Creta: ಜನಪ್ರಿಯ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ 3 ಹೊಸ ವೇರಿಯೆಂಟ್‌ಗಳು ಸೇರ್ಪಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ (Hyundai Creta Electric) ಪ್ರಮಖ ಮಿಡ್-ಸೈಜ್ ಎಸ್‌ಯುವಿಯಾಗಿದೆ. ಇದು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಕಾರಿನ ಮಾರಾಟ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಕಂಪನಿಯು ಮುಂದಾಗಿದೆ. ಅದಕ್ಕಾಗಿ ಹೊಸ ರೂಪಾಂತರಗಳನ್ನು (ವೇರಿಯೆಂಟ್) ಪರಿಚಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಲೈನ್‌ಅಪ್‌ಗೆ ಆಕರ್ಷಕವಾಗಿರುವ ಎಕ್ಸಲೆನ್ಸ್ (42 ಕೆಡಬ್ಲ್ಯೂಹೆಚ್), ಎಕ್ಸಿಕ್ಯುಟಿವ್ ಟೆಕ್ (42 ಕೆಡಬ್ಲ್ಯೂಹೆಚ್) ಹಾಗೂ ಎಕ್ಸಿಕ್ಯುಟಿವ್ (ಒ) (51.4 ಕೆಡಬ್ಲ್ಯೂಹೆಚ್) ಎಂಬ 3 ನೂತನ ರೂಪಾಂತರಗಳು ಸೇರ್ಪಡೆಗೊಂಡಿವೆ. ಇವುಗಳು ರೂ.18.99 ಲಕ್ಷದಿಂದ ರೂ.21.29 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿವೆ.

ಹೊಸ ರೂಪಾಂತರಗಳ ವಿಶೇಷತೆಗಳೇನು
ಎಕ್ಸಲೆನ್ಸ್ (42 ಕೆಡಬ್ಲ್ಯೂಹೆಚ್): ಇದು ಹಲವು ವಿಶಷತೆಗಳಿಗೆ ಸಾಕ್ಷಿಯಾಗಿದೆ. ಲೆವೆಲ್-2 (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), 360-ಡಿಗ್ರಿ ವ್ಯೂ ಮಾನಿಟರ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ಸ್, ಡ್ಯಾಶ್ ಕ್ಯಾಮೆರಾ, ರೇರ್ ವೈರ್‌ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ ಫೋಲ್ಡಬಲ್ ಸೀಟ್‌ಬ್ಯಾಕ್ ಟೇಬಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.
ಎಕ್ಸಿಕ್ಯುಟಿವ್ ಟೆಕ್ (42 ಕೆಡಬ್ಲ್ಯೂಹೆಚ್): ಈ ರೂಪಾಂತರವು ವಾಯ್ಸ್ ಎನೇಬಲ್ಡ್ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ರೇರ್ ವಿಂಡೋ ಸನ್‌ಶೇಡ್‌ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್‌ಪ್ಲೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಎಕ್ಸಿಕ್ಯುಟಿವ್ (ಒ) (51.4 ಕೆಡಬ್ಲ್ಯೂಹೆಚ್): ಇದು ವಾಯ್ಸ್ ಎನೇಬಲ್ಡ್ ಸ್ಮಾರ್ಟ್ ಪನೋರಮಿಕ್ ಸನ್‌ರೂಫ್, ಡ್ಯಾಶ್‌ಕ್ಯಾಮ್, ರೇರ್ ವೈರ್‌ಲೆಸ್ ಚಾರ್ಜರ್, ಇಕೋ ಫ್ರೆಂಡ್ಲಿ ಲೆದರ್ ಸೀಟ್‌ಗಳು, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಹಾಗೂ 8-ವೇ ಎಲೆಕ್ಟ್ರಿಕ್ ಡ್ರೈವರ್ ಸೀಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‌ಯುವಿಗೆ ಮೂರು ಹೊಸ ರೂಪಾಂತರಗಳನ್ನು ಸೇರಿಸಲಾಗಿದ್ದರೂ ಹೊರಭಾಗದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಅತ್ಯುತ್ತಮವಾದ ಎಲ್ಇಡಿ ಹೆಡ್‌ಲೈಟ್‌ಗಳು, ಫ್ರಂಟ್ ಸೆಂಟರ್ ಮೌಂಟೆಡ್ ಚಾರ್ಜಿಂಗ್ ಪೋರ್ಟ್, ಎಲ್ಇಡಿ ಬೂಟ್ ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ 17-ಇಂಚಿರುವ ಅಲಾಯ್ ವೀಲ್‌ಗಳನ್ನು ಹೊಂದಿದೆ.
ನೂತನ ಎಕ್ಸಲೆನ್ಸ್ ಹಾಗೂ ಎಕ್ಸಿಕ್ಯುಟಿವ್ ಟೆಕ್ ರೂಪಾಂತರಗಳು, 42 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿವೆ. ಸಂಪೂರ್ಣ ಚಾರ್ಜ್‌ನಲ್ಲಿ 420 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತವೆ. ಇವುಗಳಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 135 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 200 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಹೊಸ ಎಕ್ಸಿಕ್ಯುಟಿವ್ (ಒ) ರೂಪಾಂತರ, ಹೆಚ್ಚು ಬಲಿಷ್ಠವಾದ 51.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 510 ಕಿಲೋಮೀಟರ್ ಓಡುತ್ತದೆ. ಈ ಕಾರಿನಲ್ಲಿ ಉಪಯೋಗಿಸುವ ಎಲೆಕ್ಟ್ರಿಕ್ ಮೋಟಾರ್ 171 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 200 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಇವೆಲ್ಲ ರೂಪಾಂತರಗಳು 5 ಆಸನಗಳನ್ನು ಹೊಂದಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಓಡಾಟ ನಡೆಸಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರಯಾಣಿಸುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 433 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಪಡೆದಿವೆ.
ಒಟ್ಟಾರೆಯಾಗಿ, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಲೈನ್‌ಅಪ್‌ಗೆ ಹೊಸ ರೂಪಾಂತರಗಳನ್ನು ಸೇರ್ಪಡೆಗೊಳಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇವುಗಳು ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದ್ದು, ಸ್ಫರ್ಧಾತ್ಮಕ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿವೆ. ಮುಂಬರುವ ದಿನಗಳಲ್ಲಿ ಈ ನೂತನ ರೂಪಾಂತರಗಳಿಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








