5-ಸೀಟರ್.. 10.73 ಲಕ್ಷ, ಈ ಜಗಮೆಚ್ಚಿದ ಹ್ಯುಂಡೈ ಎಸ್‌ಯುವಿಗೆ ಫುಲ್ ಡಿಮ್ಯಾಂಡ್.. ಜನ ಮುಗಿಬಿದ್ದು ಖರೀದಿ!
ಹ್ಯುಂಡೈ ಕ್ರೆಟಾ (Hyundai Creta) ವಿಶ್ವಾಸಾರ್ಹ ಎಸ್‌ಯುವಿ ಎಂದೇ ಹೆಸರುವಾಸಿಯಾಗಿದೆ. ಇದು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಲಭ್ಯವಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ ಸೆಪ್ಟೆಂಬರ್ ತಿಂಗಳಲ್ಲೂ 'ಕ್ರೆಟಾ' ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಸರಿ ಸುಮಾರು 18,861 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಣೆ ಮಾಡಲಾಗಿದೆ. ಇದೇ ವರ್ಷದ ಜೂನ್‌ನಿಂದ ಆಗಸ್ಟ್‌ವರೆಗೂ ಒಟ್ಟು 48,608 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
ಸೆಪ್ಟೆಂಬರ್‌ನಲ್ಲಿ 'ಹ್ಯುಂಡೈ ಕ್ರೆಟಾ' ಮಾರಾಟ ಸಂಖ್ಯೆ ಅಧಿಕಗೊಳ್ಳಲು ನಾನಾ ಕಾರಣಗಳಿವೆ. ಬಹುಮುಖ್ಯವಾಗಿ ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳು ಜಾರಿಗೊಂಡಿವೆ. ಅದರ ಸಂಪೂರ್ಣ ಲಾಭವು 'ಕ್ರೆಟಾ' ಕಾರಿಗೂ ಲಭ್ಯವಿದೆ. ರೂ.72,000 ವರೆಗೆ ಬೆಲೆ ಇಳಿಕೆಯಾಗಿದೆ. ಜೊತೆಗೆ ನವರಾತ್ರಿ (ದಸರಾ) ಹಿನ್ನೆಲೆ, ಈ ಕಾರು ಉತ್ತಮವಾಗಿ ಮಾರಾಟಗೊಂಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಸ್ಟ್ಯಾಂಡರ್ಡ್ ಹ್ಯುಂಡೈ ಕ್ರೆಟಾ ವಿಶೇಷತೆಗಳೇನು:
ಈ ಎಸ್‌ಯುವಿಯು ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಕನಿಷ್ಠ ರೂ.10.73 ಲಕ್ಷ ಮತ್ತು ಗರಿಷ್ಠ ರೂ.20.50 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಇ, ಇಎಕ್ಸ್, ಎಸ್ ಹಾಗೂ ಎಸ್(ಒ) ಒಳಗೊಂಡಂತೆ ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.
ಇದು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್‌ಗಳು ಹಾಗೂ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ರೋಬಸ್ಟ್ ಎಮರಾಲ್ಡ್ ಪರ್ಲ್, ಸ್ಟಾರಿ ನೈಟ್, ಅಟ್ಲಾಸ್ ವೈಟ್, ಅಬಿಸ್ ಬ್ಲ್ಯಾಕ್, ಟೈಟಾನ್ ಗ್ರೇ, ಫಿಯರಿ ರೆಡ್, ರೇಂಜರ್ ಖಾಕಿ, ಟೈಟಾನ್ ಗ್ರೇ ಮ್ಯಾಟ್ & ಬ್ಲ್ಯಾಕ್ ಮ್ಯಾಟ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. 190 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2610 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

ನೂತನ 'ಹ್ಯುಂಡೈ ಕ್ರೆಟಾ' ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 1.5-ಲೀ. ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್, 1.5-ಲೀ. ಟರ್ಬೊ ಪೆಟ್ರೋಲ್ ಮತ್ತು 1.5-ಲೀ. ಡೀಸೆಲ್ ಎಂಜಿನ್‌ನ್ನು ಪಡೆದಿದೆ. 17 ರಿಂದ 21 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 195 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 8.9 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಈ ಕಾರು 5 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದೆ. ಪ್ರವಾಸಕ್ಕೆ ಹೋಗುವ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 433 ಲೀಟರ್‌ನಷ್ಟು ಬೂಟ್ ಸ್ಪೇನ್‌ನ್ನು ಹೊಂದಿದೆ. 10.25 ಇಂಚಿನ ಡುಯಲ್ ಡಿಸ್‌ಪ್ಲೇ (ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್), ಸನ್‌ರೂಫ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ 6 ಏರ್‌ಬ್ಯಾಗ್‌ಗಳು, ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ ಹಿಲ್ ಸ್ಟಾರ್ಟ್ ಅಸಿಸ್ಟ್‌ಗಳನ್ನು ತನ್ನದಾಗಿಸಿಕೊಂಡಿದೆ.

ಹ್ಯುಂಡೈ ಕ್ರೆಟಾ ಇವಿ (Hyundai Creta EV):
ಇದು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಯಾಗಿದೆ. ರೂ.18.02 ಲಕ್ಷದಿಂದ ರೂ.24.55 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಎಕ್ಸಿಕ್ಯೂಟಿವ್, ಸ್ಮಾರ್ಟ್, ಪ್ರೀಮಿಯಂ ಮತ್ತು ಎಕ್ಸಲೆನ್ಸ್ ಎಂಬ ರೂಪಾಂತರಗಳೊಂದಿಗೂ ದೊರೆಯುತ್ತದೆ. ಅತ್ಯುತ್ತಮವಾದ ವಿನ್ಯಾಸವನ್ನು ಹೊಂದಿದೆ. ಅಟ್ಲಾಸ್ ವೈಟ್, ಸ್ಟಾರಿ ನೈಟ್, ಓಷನ್ ಬ್ಲೂ ಮ್ಯಾಟ್, ಟೈಟಾನ್ ಗ್ರೇ ಮ್ಯಾಟ್ ಹಾಗೂ ಅಬಿಸ್ ಬ್ಲ್ಯಾಕ್ ಪರ್ಲ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಹೊಸ 'ಕ್ರೆಟಾ ಎಲೆಕ್ಟ್ರಿಕ್' 42 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 51.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 473 ರಿಂದ 510 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ. 5 ಆಸನವನ್ನು ಹೊಂದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 10.25-ಇಂಚಿನ ಡುಯಲ್ ಸ್ಕ್ರೀನ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌ಗಳು ಹಾಗೂ ಡಿಜಿಟಲ್ ಕೀಯನ್ನು ಪಡೆದಿದೆ.


Click it and Unblock the Notifications








