈ ಔರಾ ಕಾರು ರೂ.6.54 ಲಕ್ಷದಿಂದ ರೂ.9.11 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ.

ಹ್ಯುಂಡೈ ವೆರ್ನಾ (Hyundai Verna) ಕೂಡ ವಿಶ್ವಾಸಾರ್ಹ ಸೆಡಾನ್ ಆಗಿದೆ. ಈ ಏಪ್ರಿಲ್‌ನಲ್ಲಿ ದೊಡ್ಡ ಮಟ್ಟದಲ್ಲಿ ರಿಯಾಯಿತಿಯನ್ನು ಹೊಂದಿದೆ. ಸರಿ ಸುಮಾರು ರೂ.65,000 ವರೆಗೆ ಹಣಕಾಸಿನ ಪ್ರಯೋಜನವನ್ನು ಪಡೆದಿದೆ. ಈ ರಿಯಾಯಿತಿಯಲ್ಲಿ ರೂ.15,000 ನಗದು ರಿಯಾಯಿತಿ, ರೂ.40,000 ಸ್ಕ್ರ್ಯಾಪೇಜ್ ಬೋನಸ್ ಹಾಗೂ ರೂ.10,000 ಪ್ರೈಡ್ ಆಫ್ ಇಂಡಿಯಾ ಆಫರ್‌ನ್ನು ಒಳಗೊಂಡಿದೆ. ವೆರ್ನಾ ಕಾರು ರೂ.11.07 ಲಕ್ಷದಿಂದ ರೂ.17.55 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ.
ಹೊಸ ಹ್ಯುಂಡೈ ಎಕ್ಸ್‌ಟರ್ (Hyundai Exter) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದೆ. ಇದು ರೂ.50,000 ವರೆಗೆ ಹಣಕಾಸಿನ ಪ್ರಯೋಜನವನ್ನು ಒಳಗೊಂಡಿದೆ. ಅದರಲ್ಲಿ ರೂ.20,000 ನಗದು ರಿಯಾಯಿತಿ ಮತ್ತು ರೂ.30,000 ಸ್ಕ್ರ್ಯಾಪೇಜ್ ಬೋನಸ್‌ನ್ನು ಪಡೆದಿದೆ. ಈ ಕಾರು, ರೂ.6.21 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಹ್ಯುಂಡೈ ವೆನ್ಯೂ (Hyundai Venue) ಎಸ್‌ಯುವಿಯು ಒಟ್ಟು ರೂ.70,000 ರಿಯಾಯಿತಿಯನ್ನು ಹೊಂದಿದೆ. ಈ ಕಾರು ರೂ.7.94 ಲಕ್ಷದಿಂದ ರೂ.13.62 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಹ್ಯುಂಡೈ ವೆನ್ಯೂ ಎನ್ ಲೈನ್ (Hyundai Venue N Line) ಎಸ್‌ಯುವಿ ಸಹ ರೂ.65,000 ಹಣಕಾಸಿನ ಪ್ರಯೋಜನವನ್ನು ಪಡೆದಿದೆ. ಈ ಕಾರು ರೂ.12.15 ಲಕ್ಷದಿಂದ ರೂ.13.97 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಸಿಗುತ್ತದೆ.

ಹ್ಯುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ (Hyundai Alcazar Facelift) ಎಸ್‌ಯುವಿ ರೂ.50,000 ರಿಯಾಯಿತಿಯನ್ನು ಹೊಂದಿದೆ. ಈ ಕಾರು ರೂ14.99 ಲಕ್ಷದಿಂದ ರೂ.21.70 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ಹ್ಯುಂಡೈ ಟಕ್ಸನ್ (Hyundai Tucson) ರೂ.75,000 ಹಣಕಾಸಿನ ಪ್ರಯೋಜನವನ್ನು ಒಳಗೊಂಡಿದೆ. ಈ ಕಾರು ರೂ.29.27 ಲಕ್ಷದಿಂದ ರೂ.36.04 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹಾಗೆಯೇ ಹ್ಯುಂಡೈ ಕ್ರೆಟಾ (Hyundai Creta) ಎಸ್‌ಯುವಿ ರೂ.5,000 ರಿಯಾಯಿತಿಯನ್ನು ಮಾತ್ರ ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ರಿಯಾಯಿತಿ ಪ್ರಯೋಜನಗಳು ನಗರದಿಂದ ನಗರಕ್ಕೆ ಡೀಲರ್‌ಶಿಪ್‌ಗಳನ್ನು ಅವಲಂಭಿಸಿ ಬೇರೆಯಾಗಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








