Hyundai: ರಣ ಹದ್ದಿನಂತಹ ಎಸ್‌ಯುವಿಗೆ ಜನ ಫಿದಾ: ಜೂನ್‌ನಲ್ಲಿ ಅತಿಹೆಚ್ಚು ಮಾರಾಟ... ಮುಗಿಬಿದ್ದು ಖರೀದಿ!

ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL), ತನ್ನ ಜನಪ್ರಿಯ SUV ಆಗಿರುವ ಕ್ರೆಟಾ ಜೂನ್ 2025 ರಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಮಾದರಿಯಾಗಿದೆ ಎಂದು ಪ್ರಕಟಿಸಿದೆ. ಜೂನ್ 2025 ರಲ್ಲಿ 15,786 ಯುನಿಟ್‌ ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಹುಂಡೈ ಕ್ರೆಟಾ (Hyundai Creta) ಹೆಚ್ಚು ಸ್ಪರ್ಧಾತ್ಮಕ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಕಾರಾಗಿ ಸ್ಥಾನವನ್ನು ದಕ್ಕಿಸಿಕೊಂಡಿದೆ. ಹಾಗೆಯೇ ಹುಂಡೈ ಕ್ರೆಟಾ 2025 ರ H1 (ಜನವರಿ-ಜೂನ್) ನಲ್ಲಿ ಭಾರತದ ಅತಿ ಹೆಚ್ಚು ಮಾರಾಟವಾದ SUV ಆಗಿದೆ.

ಇದು ಮಾತ್ರವಲ್ಲದೆ ಹುಂಡೈ ಕ್ರೆಟಾ ಮೂರು (ಮಾರ್ಚ್, ಏಪ್ರಿಲ್ ಮತ್ತು ಜೂನ್) ಬಾರಿ ದೇಶದ ಅತ್ಯುತ್ತಮ ಮಾರಾಟವಾದ ಮಾಡಲ್ ಆಗಿ ಖ್ಯಾತಿ ಗಳಿಸಿದೆ. ಈ ಮಹತ್ವದ ಮೈಲಿಗಲ್ಲು ಕ್ರೆಟಾದ 10 ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗುತ್ತದೆ. ಈ ಸಾಧನೆಯು ಬ್ರ್ಯಾಂಡ್ ಮತ್ತು ಅದರ ವಿಶಾಲ ಗ್ರಾಹಕ ನೆಲೆಗೆ ಇನ್ನಷ್ಟು ಸ್ಮರಣೀಯವಾಗಿದೆ ಎಂದು ಕಂಪನಿ ಹೆಮ್ಮೆ ವ್ಯಕ್ತಪಡಿಸಿದೆ.

hyundai-creta-highest-selling-passenger-vehicle-in-india

ಅತ್ಯಾಧುನಿಕ ತಂತ್ರಜ್ಞಾನ, ಸುಧಾರಿತ ಸುರಕ್ಷತೆ, ವಿನ್ಯಾಸ ಮತ್ತು ಸೌಕರ್ಯದಲ್ಲಿ ನಾವೀನ್ಯತೆಯನ್ನು ನೀಡುವ ಮೂಲಕ, ಕ್ರೆಟಾ ಭಾರತೀಯ ಗ್ರಾಹಕರಿಗೆ ಹೆಚ್ಚು ಆದ್ಯತೆಯ SUV ಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಎತ್ತಿಹಿಡಿದಿದೆ. ಹುಂಡೈ ಕ್ರೆಟಾ ಎಲೆಕ್ಟ್ರಿಕ್‌ನ ಇತ್ತೀಚಿನ ಪರಿಚಯದೊಂದಿಗೆ, ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿಯೂ ಕಂಪನಿ ಮುನ್ನುಗ್ಗುತ್ತಿದೆ.

ಹ್ಯುಂಡೈ ಕ್ರೆಟಾ ವಿಶೇಷತೆಗಳು

ಹ್ಯುಂಡೈ ಕ್ರೆಟಾ ಬೆಲೆಯು ಬೇಸ್‌ ವೇರಿಯೆಂಟ್ ರೂ.11 ಲಕ್ಷದಿಂದ ಟಾಪ್ ವೇರಿಯೆಂಟ್ ರೂ.20 ಲಕ್ಷವರೆಗೆ (ಎಕ್ಸ್ - ಶೋರೂಂ) ಬೆಲೆಯನ್ನು ಒಳಗೊಂಡಿದೆ. ಹಾಗೆಯೇ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು ಆರಂಭಿಕ ರೂ.18 ಲಕ್ಷ ಮತ್ತು ಗರಿಷ್ಠ ರೂ.24 ಲಕ್ಷ (ಎಕ್ಸ್ - ಶೋರೂಂ) ಬೆಲೆಯನ್ನು ಹೊಂದಿದೆ.

