ಕೇವಲ 5.49 ಲಕ್ಷ ಬೆಲೆಯ ಪ್ರೀಮಿಯಂ ಕಾರು... 27.1 ಕಿ.ಮೀ ಮೈಲೇಜ್: ಫುಲ್ ಡಿಮ್ಯಾಂಡ್
ಹುಂಡೈ ಎಕ್ಸ್‌ಟರ್ (Hyundai Exter) ಒಂದು ಸಣ್ಣ ಕ್ರಾಸ್‌ಒವರ್ ಆಗಿದ್ದು, ಹ್ಯಾಚ್‌ಬ್ಯಾಕ್‌ನ ಬೆಲೆಗೆ ಎಸ್‌ಯುವಿಯ ಡಿಸೈನ್ ಒಳಗೊಂಡಿದೆ. ಇದರ ಎತ್ತರದ ಬಾಕ್ಸಿ ವಿನ್ಯಾಸವು ವಿಶಾಲವಾದ ಕ್ಯಾಬಿನ್ ಮತ್ತು ಬೂಟ್ ಸ್ಪೇಸ್ ಅನ್ನು ನೀಡುತ್ತದೆದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ ಮತ್ತು ಸನ್‌ರೂಫ್ ಅನ್ನು ಒಳಗೊಂಡಿರುವುದು ಇದರ ಹೈಲೆಟ್ ಆಗಿದೆ. ಇದರ ಬೆಲೆಯು ರೂ. 5.49 ಲಕ್ಷದಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ ರೂ. 9.61 ಲಕ್ಷದವರೆಗೆ (ಎಕ್ಸ್ ಶೋರೂಂ ಬೆಲೆಗಳು) ಇದೆ.
ಹೊಸ ಹ್ಯುಂಡೈ ಎಕ್ಸ್‌ಟರ್ ಗಾತ್ರದ ವಿಷಯಕ್ಕೆ ಬಂದರೆ 3,815 ಮಿ.ಮೀ ಉದ್ದ, 1,710 ಮಿ.ಮೀ ಅಗಲ ಮತ್ತು 1,631 ಎಂಎಂ ಎತ್ತರವಿದೆ. 185 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ 2,450 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಡಿಸೈನ್ ವಿಷಯದಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, ಶಾರ್ಕ್ ಫಿನ್ ಆಂಟೆನಾ, ಎಲ್ಇಡಿ ಟೈಲ್‌ಲೈಟ್‌ಗಳು, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು 15 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ.

ಹ್ಯುಂಡೈ ಎಕ್ಸ್‌ಟರ್ ಅನ್ನು EX, EX(O), S, S(O), SX, SX(O), SX(O) ಕನೆಕ್ಟ್ ಎಂಬ ಏಳು ವೇರಿಯೆಂಟ್‌ಗಳಲ್ಲಿ ನೀಡುತ್ತಿದೆ. ಹ್ಯುಂಡೈ ಎಕ್ಸ್‌ಟರ್ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಆಟೋ ಎಸಿ ಹಾಗೂ ಸನ್‌ರೂಫ್, ಸೆಮಿ-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹ್ಯುಂಡೈ ಎಕ್ಸ್‌ಟರ್ 1.2 - ಲೀಟರ್ 4 - ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ ಸಿಎನ್‌ಜಿ ಎಂಜಿನ್ ಹೊಂದಿದೆ. ಈ ಎಂಜಿನ್ 82 ಬಿಹೆಚ್ ಪವರ್ ಮತ್ತು 113.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಪ್ರತಿ ಲೀಟರ್‌ಗೆ 19.2 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು ಸುಗಮ ಚಾಲನಾ ಅನುಭವವನ್ನು ನೀಡಲಿದ್ದು, ನಗರ ಪ್ರಯಾಣಕ್ಕೆ ಸೂಕ್ತವಾಗಿದೆ.

ಈ ಎಸ್‌ಯುವಿಯು ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದ್ದು, 1.2 - ಲೀಟರ್ ಬೈ - ಫ್ಯೂಯಲ್ (ಪೆಟ್ರೋಲ್ ಜೊತೆಗೆ ಸಿಎನ್‌ಜಿ) ಎಂಜಿನ್ 68 ಬಿಹೆಚ್ ಪವರ್ ಮತ್ತು 95.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಮಾತ್ರ ಬರುತ್ತದೆ. ಪ್ರತಿ ಕೆಜಿ ಸಿಎನ್‌ಜಿಗೆ 27.1 ಕಿ.ಮೀ ಮೈಲೇಜ್ ನೀಡುವುದಾಗಿ ಹ್ಯುಂಡೈ ಕಂಪನಿ ಹೇಳಿಕೊಂಡಿದೆ.
ಸುರಕ್ಷತೆ ವಿಷಯಕ್ಕೆ ಬಂದರೆ ಆರು ಏರ್‌ಬ್ಯಾಗ್‌ಗಳು, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಜೊತೆಗೆ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು, ಮೂರು - ಪಾಯಿಂಟ್ ಸೀಟ್‌ಬೆಲ್ಟ್‌ಗಳು (ಎಲ್ಲಾ ಸೀಟುಗಳು) ಮತ್ತು ತುರ್ತು ಬ್ರೇಕಿಂಗ್ ಸ್ಟಾಪ್ ಸಿಗ್ನಲ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಬರುತ್ತವೆ.

ಟಾಪ್ ವೇರಿಯೆಂಟ್‌ಗಳಲ್ಲಿ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM) ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಡೈನಾಮಿಕ್ ಮಾರ್ಗಸೂಚಿಗಳೊಂದಿಗೆ ಹಿಂಭಾಗದ ಕ್ಯಾಮೆರಾ ಮತ್ತು ಡ್ಯಾಶ್‌ಕ್ಯಾಮ್‌ನಂತಹ ವೈಶಿಷ್ಟ್ಯಗಳು ಟಾಪ್ ರೂಪಾಂತರಗಳಲ್ಲಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಈ ಕಾರಿನ ಕ್ಯಾಬಿನ್ ಅನುಭವ, ಸ್ಥಳ, ಪ್ರಾಯೋಗಿಕತೆ, ಆರಾಮ, ಚಾಲನೆಯ ಸುಲಭತೆ ಮತ್ತು ಬೂಟ್ ಸ್ಪೇಸ್ ನಂತಹ ಬಹಳಷ್ಟು ವಿಷಯಗಳನ್ನು ಎಕ್ಸ್‌ಟರ್ ಉತ್ತಮವಾಗಿ ಪಡೆದಿದೆ. ವೈಶಿಷ್ಟ್ಯಗಳು ಕೂಡ ತುಂಬಾ ಉತ್ತಮವಾಗಿದೆ, ಬೆಲೆ ಶ್ರೇಣಿಯಲ್ಲಿ ಇದನ್ನು ಸೋಲಿಸುವುದು ತುಂಬಾ ಕಷ್ಟ. ಈ ಪುಟ್ಟ ಎಸ್‌ಯುವಿ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








