ಹೊಸ ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿ ಅನಾವರಣ: 2 ಕುಟುಂಬ ಪ್ರಯಾಣಿಸಬಹುದು!

ಜನಪ್ರಿಯ ದಕ್ಷಿಣ ಕೊರಿಯಾದ ವಾಹನ ತಯಾರಕರ ಹ್ಯುಂಡೈ ಭಾರತ್ ಮೊಬಿಲಿಟಿ ಶೋನಲ್ಲಿ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯ ಜೊತೆ ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕೂಡ ಪ್ರದರ್ಶಿಸಿದ್ದಾರೆ. ಸದ್ಯಕ್ಕೆ, ಭಾರತದಲ್ಲಿ Ioniq 9 ಅನ್ನು ತರಲು ಕಂಪನಿಯು ಯಾವುದೇ ಯೋಜನೆಯನ್ನು ಹೊಂದಿಲ್ಲ. ಹ್ಯುಂಡೈ ಬ್ರ್ಯಾಂಡ್‌ನ Ioniq 9 ಎಲೆಕ್ಟ್ರಿಕ್ ಕಾರನ್ನು ದಕ್ಷಿಣ ಕೊರಿಯಾ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಆರಂಭದಲ್ಲಿ ಪರಿಚಯಿಸಲಾಗುವುದು, ನಂತರ ಇತರ ದೇಶಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 110.3kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದು WLTP ಪ್ರಕಾರ, 620 km ರೇಂಜ್ ಅನ್ನು ನೀಡುತ್ತದೆ. ಈ ಹೊಸ ಹ್ಯುಂಡೈ ಎಲೆಕ್ತ್ರಿಕ್ ಎಸ್‍ಯುವಿಯು ಲಾಂಗ್ ರೇಂಜ್ ಮತ್ತು ಪರ್ಫಾಮೆನ್ಸ್ ಎಂಬ ಎರಡೂ ಟ್ರಿಮ್‌ಗಳನ್ನು ಒಳಗೊಂಡಿದೆ. ಈ ಹೊಸ ಎಲೆಕ್ಟ್ರಿಕ್ ಎಸ್‍ಯುವಿಯು FWD ಮತ್ತು AWD ಸೆಟಪ್‌ಗಳೊಂದಿಗೆ ಲಭ್ಯವಿದೆ.

Hyundai Ioniq 9

ಲಾಂಗ್ ರೇಂಜ್ RWD ಆವೃತ್ತಿಯು 218 bhp ಪವರ್ ಮತ್ತು 350 Nm ಟಾರ್ಕ್ ಉತ್ತಮವಾದ ಹಿಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಬರುತ್ತದೆ. ಈ ಮಾದರಿಯು 9.4 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತದೆ. ಇನ್ನು ಲಾಂಗ್ ರೇಂಜ್ AWD ರೂಪಾಂತರವು ಮುಂಭಾಗದ ಆಕ್ಸಲ್ ಮೌಂಟೆಡ್ ಮೋಟಾರ್ ಅನ್ನು ಹೊಂದಿದೆ

ಲಾಂಗ್ ರೇಂಜ್ AWD ರೂಪಾಂತರ ಮಾದರಿಯು 95 bhp ಪವರ್ ಮತ್ತು 255 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮಾದರಿಯು 6.7 ಸೆಕೆಂಡುಗಳಲ್ಲಿ 0 ರಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಪರ್ಫಾಮೆನ್ಸ್ ರೂಪಾಂತರವು ಮುಂಭಾಗ ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 218bhp ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ. ದು ಲ್ಯಾಟರಲ್ ವಿಂಡ್ ಸ್ಟೆಬಿಲಿಟಿ ಕಂಟ್ರೋಲ್, ಡೈನಾಮಿಕ್ ಟಾರ್ಕ್ ವೆಕ್ಟರಿಂಗ್ ಮತ್ತು ಟೆರೈನ್ ಟ್ರಾಕ್ಷನ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

Hyundai Ioniq 9

ಜಾಗತಿಕವಾಗಿ, ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿ 6 ಮತ್ತು 7 ಸೀಟುಗಳ ಆಯ್ಕೆಗಳೊಂದಿಗೆ ಬರುತ್ತದೆ, ಇನ್ನು ಈ ಎಸ್‍ಯುವಿಯು ಮೊದಲ ಸಾಲಿನ ಸೀಟುಗಳು ಮಸಾಜ್ ಫಂಕ್ಷನ್ ಅನ್ನು ಹೊಂದಿದ್ದರೆ, ಮಧ್ಯದ ಸಾಲಿನ ಸೀಟುಗಳು ಸ್ಥಿರವಾದಾಗ ಮೂರನೇ ಸಾಲನ್ನು ತಿರುಗಿಸಬಹುದು ಮತ್ತು ಎದುರು ಸೀಟುಗಳಾಗಿ ಪರಿವರ್ತಿಸಬಹುದು.

ಈ ಎಲೆಕ್ಟ್ರಿಕ್ ಎಸ್‍ಯುವಿ 12-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, ರೂಫ್ ಮೌಂಟೆಡ್ AC ವೆಂಟ್‌ಗಳು, ಆಂಬಿಯೆಂಟ್ ಲೈಟಿಂಗ್, ಬಹು ಕ್ಯಾಮೆರಾಗಳು ಮತ್ತು ಸೆನ್ಸರ್‌ಗಳೊಂದಿಗೆ ADAS ಸೂಟ್‌ಗಳಂತಹ ಹಲವಾರು ಸುಧಾರಿತ ಫೀಚರ್ಸ್ ಗಳನ್ನು ಹೊಂದಿವೆ. ಇದರ ಜೊತೆಗೆ 10 ಏರ್‌ಬ್ಯಾಗ್‌ಗಳು ಮತ್ತು ಎಲ್ಲಾ ಸೀಟುಗಳ ಆಸನಗಳಲ್ಲಿ ಡ್ಯುಯಲ್ USB-C ಪೋರ್ಟ್‌ಗಳನ್ನು ನೀಡಿದೆ.

Hyundai Ioniq 9

ಹೊಸ ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿ E-GMP ಮಾಡ್ಯುಲರ್ ಜನನ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, ಇದೇ ಪ್ಲಾಟ್‌ಫಾರ್ಮ್ ಅನ್ನು ಕಿಯಾ EV9 ಎಲೆಕ್ಟ್ರಿಕ್ ಎಸ್‍ಯುವಿ ಬಳಸುತ್ತದೆ. ಇನ್ನು ಈ ಹೊಸ ಹ್ಯುಂಡೈ Ioniq 9 ಎಲೆಕ್ಟ್ರಿಕ್ ಎಸ್‍ಯುವಿಯು ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳಲ್ಲಿ ಹ್ಯುಂಡೈನ ಪ್ಯಾರಾಮೆಟ್ರಿಕ್ ಪಿಕ್ಸೆಲ್ ಇನ್‌ಸರ್ಟ್‌ಗಳು ಮತ್ತು 19-ಇಂಚಿನ (ಸ್ಟ್ಯಾಂಡರ್ಡ್) ನಿಂದ 21-ಇಂಚಿನವರೆಗಿನ ಅಲಾಯ್ ವ್ಹೀಲ್ ಅನ್ನು ಹೊಂದಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, January 20, 2025, 16:49 [IST]
English summary
Hyundai ioniq 9 electric suv unveiled at auto expo 2025 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+