hyundai-creta-highest-selling-passenger-vehicle-in-india

ಇಂಧನ ಚಾಲಿತ ಕ್ರೆಟಾ ಪವರ್‌ಟ್ರೇನ್ ಆಯ್ಕೆಗಳಲ್ಲಿ 1.5 - ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 - ಲೀಟರ್ ಡೀಸೆಲ್ ಎಂಜಿನ್‌ನ್ನು ಪಡೆದಿದೆ. 6 - ಸ್ಪೀಡ್ ಮ್ಯಾನುವಲ್, ಆಟೋಮೆಟಿಕ್, ಸಿವಿಟಿ ಹಾಗೂ 7 - ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17 ರಿಂದ 22 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

ಇನ್ನು ಎಲೆಕ್ಟ್ರಿಕ್ ಕಾರು ವಿಷಯಕ್ಕೆ ಬಂದರೆ ಹೆಚ್ಚು ಶಕ್ತಿಯುತವಾದ 42 ಕಿಲೋ ವ್ಯಾಟ್ ಹಾಗೂ 51 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 390 ರಿಂದ 473 ಕಿಲೋಮೀಟರ್ ಓಡುತ್ತದೆ. ಜೊತೆಗೆ ಹಲವು ಫೀಚರ್‌ಗಳನ್ನು ಒಳಗೊಂಡಿದೆ.

hyundai-creta-highest-selling-passenger-vehicle-in-india

ಕ್ರೆಟಾ ಮೈಲಿಗಲ್ಲಿನ ಕುರಿತು ಮಾತನಾಡಿದ ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ನಿರ್ದೇಶಕ ತರುಣ್ ಗರ್ಗ್, "ಕ್ರೆಟಾ ಕೇವಲ ಒಂದು ಉತ್ಪನ್ನವಲ್ಲ, ಇದು 1.2 ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ಕುಟುಂಬಗಳಿಗೆ ಒಂದು ಭಾವನೆಯಾಗಿದೆ. ಭಾರತದಲ್ಲಿ ಹುಂಡೈನ ಬೆಳವಣಿಗೆಯ ಬಲವಾದ ಆಧಾರಸ್ತಂಭವಾಗಿ ಉಳಿದಿದೆ. ಜೂನ್ 2025 ಕ್ಕೆ ದೇಶದಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದಂತೆಯೇ ಅತ್ಯುತ್ತಮ ಮಾರಾಟವಾದ ಮಾದರಿಯಾಗುವುದು, ಭಾರತೀಯ ಗ್ರಾಹಕರು ಬ್ರ್ಯಾಂಡ್‌ನಲ್ಲಿ ಇರಿಸಿರುವ ಪ್ರೀತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ.

ವಾಸ್ತವವಾಗಿ ಹುಂಡೈ ಕ್ರೆಟಾ 2015 ರಲ್ಲಿ ಬಿಡುಗಡೆಯಾದಾಗಿನಿಂದ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ ಎಸ್‌ಯುವಿಯಾಗಿದೆ. ಅದರ ಪ್ರಭಾವ ಹೇಗಿದೆ ಎಂದರೆ ಈ ವಿಭಾಗವನ್ನು ಈಗ ಪ್ರೀತಿಯಿಂದ 'ಕ್ರೆಟಾ ವಿಭಾಗ' ಎಂದು ಕರೆಯಲಾಗುತ್ತಿದೆ, ಇದು ಬ್ರ್ಯಾಂಡ್‌ನ ನಾಯಕತ್ವಕ್ಕೆ ನಿಜವಾದ ಸಾಕ್ಷಿಯಾಗಿದೆ. ನಾವೀನ್ಯತೆ, ಸುರಕ್ಷತೆ ಮತ್ತು ಸುಸ್ಥಿರತೆಯ ಮೂಲಕ ಗ್ರಾಹಕರ ಅನುಭವಗಳನ್ನು ಮತ್ತಷ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಎಂದರು.

More from DriveSpark

Article Published On: Wednesday, July 2, 2025, 16:39 [IST]
English summary
Hyundai creta highest selling passenger vehicle in india
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+