Hyundai: ಹುಂಡೈ i20, ಅಲ್ಕಜಾರ್, ಕ್ರೆಟಾ ಇವಿ ನೈಟ್ ಎಡಿಷನ್ ಬಿಡುಗಡೆ: ಬೆಲೆ, ವಿಶೇಷತೆಗಳೇನು?
ಪ್ರಮುಖ ಕಾರು ತಯಾರಕರಾದ ಹುಂಡೈ (Hyundai) ಮೋಟಾರ್, ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನೈಟ್, ಹುಂಡೈ i20 ನೈಟ್ ಮತ್ತು ಹುಂಡೈ ALCAZAR ನೈಟ್ ಎಡಿಷನ್‌ಗಳನ್ನು ಬಿಡುಗಡೆ ಮಾಡಿದೆ. ಇವು ಬ್ಲಾಕ್ - ಥೀಮ್ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ, ಹೊಸ ಸೇರ್ಪಡೆಗಳು ಉನ್ನತ ಶೈಲಿ ಮತ್ತು ಸ್ಪಷ್ಟವಾದ ರಸ್ತೆ ಉಪಸ್ಥಿತಿಯೊಂದಿಗೆ ಗ್ರಾಹಕರನ್ನು ಆಕರ್ಷಿಸಲಿವೆ. ಹಿತ್ತಾಳೆ ಬಣ್ಣದ ಇಂಟೇಕ್‌ಗಳೊಂದಿಗೆ ಸಂಪೂರ್ಣ ಕಪ್ಪು ಒಳಾಂಗಣಗಳು, ವಿಶಿಷ್ಟ ಬಾಹ್ಯ ವಿನ್ಯಾಸವು ಗ್ರಾಹಕರಿಗೆ ಪ್ರೀಮಿಯಂ ಅನುಭವವನ್ನು ನೀಡುತ್ತವೆ. ಗ್ರಾಹಕರಿಗೆ ಕ್ರಿಯಾತ್ಮಕ ಐಷಾರಾಮಿ ಚಾಲನಾ ಅನುಭವ ನಿಡುತ್ತವೆ ಎಂದು ಹ್ಯುಂಡೈ ಹೇಳಿದೆ.
ಹುಂಡೈ ನೈಟ್ ಎಡಿಷನ್‌ಗಳ ವೈಶಿಷ್ಟ್ಯಗಳು: ಗ್ರಾಹಕರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾದ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನೈಟ್, i20 ನೈಟ್ ಮತ್ತು ALCAZAR ನೈಟ್ ಆಕರ್ಷಕ ರಸ್ತೆ ಉಪಸ್ಥಿತಿ, ದಿಟ್ಟ ಮತ್ತು ಭವಿಷ್ಯದ ವಿನ್ಯಾಸವನ್ನು ಹೊರಹಾಕುತ್ತವೆ. ಪ್ರತ್ಯೇಕತೆಯ ಮತ್ತು ವಿಶಿಷ್ಟತೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತವೆ. ರಸ್ತೆಯಲ್ಲಿ ಈ ಹೊಸ ಎಡಿಷನ್‌ಗಳು ಎದ್ದು ಕಾಣಲು ಕೆಳಗಿನ ಅಂಶಗಳನ್ನು ಒಳಗೊಂಡಿವೆ.

ಬ್ಲಾಕ್ ಅಲಾಯ್ ವೀಲ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಬ್ಲಾಕ್ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಬ್ಲಾಕ್ ಸೈಡ್ ಸಿಲ್ ಗಾರ್ನಿಷ್, ಬ್ಲಾಕ್ ರೂಫ್ ರೈಲ್ ಗಳು, ಬ್ಲಾಕ್ ಹೊರಗಿನ ಡೋರ್ ಮಿರರ್‌ಗಳು, ಬ್ಲಾಕ್ ಹಿಂಭಾಗದ ಸ್ಪಾಯ್ಲರ್, ಮ್ಯಾಟ್ ಬ್ಲಾಕ್ ಮುಂಭಾಗ ಮತ್ತು ಹಿಂಭಾಗದ ಹುಂಡೈ ಲೋಗೋ ನೀಡಲಾಗಿದೆ.
ಇವಿಷ್ಟೆ ಅಲ್ಲದೆ ವಿಶೇಷ ನೈಟ್ ಎಂಬ್ಲಮ್, ಹಿತ್ತಾಳೆ ಬಣ್ಣದ ಇನ್ಸರ್ಟ್‌ಗಳೊಂದಿಗೆ ಆಲ್ - ಬ್ಲಾಕ್ ಒಳಾಂಗಣಗಳು, ಹಿತ್ತಾಳೆ ಬಣ್ಣದ ಹೈಲೈಟ್‌ಗಳೊಂದಿಗೆ ಬ್ಲಾಕ್ ಸೀಟ್ ಅಪ್ಹೋಲ್ಸ್ಟರಿ, ಸ್ಪೋರ್ಟಿ ಮೆಟಲ್ ಪೆಡಲ್‌ಗಳು ಈ ನೈಟ್ ಎಡಿಷನ್‌ಗಳನ್ನು ಎದ್ದು ಕಾಣುವಂತೆ ಮಾಡುತ್ತವೆ. ಒಟ್ಟಾರೆ ಸ್ಪೋರ್ಟಿ ಲುಕ್‌ನೊಂದಿಗೆ ರಸ್ತೆಯಲ್ಲಿ ಎಲ್ಲರ ಗಮನ ಸೆಳಯುವಂತಹ ಡಿಸೈನ್ ಪಡೆದಿವೆ.

