7 ಲಕ್ಷದೊಳಗೆ ಸಿಗುವ 2 ಬೆಸ್ಟ್ ಕಾರುಗಳು: ಸಖತ್ ಪೈಪೋಟಿ... 27 ಕಿ.ಮೀ ಮೈಲೇಜ್, ಯಾವುದು ಬೆಸ್ಟ್?
ಭಾರತದಲ್ಲಿ ಹ್ಯಾಚ್‌ಬ್ಯಾಕ್‌ಗಳಿಗೆ ಭಾರೀ ಬೇಡಿಕೆ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಯಾವ ಹ್ಯಾಚ್‌ಬ್ಯಾಕ್ ಕಾರನ್ನು ಖರೀದಿಸಬೇಕು, ಬೆಲೆಗೆ ತಕ್ಕ ಮೌಲಚ್ಯ ನೀಡುವ ಕಾರು ಯಾವುದು ಎಂಬ ಗೊಂದಲ ಹಲವರಲ್ಲಿದೆ. ಅಂತವರಿಗಾಗಿಯೇ 7 ಲಕ್ಷದೊಳಿಗಿನ ಎಕ್ಸ್ ಶೋರೋಂ ಬೆಲೆಯಲ್ಲಿ ಎರಡು ಬ್ರಾಂಡ್‌ಗಳಿಂದ ಬೆಸ್ಟ್ ಎಂಟ್ರಿ ಲೆವಲ್ ಕಾರುಗಳನ್ನು ಇಲ್ಲಿ ಹೋಲಿಕೆ ಮಾಡಿದ್ದೇವೆ. ಅದರಲ್ಲಿ ಹ್ಯುಂಡೈ ಎಕ್ಸ್‌ಟರ್ (Hyundai Exter) ಮೈಕ್ರೋ ಎಸ್‌ಯುವಿಯಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿ ಟಾಟಾ ಪಂಚ್ ನಿಲ್ಲುತ್ತದೆ. ಈ ಎರಡೂ ಕಾರುಗಳ ನಡುವಿನ ಬೆಲೆ, ಫೀಚರ್ಸ್, ಎಂಜಿನ್ ನಡುವಿನ ವ್ಯತ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.
ಎಂಜಿನ್: ಹ್ಯುಂಡೈ ಎಕ್ಸ್‌ಟರ್ ಕಾರು 1.2-ಲೀಟರ್, 4-ಸಿಲಿಂಡರ್ ಎಂಜಿನ್‌ನೊಂದಿಗೆ ಬರುತ್ತದೆ. ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಹುಂಡೈ ಎಕ್ಸ್‌ಟರ್‌ನ ಪೆಟ್ರೋಲ್ ಎಂಜಿನ್ 81.8 bhp ಪವರ್ ಮತ್ತು 113.8 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಕ್ಸ್‌ಟರ್ ಕಾರಿನ CNG ಆವೃತ್ತಿಯು 67.7 bhp ಪವರ್ ಮತ್ತು 95.2 Nm ಟಾರ್ಕ್ ಉತ್ಪಾದಿಸುತ್ತದೆ.

ಎಕ್ಸ್‌ಟರ್ ಪೆಟ್ರೋಲ್ ಅನ್ನು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‌ಟಿ ಗೇರ್‌ಬಾಕ್ಸ್‌ನೊಂದಿಗೆ ನೀಡಲಾಗುತ್ತದೆ. ಆದರೆ ಸಿಎನ್‌ಜಿ ಆವೃತ್ತಿಯಲ್ಲಿ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ನೀಡಲಾಗಿದೆ. ಎಕ್ಸ್‌ಟರ್ ಪೆಟ್ರೋಲ್ ಮಾದರಿಯು 19.4 ಕಿ.ಮೀ ಮೈಲೇಜ್ ನೀಡಿದರೆ, AMT ಮಾದರಿ 19.2 ಕಿ.ಮೀ ಮೈಲೇಜ್ ನೀಡುತ್ತದೆ.ಇನ್ನು CNG ಆವೃತ್ತಿಯು 27.1 ಕಿ.ಮೀ ಮೈಲೇಜ್ ನೀಡುತ್ತದೆ.
ಟಾಟಾ ಪಂಚ್ ವಿಷಯಕ್ಕೆ ಬಂದರೆ 1.2-ಲೀ. ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹಾಗೂ ಸಿಎನ್‌ಜಿ ಆಯ್ಕೆಯನ್ನು ಪಡೆದಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಹೊಂದಿದೆ. ಪೆಟ್ರೋಲ್ ಮಾಡೆಲ್ 18.8 ರಿಂದ 19-20 ಕೆಎಂಪಿಎಲ್ ಹಾಗೂ ಸಿಎನ್‌ಜಿ ಮಾಡೆಲ್ 26.99 ಕೆಎಂ/ಕೆಜಿ ಮೈಲೇಜ್ ಕೊಡುತ್ತದೆ.

ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ಕೂಡ ಹೊಂದಿದ್ದು, ಈ ಕಾರಿನ 25 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 315 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಮತ್ತೊಂದು 35 ಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ಭರ್ತಿ ಚಾರ್ಜ್‌ನಲ್ಲಿ 421 ಕಿಲೋಮೀಟರ್ ಓಡುತ್ತದೆ.
ಫೀಚರ್ಸ್: ಈ ಎಕ್ಸ್‌ಟರ್ ಮೈಕ್ರೋ ಎಸ್‍ಯುವಿಯಲ್ಲಿ ಕೆಲವು ವಿಭಾಗ-ಮೊದಲ ಫೀಚರ್ಸ್ ಗಳಲ್ಲಿ, ಶಾರ್ಕ್ ಫಿನ್ ಆಂಟೆನಾ, ಫುಟ್‌ವೆಲ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌ಗಳು, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಅಂತರ್ನಿರ್ಮಿತ ಡ್ಯಾಶ್‌ಕ್ಯಾಮ್, ಆನ್‌ಬೋರ್ಡ್ ನ್ಯಾವಿಗೇಷನ್ ಮತ್ತು ಹೆಚ್ಚಿನವು ಸೇರಿವೆ. ಇತರ ಗಮನಾರ್ಹ ವೈಶಿಷ್ಟ್ಯಗಳೆಂದರೆ 4.2-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, Apple CarPlay ಮತ್ತು Android Auto ಜೊತೆಗಿನ 8-ಇಂಚಿನ ಇನ್ಫೋಟೈನ್‌ಮೆಂಟ್ ಯೂನಿಟ್ ಅನ್ನು ಹೊಂದಿದೆ.

ಟಾಟಾ ಪಂಚ್ ಮೈಕ್ರೋ ಎಸ್‍ಯುವಿಯ ವಿಷಯಕ್ಕೆ ಬಂದರೆ, ಇದರಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿದೆ. ಇದರೊಂದಿಗೆ ಕೀಲೆಸ್ ಎಂಟ್ರಿ ಮತ್ತು ಗೋ, ಕ್ರೂಸ್ ಕಂಟ್ರೋಲ್, ಆಟೋ ಕ್ಲೈಮೇಟ್ ಕಂಟ್ರೋಲ್, ಪವರ್-ಫೋಲ್ಡಿಂಗ್ ವಿಂಗ್ ಮಿರರ್‌ಗಳು, ರಿಯರ್‌ವ್ಯೂ ಅನ್ನು ಒಳಗೊಂಡಿದೆ.
ಬೆಲೆ: ಸಾಮಾನ್ಯ ಪಂಚ್ ರೂ.6.20 ರಿಂದ ರೂ.10.32 ಲಕ್ಷ ಹಾಗೂ ಎಲೆಕ್ಟ್ರಿಕ್ ಚಾಲಿತ ಮಾಡೆಲ್ ರೂ.9.99 ರಿಂದ ರೂ.14.44 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಅದೇ ರೀತಿಯಲ್ಲಿ ಹ್ಯುಂಡೈ ಎಕ್ಸ್‌ಟರ್ ರೂ.6.21 ಲಕ್ಷದಿಂದ ರೂ.10.51 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಟಾಟಾ ಪಂಚ್ ಹಾಗೂ ಹ್ಯುಂಡೈ ಎಕ್ಸ್‌ಟರ್ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದು.


Click it and Unblock the Notifications