hyundai: ಹ್ಯುಂಡೈ ಹೊಡೆತಕ್ಕೆ ಎಲ್ಲಾ ಬ್ರಾಂಡ್‌ಗಳು ತತ್ತರ: 15 ಲಕ್ಷ ಕಾರುಗಳು ಉಡೀಸ್... ಫುಲ್ ಡಿಮ್ಯಾಂಡ್!
ಭಾರತದಲ್ಲಿ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗವು ಮೊದಲಿನಿಂದಲೂ ತುಂಬಾ ಬೇಡಿಕೆಯನ್ನು ಪಡೆದುಕೊಂಡಿದೆ. ಅದರಲ್ಲೂ 2015 ರಲ್ಲಿ ಕ್ರೆಟಾ ಬಿಡುಗಡೆಯಾದಾಗಿನಿಂದ ಈ ಬೇಡಿಕೆ ಮತ್ತೊಂದು ಹಂತಕ್ಕೆ ತಲುಪಿದೆ. ಎಲ್ಲಾ ಎಸ್‌ಯುವಿಗಳನ್ನು ಹಿಂದಿಕ್ಕಿ ಹ್ಯುಂಡೈ ಕ್ರೆಟಾ (Hyundai creta) ಧೂಳೆಬ್ಬಿಸುತ್ತಲೇ ಬಂದಿದೆ. ಈ ಕಾರಿನ ಜನಪ್ರಿಯತೆಯನ್ನು ಗಮನಿಸಿದರೆ, ಹ್ಯುಂಡೈ ಕಂಪನಿಗೆ ಭಾರತದಲ್ಲಿ ಆಧಾರಸ್ತಂಭವಾಗಿ ಮಾರ್ಪಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಪ್ರಾರಂಭದಿಂದಲೂ ಕ್ರೆಟಾದ ಮಾರಾಟ (ದೇಶೀಯ ಹಾಗೂ ರಫ್ತು)ವನ್ನು ನೋಡಿದರೆ ಹುಬ್ಬೇರಿಸುವುದು ಖಚಿತ. ಕೇವಲ ಕ್ರೆಟಾ ಕಾರೊಂದೆ ಕಳೆದ 10 ವರ್ಷಗಳಲ್ಲಿ 15,00,000 ಯುನಿಟ್ ಕಾರುಗಳು ಮಾರಾಟವಾಗಿವೆ.
ಈಗಾಗಲೇ ಮಧ್ಯಮ ಗಾತ್ರದ ಎಸ್‌ಯುವಿ ವಿಭಾಗದಲ್ಲಿ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಟಾಟಾ ಕರ್ವ್‌ನಂತಹ ಪ್ರಮುಖ ಕಾರುಗಳು ತೀರ್ವ ಪೈಪೋಟಿಯೊಂದಿಗೆ ಮುನ್ನುಗ್ಗುತ್ತಿವೆ. ಇವೆಲ್ಲವು ಹ್ಯುಂಡೈ ಕ್ರೆಟಾಗೆ ನೇರ ಪ್ರತಿಸ್ಪರ್ಧಿಗಳಾಗಿದ್ದರೂ, ಹ್ಯುಂಡೈ ಕ್ರೆಟಾ ತೀವ್ರ ಸ್ಪರ್ಧಾತ್ಮಕ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ತನ್ನ ವಿಭಾಗವನ್ನು ಆಳುತ್ತಿದೆ.

2025ರ ಆರ್ಥಿಕ ವರ್ಷದಲ್ಲಿ ಕ್ರೆಟಾ ದೇಶೀಯ ಮಾರುಕಟ್ಟೆಯಲ್ಲಿ 1,94,871 ಯುನಿಟ್ ಕಾರುಗಳು ಮಾರಾಟವಾಗಿವೆ. ಈ ಮೂಲಕ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಮಧ್ಯಮ ಗಾತ್ರದ ಎಸ್‌ಯುವಿಯಾಗಿ ಹ್ಯುಂಡೈ ಕ್ರೆಟಾ ಹೊರಹೊಮ್ಮಿದೆ. ಕ್ರೆಟಾ ನಂತರ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 1,23,946 ಯುನಿಟ್ ಕಾರುಗಳೊಂದಿಗೆ ಹಿಂದಿದ್ದರೆ, ಸೆಲ್ಟೋಸ್ 72,618 ಯುನಿಟ್ ಕಾರುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಹ್ಯುಂಡೈ ಕ್ರೆಟಾ ವಿಶೇಷತೆಗಳು: ಈ ಕಾರು ರೂ.11 ಲಕ್ಷದಿಂದ ರೂ.20.42 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 'ಕ್ರೆಟಾ ಎಲೆಕ್ಟ್ರಿಕ್' ಆವೃತ್ತಿ ಕೂಡ ಇದ್ದು, 17,99,000 ರೂ.ಗಳಿಂದ 23,49,900 ರೂ.ಗಳ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಕ್ರೆಟಾ ಎಲೆಕ್ಟ್ರಿಕ್ 42 ಕಿಲೋವ್ಯಾಟ್ ಮತ್ತು 51.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ.

ಇಂಧನ ಚಾಲಿತ ಕ್ರೆಟಾ ವಿಷಯಕ್ಕೆ ಬಂದರೆ 1.5-ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ (115 ಪಿಎಸ್ ಮತ್ತು 144 ಎನ್ಎಂ) 6-ಸ್ಪೀಡ್ ಎಂಟಿ ಮತ್ತು ಐವಿಟಿ ಆಟೋಮ್ಯಾಟಿಕ್ ಆಯ್ಕೆಗಳನ್ನು ಹೊಂದಿದೆ. 1.5-ಲೀಟರ್ ಕಪ್ಪಾ ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್ (160 ಪಿಎಸ್ ಮತ್ತು 253 ಎನ್ಎಂ) 7-ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್ ನೊಂದಿಗೆ ಬರುತ್ತದೆ.
1.5-ಲೀಟರ್ ಯು 2 ಸಿಆರ್ ಡಿಐ ಡೀಸೆಲ್ ಎಂಜಿನ್ (116 ಪಿಎಸ್ ಮತ್ತು 250 ಎನ್ಎಂ) 6-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಆಯ್ಕೆಗಳನ್ನು ಹೊಂದಿದೆ. ಕ್ರೆಟಾ ಎನ್‌ಲೈನ್ 1.5-ಲೀಟರ್ ಕಪ್ಪಾ ಟರ್ಬೊ ಜಿಡಿಐ ಪೆಟ್ರೋಲ್ ಎಂಜಿನ್ ಅನ್ನು 6-ಸ್ಪೀಡ್ ಎಂಟಿ ಮತ್ತು 7-ಸ್ಪೀಡ್ ಡಿಸಿಟಿ ಆಯ್ಕೆಗಳೊಂದಿಗೆ ಬರುತ್ತದೆ.

ಹೊಸ ಕ್ರೆಟಾ ಎಸ್‌ಯುವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡುಯಲ್ ಡಿಸ್‌ಪ್ಲೇ, ಡುಯಲ್-ಝೋನ್ ಎಸಿ, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಹಾಗೂ ಸನ್‌ರೂಫ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್‌ಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








