Maruti Grand Vitara Vs Hyundai Creta: ಕೈಗೆಟುಕುವ 2 ಪ್ರೀಮಿಯಂ ಕಾರುಗಳು: ಯಾವುದು ಬೆಸ್ಟ್?
ಭಾರತದಲ್ಲಿ ಸದ್ಯ ಅತ್ಯಂತ ಬೇಡಿಕೆಯ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ (Hyundai Creta) ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Grand Vitara) ಒಂದಕ್ಕೊಂದು ಸರಿಯಾದ ಪ್ರತಿಸ್ಪರ್ಧಿಗಳಾಗಿದ್ದು, ಹೆಚ್ಚುಕಡಿಮೆ ಅದೇ ಬೆಲೆಯಲ್ಲಿ ಸಿಗುವ ಬೆಸ್ಟ್ ಕಾರುಗಳಾಗಿವೆ. ಯಾವ ಮಟ್ಟಿಗೆ ಅಂದರೆ ಎರಡೂ ಕಾರುಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ತುಸು ಕಷ್ಟವಾಗುವಷ್ಟು. ಹಾಗಾಗಿಯೇ ಬೆಲೆಯಿಂದ ಹಿಡಿದು ಫೀಚರ್ಸ್, ಮೈಲೇಜ್, ಎಂಜಿನ್ ವಿವರಗಳವರೆಗೆ ಎಲ್ಲವನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ. ಬನ್ನಿ ನೋಡೋಣ.
ಫೀಚರ್ಸ್: ವೇರಿಯೆಂಟ್ ಅನ್ನು ಅವಲಂಬಿಸಿ, ಗ್ರ್ಯಾಂಡ್ ವಿಟಾರಾ 6-ಸ್ಪೀಕರ್ ಮ್ಯೂಸಿಕ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಪನೋರಮಿಕ್ ಸನ್‌ರೂಫ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ವೈರ್‌ಲೆಸ್ ಅನ್ನು ಬೆಂಬಲಿಸುವ 9-ಇಂಚಿನ ಹೆಚ್‌ಡಿ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಹ್ಯುಂಡೈ ಕ್ರೆಟಾದಲ್ಲಿ ಡ್ಯುಯಲ್ 10.25 - ಇಂಚಿನ ಡಿಸ್ಪ್ಲೇಗಳು (ಡ್ರೈವರ್ ಡಿಸ್ಪ್ಲೆ ಒಂದು), ವೈರ್ ಲೆಸ್ ಫೋನ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಸಂಪರ್ಕಿತ ಕಾರ್ ಟೆಕ್ ಮತ್ತು 8 - ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಡ್ಯುಯಲ್ ಜೋನ್ ಆಟೋ ಎಸಿ, ಮತ್ತು 360 ಡಿಗ್ರಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ದೊಡ್ಡ ಪನಾರಮಿಕ್ ಸನ್‌ರೂಫ್ ಅನ್ನು ಸಹ ಪಡೆದಿದೆ.
ಮೈಲೇಜ್: ಮಾರುತಿ ಗ್ರ್ಯಾಂಡ್ ವಿಟಾರಾ 1.5-ಲೀಟರ್ ಪೆಟ್ರೋಲ್ ಹಾಗೂ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಪೆಟ್ರೋಲ್ ಆಟೋಮ್ಯಾಟಿಕ್‌ನಲ್ಲಿ 20.58 ಕಿ.ಮೀ., ಪೆಟ್ರೋಲ್ ಆಲ್ ವ್ಹೀಲ್ ಡ್ರೈವ್‌ನಲ್ಲಿ 19.38 ಕಿ.ಮೀ., ಪೆಟ್ರೋಲ್ ಮ್ಯಾನುವಲ್‌ನಲ್ಲಿ 21.11 ಕಿ.ಮೀ., CNG ನಲ್ಲಿ 26.6 ಕಿ.ಮೀ/ಕೆ.ಜಿ, ಪೆಟ್ರೋಲ್ ಹೈಬ್ರಿಡ್‌ನಲ್ಲಿ 27.97 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ.

