Hyundai: ಹೊಸ ಹ್ಯುಂಡೈ ಸಿಎನ್‌ಜಿ ಕಾರು ಬಿಡುಗಡೆ: 7.50 ಲಕ್ಷ ಬೆಲೆ... 27.1 ಕಿ.ಮೀ ಮೈಲೇಜ್

ಹ್ಯುಂಡೈ ಕೊನೆಗೂ ತನ್ನ ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ. ಹೊಸ ತಂತ್ರಜ್ಞಾನದೊಂದಿಗೆ ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ (Hyundai Exter Hy-CNG Duo) ಕಾರನ್ನು ಬಿಡುಗಡೆ ಮಾಡಿದೆ. ಈ ಹೈ-ಸಿಎನ್‌ಜಿ ಡ್ಯುಯೊ ದೊಡ್ಡ ಸಿಲಿಂಡರ್ ಬದಲಿಗೆ ಎರಡು ಸಣ್ಣ ಸಿಎನ್‌ಜಿ ಸಿಲಿಂಡರ್‌ಗಳನ್ನು ಪಡೆದಿದೆ. ಹ್ಯುಂಡೈ ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್ ಅನ್ನು ಸಹ ಇದರಲ್ಲಿ ನೀಡಿದೆ. ಇದು ಪೆಟ್ರೋಲ್‌ನಿಂದ ಸಿಎನ್‌ಜಿಗೆ ಬದಲಾಯಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂದು ಕಂಪನಿ ಹೇಳಿದೆ.

ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊ ಕಾರನ್ನು ಹೊಸ ಟ್ರಿಮ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಎಕ್ಸ್ಟರ್ ಹೈ-ಸಿಎನ್ ಜಿ ಡ್ಯುಯೊ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಕ್ಸ್‌ಟರ್ ಹೈ-ಸಿಎನ್‌ಜಿ ಡ್ಯುಯೊದ ಹೊಸ 'EX' ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.7.50 ಲಕ್ಷಗಳಾಗಿದೆ.

hyundai-launched-new-exter-ex-hy-cng-duo-in-india

ಈ EX ವೇರಿಯೆಂಟ್, ಡ್ರೈವರ್ ಸೀಟ್ ಎತ್ತರ ಹೊಂದಾಣಿಕೆ ಮತ್ತು ಕೀಲೆಸ್ ಎಂಟ್ರಿಯನ್ನು ಸಹ ಹೊಂದಿದೆ. ಜೊತೆಗೆ ಇತರ ಕ್ರಿಯಾತ್ಮಕ ಸೇರ್ಪಡೆಗಳ ಶ್ರೇಣಿಯನ್ನು ಸಹ ನೀಡುತ್ತದೆ. ಇದು ಆರು ಏರ್‌ ಬ್ಯಾಗ್‌ಗಳು, 4.2-ಇಂಚಿನ ಕಲರ್ ಟಿಎಫ್‌ಟಿ ಮಲ್ಟಿ ಇನ್‌ಫರ್ಮೇಷನ್ ಡಿಸ್ ಪ್ಲೇ ಮತ್ತು ಸಿಗ್ನೇಚರ್ H ಆಕಾರದ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.

ಈ ಎಸ್‌ಯುವಿಯಲ್ಲಿ 1.2 ಲೀಟರ್ ಬೈ-ಫ್ಯೂಯಲ್ (ಪೆಟ್ರೋಲ್ ಜೊತೆಗೆ ಸಿಎನ್‌ಜಿ) ಎಂಜಿನ್ 68 ಬಿಹೆಚ್ ಪವರ್ ಮತ್ತು 95.2 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ ಜೊತೆಗೆ ಬರುತ್ತದೆ. ಪ್ರತಿ ಕೆಜಿ ಸಿಎನ್‌ಜಿಗೆ 27.1 ಕಿ.ಮೀ ಮೈಲೇಜ್ ನೀಡುವುದಾಗಿ ಹ್ಯುಂಡೈ ಕಂಪನಿ ಹೇಳಿಕೊಂಡಿದೆ.

hyundai-launched-new-exter-ex-hy-cng-duo-in-india

ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿ ಸಾಮಾನ್ಯ ಪೆಟ್ರೋಲ್ ವೇರಿಯೆಂಟ್‌ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.99 ಲಕ್ಷದಿಂದ ಆರಂಭವಾಗಿ ರೂ.10.43 ಲಕ್ಷಗಳ ವರೆಗೆ ಇದೆ. ಇದು 1.2-ಲೀಟರ್ ಕಪ್ಪಾ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊದಿದೆ. ಇದು 82 ಬಿಹೆಚ್ ಪವರ್ ಮತ್ತು 113.8 ಎನ್ಎಂ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಆಯ್ಕೆಗಳನ್ನು ಹೊಂದಿದೆ.

ನಮ್ಮ ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳನ್ನು ಪೂರೈಸುವ ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಹ್ಯುಂಡೈ ಎಕ್ಸ್‌ಟರ್ ಹೈ-ಸಿಎನ್ ಜಿ ಡ್ಯುಯೊ ಸರಣಿಯಲ್ಲಿ EX ವೇರಿಯೆಂಟ್ ಪರಿಚಯವು ನಮ್ಮ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಸಾಕ್ಷಿಯಾಗಿದೆ. ಸ್ಮಾರ್ಟ್ ಮೊಬಿಲಿಟಿಯನ್ನು ವ್ಯಾಪಕ ಪ್ರೇಕ್ಷಕರಿಗೆ ಪರಿಚಯಿಸುವುದು ನಮ್ಮ ಗುರಿಯಾಗಿದೆ ಎಂದು ಹ್ಯುಂಡೈ ಇಂಡಿಯಾ ನಿರ್ದೇಶಕ ತರುಣ್ ಗರ್ಗ್ ಹೇಳಿದರು.

hyundai-launched-new-exter-ex-hy-cng-duo-in-india

ಎಕ್ಸ್‌ಟರ್ ಹ್ಯುಂಡೈನ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದ್ದು, ಟಾಟಾ ಪಂಚ್ ನಂತಹ ಪ್ರತಿಸ್ಪರ್ಧಿಗಳಿಗೆ ನೇರ ಪೈಪೋಟಿ ನೀಡುತ್ತದೆ. ಹ್ಯುಂಡೈ ಇತ್ತೀಚೆಗೆ ಎಕ್ಸ್‌ಟರ್ ಸೇರಿದಂತೆ ತನ್ನ ಹಲವು ಕಾರುಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿತ್ತು. ಪ್ರಸ್ತುತ ಎಕ್ಸ್‌ಟರ್ ಎಕ್ಸ್ ಶೋರೂಂ ಬೆಲೆಯಿಂದ 50,000 ರೂ.ಗಳವರೆಗೆ ಪ್ರಯೋಜನಗಳನ್ನು ನೀಡುತ್ತದೆ. ಇದು ಆಯಾ ಸ್ಥಳೀಯ ಡೀಲರ್‌ಶಿಪ್‌ಗಳ ಸ್ಟಾಕ್‌ ಮೇಲೆ ಆಧರಿಸಿರುತ್ತದೆ ಎಂಬುದನ್ನು ಗಮನಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 7, 2025, 15:02 [IST]
English summary
Hyundai launched new exter ex hy cng duo in india
Read more on hyundai new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+