ಹುಂಡೈ ಕ್ರೆಟಾ ಎಲೆಕ್ಟ್ರಿಕ್: ಹುಂಡೈ ಕ್ರೆಟಾ ಎಲೆಕ್ಟ್ರಿಕ್ ನೈಟ್ ಎಕ್ಸಲೆನ್ಸ್ ವೇರಿಯೆಂಟ್‌ನಲ್ಲಿ 51.4kWh ಬ್ಯಾಟರಿ ಪ್ಯಾಕ್ (ಲಾಂಗ್ ರೇಂಜ್) ಮತ್ತು 42kWh ಬ್ಯಾಟರಿ ಪ್ಯಾಕ್ ನೀಡಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಕ್ರಮವಾಗಿ 510 ಕಿ.ಮೀ ಮತ್ತು 420 ಕಿ.ಮೀ ಚಾಲನಾ ರೇಂಜ್ ನೀಡುತ್ತವೆ. ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಸದ್ಯ ಇವಿ ವಿಭಾಗದಲ್ಲಿ ಉತ್ತಮ ಬೇಡಿಕೆಯೊಂದಿಗೆ ಮುನ್ನುಗ್ಗುತ್ತಿದೆ.
ಹುಂಡೈ i20 & ಹುಂಡೈ ALCAZAR ನೈಟ್: ಹುಂಡೈ i20 ನೈಟ್ ಎಡಿಷನ್ 1.2l ಕಪ್ಪಾ ಪೆಟ್ರೋಲ್ ಎಂಜಿನ್‌ನಲ್ಲಿ ಸ್ಪೋರ್ಟ್ಜ್ (O) 5-ಸ್ಪೀಡ್ ಮ್ಯಾನುವಲ್ ಮತ್ತು ಆಸ್ಟಾ (O) IVT ಟ್ರಾನ್ಸ್‌ಮಿಷನ್‌ನೊಂದಿಗೆ ಸಿಗುತ್ತದೆ. ಹುಂಡೈ ALCAZAR ನೈಟ್ ಎಡಿಷನ್ 1.5l-ಟರ್ಬೊ GDi ಪೆಟ್ರೋಲ್ ಎಂಜಿನ್ (7-ಸ್ಪೀಡ್ DCT) ಮತ್ತು 1.5-U2 CRDi ಡೀಸೆಲ್ ಎಂಜಿನ್ (6-ಸ್ಪೀಡ್-AT) ನಲ್ಲಿ ಸಿಗ್ನೇಚರ್ 7-ಸೀಟರ್ ರೂಪಾಂತರದಲ್ಲಿ ಲಭ್ಯವಿದೆ.

ಹುಂಡೈ i20 ಮತ್ತು ALCAZAR ಅನ್ನು ಮತ್ತಷ್ಟು ಉತ್ಕೃಷ್ಟಗೊಳಿಸುವ ಮೂಲಕ, ಉತ್ಪನ್ನಗಳು ಈಗ ಹೊಸ ವೈಶಿಷ್ಟ್ಯಗಳ ಪಟ್ಟಿಯೊಂದಿಗೆ ಬರುತ್ತವೆ. ಹುಂಡೈ i20 & i20 N ಲೈನ್ ಹೊಸ ಸ್ಪೋರ್ಟಿ ರಿಯರ್ ಸ್ಪಾಯ್ಲರ್ 3, ಡ್ಯಾಶ್‌ಕ್ಯಾಮ್ 4 ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ / ಆಪಲ್ ಕಾರ್ ಪ್ಲೇ 5 ಪಡೆದುಕೊಂಡಿವೆ. ಹುಂಡೈ ALCAZAR ಸಿಗ್ನೇಚರ್ ರೂಪಾಂತರದಲ್ಲಿ ಡ್ಯಾಶ್‌ಕ್ಯಾಮ್‌ನೊಂದಿಗೆ ಬರುತ್ತದೆ.
ಹುಂಡೈ ನಿರ್ದೇಶಕ ಮತ್ತು ಮುಖ್ಯ ಕಾರ್ಯಾಚರಣಾ ಅಧಿಕಾರಿ ತರುಣ್ ಗರ್ಗ್ ಮಾತನಾಡಿ, "ಮುಂಬರುವ ಹಬ್ಬದ ಆಚರಣೆ, ಸಂತೋಷ ಮತ್ತು ಹೊಸ ಆರಂಭಗಳ ಸಲುವಾಗಿ CRETA ಎಲೆಕ್ಟ್ರಿಕ್ ನೈಟ್, i20 ನೈಟ್ ಮತ್ತು ALCAZAR ನೈಟ್‌ಗಳ ಪರಿಚಯದೊಂದಿಗೆ ಗ್ರಾಹಕರಿಗೆ ಮರೆಯಲಾಗದ ಉಡುಗೊರೆ ನೀಡುತ್ತಿದ್ದೇವೆ. ನೈಟ್ ಎಡಿಷನ್‌ನಲ್ಲಿ 'ಬ್ಲಾಕ್' ಆಕರ್ಷಣೆಯು ಇಂದಿನ ಯುವ ಭಾರತೀಯ ಖರೀದಿದಾರರ ದಿಟ್ಟ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದರು.


Click it and Unblock the Notifications