ಹ್ಯುಂಡೈ ಪ್ರಕಾರ ಕ್ರೆಟಾ ಕಾರು, 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮ್ಯಾನುವಲ್‌ನಲ್ಲಿ 17.4 ಕಿ.ಮೀ ಹಾಗೂ ಸಿವಿಟಿನಲ್ಲಿ 17.7 ಕಿ.ಮೀ ಮೈಲೇಜ್ ನೀಡುತ್ತದೆ. 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಲ್ಲಿ 18.4 ಕಿ.ಮೀ. ಹಾಗೂ 1.5-ಲೀಟರ್ ಡೀಸೆಲ್ ಮ್ಯಾನುವಲ್‌ನಲ್ಲಿ 21.8 ಕಿ.ಮೀ, ಆಟೋಮ್ಯಾಟಿಕ್‌ನಲ್ಲಿ 19.1 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಸುರಕ್ಷತೆ: ವೇರಿಯೆಂಟ್ ಅವಲಂಬಿಸಿ ಕ್ರೆಟಾದಲ್ಲಿ 6 ಏರ್ ಬ್ಯಾಗ್‌ಗಳು, ರಿಯರ್ ಡಿಸ್ಕ್ ಬ್ರೇಕ್‌ಗಳು, ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್), ಕ್ರೂಸ್ ಕಂಟ್ರೋಲ್, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವೇರಿಯೆಂಟ್ ಅವಲಂಬಿಸಿ ಗ್ರ್ಯಾಂಡ್ ವಿಟಾರಾ ಕಾರಿನಲ್ಲಿ 6 ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್, ಇಎಸ್‌ಪಿ, ಹಿಲ್-ಹೋಲ್ಡ್, ಇಬಿಡಿಯೊಂದಿಗೆ ಎಬಿಎಸ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, ಐಎಸ್ ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್, 360-ಡಿಗ್ರಿ ಕ್ಯಾಮೆರಾ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಬೆಲೆ: ಮಾರುತಿ ಗ್ರ್ಯಾಂಡ್ ವಿಟಾರಾ ಬೆಲೆಗಳು ಮೂಲ ಪೆಟ್ರೋಲ್ ಮ್ಯಾನುವಲ್ (ಸಿಗ್ಮಾ) ರೂಪಾಂತರಕ್ಕೆ 11.19 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ. ಟಾಪ್-ಸ್ಪೆಕ್ ಸ್ಟ್ರಾಂಗ್ ಹೈಬ್ರಿಡ್ ಆಟೋಮ್ಯಾಟಿಕ್ (ಆಲ್ಫಾ ಪ್ಲಸ್) ರೂಪಾಂತರಕ್ಕೆ 20.09 ಲಕ್ಷ ರೂ.ಗಳವರೆಗೆ ಇದೆ. ಸಿಎನ್‌ಜಿ ರೂಪಾಂತರಗಳು 13.25 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ).
2024ರ ಹ್ಯುಂಡೈ ಕ್ರೆಟಾ ಮೂಲ ಪೆಟ್ರೋಲ್ ಮ್ಯಾನುವಲ್ ಕಾರಿನ ಬೆಲೆಯು ರೂ.11.11 (ಎಕ್ಸ್ ಶೋರೂಂ) ಲಕ್ಷಗಳಾದರೆ, ಟಾಪ್ ಎಂಡ್ ಟರ್ಬೊ-ಪೆಟ್ರೋಲ್ ಮತ್ತು ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಗಳಿಗೆ ರೂ. 20.50 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಹ್ಯುಂಡೈ ಕ್ರೆಟಾದ ನೈಟ್ ಆವೃತ್ತಿಯ ಬೆಲೆಯು ದರದಂತೆ ರೂ.14.51 (ಎಕ್ಸ್ ಶೋರೂಂ) ಲಕ್ಷಗಳಾಗಿದೆ.


Click it and Unblock the Notifications