Hyundai: ಹೊಸ ಆಯ್ಕೆಯಲ್ಲಿ ಬಂತು ಜನಪ್ರಿಯ ಹ್ಯುಂಡೈ ಎಕ್ಸ್‌ಟರ್‌ ಎಸ್‌ಯುವಿ.. ರೂ.7.98 ಲಕ್ಷ, 5-ಸೀಟರ್!

ಹ್ಯುಂಡೈ ಎಕ್ಸ್‌ಟರ್‌ (Hyundai Exter) ವಿಶ್ವಾಸಾರ್ಹ ಮೈಕ್ರೋ ಎಸ್‌ಯುವಿಯಾಗಿದೆ. ಆದರೂ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಜುಲೈನಲ್ಲಿ ಕೇವಲ 5,075 ಯುನಿಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗಿದೆ. ಇನೇನು ಗೌರಿ-ಗಣೇಶ, ದಸರಾ ಹಾಗೂ ದೀಪಾವಳಿ ಹಬ್ಬಗಳು ಬರಲಿದ್ದು, ಈ ಎಕ್ಸ್‌ಟರ್‌ನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ. ಅದಕ್ಕಾಗಿ 'ಪ್ರೊ ಪ್ಯಾಕ್' ಹೆಸರಿನ ಲಿಮಿಟೆಡ್ ಎಡಿಷನ್ ಸ್ಟೈಲಿಂಗ್ ಪ್ಯಾಕೇಜ್‌ನ್ನು ಪರಿಚಯಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಈ ಪ್ರೊ ಪ್ಯಾಕ್ (Pro Pack) ಹ್ಯುಂಡೈ ಎಕ್ಸ್‌ಟರ್‌ ಕಾರಿನ ಎಸ್ ಪ್ಲಸ್ ರೂಪಾಂತರ (ವೇರಿಯೆಂಟ್) ಹಾಗೂ ಅದಕ್ಕಿಂತ ಮೇಲ್ಪಟ್ಟ ರೂಪಾಂತರಗಳಲ್ಲಿ ಮಾತ್ರ ಲಭ್ಯವಾಗುತ್ತದೆ. ಇದರೊಂದಿಗೆ ಎಸ್ಎಕ್ಸ್ (ಒ) ಎಎಂಟಿ ರೂಪಾಂತರದಲ್ಲಿ ಹೊಸದಾಗಿ ಡ್ಯಾಶ್‌ಕ್ಯಾಮ್'ನ್ನು ಅಳವಡಿಕೆ ಮಾಡಲಾಗಿದೆ. ಮೊದಲಿಗೆ ಡ್ಯಾಶ್‌ಕ್ಯಾಮ್ ಎಂಬುದು ಎಸ್ಎಕ್ಸ್ ಟೆಕ್ ಮತ್ತು ಎಸ್ಎಕ್ಸ್ ಕನೆಕ್ಟ್ ಎಂಬ ರೂಪಾಂತರಗಳಲ್ಲಿ ದೊರೆಯುತ್ತಿತ್ತು.

Hyundai Exter Pro Pack Launched In India Rs 7 98 Lakh Starting Price Details

ನೂತನ ಪ್ರೊ ಪ್ಯಾಕ್ ಹೊಂದಿರುವ ಹ್ಯುಂಡೈ ಎಕ್ಸ್‌ಟರ್‌ನ ರೂಪಾಂತರಗಳು, ರೂ.7.98 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿವೆ. ವಿಶೇಷವಾಗಿ ಎಕ್ಸ್‌ಟರ್‌ ಆಕರ್ಷಕವಾಗಿ ಕಾಣುವಂತೆ ಮಾಡಲು ಪ್ರೊ ಪ್ಯಾಕ್‌ನಡಿ ಬ್ಲ್ಯಾಕ್ ವೀಲ್ ಆರ್ಚ್ ಕ್ಲಾಡಿಂಗ್ ಹಾಗೂ ಸಿಲ್ವರ್ ಸೈಡ್ ಸಿಲ್ ಗಾರ್ನಿಶ್‌ ಎಂಬ ಅಲಂಕಾರಿಕ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಜೊತೆಗೆ ಹೊಸದಾದ 'ಟೈಟಾನ್ ಮ್ಯಾಟ್ ಗ್ರೇ' ಎಂಬ ಬಣ್ಣದ ಆಯ್ಕೆಯಲ್ಲಿಯೂ ಸಿಗುತ್ತದೆ.

ಹ್ಯುಂಡೈ ಎಕ್ಸ್‌ಟರ್‌ಗಾಗಿ ಪ್ರೊ ಪ್ಯಾಕ್‌ನ್ನು ತರಲಾಗಿದ್ದರೂ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರ 1.2-ಲೀಟರ್ ಪೆಟ್ರೋಲ್ ಎಂಜಿನ್, 81 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 113 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

Hyundai Exter Pro Pack Launched In India Rs 7 98 Lakh Starting Price Details

ಮತ್ತೊಂದು 1.2-ಲೀಟರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್, 67 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 95 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಸಿಗುತ್ತದೆ. ಈ ಕಾರು, 19 ರಿಂದ 27 ಕಿ.ಮೀವರೆಗೂ ಮೈಲೇಜ್ ಕೊಡುತ್ತದೆ. 37 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ಈ ಕಾರು 150 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 13.5 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. 3,815 ಎಂಎಂ ಉದ್ದ, 1,710 ಎಂಎಂ ಅಗಲ ಮತ್ತು 1,631 ಎಂಎಂ ಎತ್ತರವು ಇದೆ. 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,450 ಎಂಎಂ ವೀಲ್‌ಬೇಸ್‌ನ್ನುಒಳಗೊಂಡಿದೆ. ಸರಿ ಸುಮಾರು 1018 ಕೆಜಿಯಷ್ಟು ತೂಕವಿದೆ.

Hyundai Exter Pro Pack Launched In India Rs 7 98 Lakh Starting Price Details

ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು. ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಹೋಗುವಾಗ ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 391 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ.

ಎಕ್ಸ್‌ಟರ್‌ಗಾಗಿ ಪ್ರೊ ಪ್ಯಾಕ್‌ನ್ನು ಪರಿಚಯಿಸಿದರೂ, ಕ್ಯಾಬಿನ್ ವಿನ್ಯಾಸ ಹಾಗೂ ವೈಶಿಷ್ಟ್ಯಗಳಲ್ಲಿ ನವೀಕೃತ ಮಾರ್ಪಾಡುಗಳನ್ನು ಹೊಂದಿಲ್ಲ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಸನ್‌ರೂಫ್, ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಕ್ರೂಸ್ ಕಂಟ್ರೋಲ್ ಹಾಗೂ ರೇರ್ ಎಸಿ ವೆಂಟ್‌ನಂತಹ ವೈಶಿಷ್ಟ್ಯಗಳನ್ನೇ ಹೊಂದಿದೆ.

ಈ ಕಾರು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಒದಗಿಸಬಲ್ಲದು. 6-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ಹಿಲ್ ಅಸಿಸ್ಟ್ ಕಂಟ್ರೋಲ್‌ನಂತಹ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಡಿದೆ.

Article Published On: Friday, August 22, 2025, 17:45 [IST]
English summary
Hyundai exter pro pack launched in india rs 7 98 lakh starting price details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+