Hyundai: ಹೊಸ ಹ್ಯುಂಡೈ ಕಾರು ಬಿಡುಗಡೆ: ನವೀನ ವೇರಿಯೆಂಟ್ ಪರಿಚಯ... 5-ಸ್ಟಾರ್ ಸೇಫ್ಟಿ

ಹುಂಡೈ ಮೋಟಾರ್ ಕಂಪನಿಯು ತನ್ನ ವರ್ನಾ (Verna) ಕಾರಿಗೆ ಹೊಸ SX+ ವೇರಿಯೆಂಟ್ ಅನ್ನು ಪರಿಚಯಿಸಿ ಬಿಡುಗಡೆ ಮಾಡಿದೆ. ಈ ಮೂಲಕ ರೂಪಾಂತರ ಶ್ರೇಣಿಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹುಂಡೈ ವರ್ನಾದ ಮ್ಯಾನುವಲ್ ಮತ್ತು ವ್ಯಾಪಕವಾಗಿ ಮೆಚ್ಚುಗೆ ಪಡೆದ iVT (Intelligent Variable Transmission) ಟ್ರಾನ್ಸ್‌ಮಿಷನ್ ಎರಡರಲ್ಲೂ ಈ ಹೊಸ SX+ ವೇರಿಯೆಂಟ್ ಈಗ ಲಭ್ಯವಿದೆ. ಇದು ಗ್ರಾಹಕರಿಗೆ ಹೆಚ್ಚು ಬಹುಮುಖ ಮತ್ತು ವೈಶಿಷ್ಟ್ಯ - ಭರಿತ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಹ್ಯುಂಡೈ ಮೋಟಾರ್ ಭರವಸೆ ನೀಡಿದೆ.

ಹೊಸದಾಗಿ ಪರಿಚಯಿಸಲಾದ ಹೊಸ SX+ ವೇರಿಯೆಂಟ್‌ಗಳ ಬೆಲೆಗಳ ವಿಚಾರಕ್ಕೆ ಬಂದರೆ 1.5 MPi ಮ್ಯಾನುವಲ್ SX+ ಬೆಲೆಯು 13,79,300 (ಎಕ್ಸ್-ಶೋರೂಂ) ಇದ್ದರೇ, 1.5 MPi iVT SX+ ಬೆಲೆಯು 15,04,300 (ಎಕ್ಸ್-ಶೋರೂಂ) ಇದೆ. ಹೊಸದಾಗಿ ಪರಿಚಯಿಸಲಾದ VERNA SX+ ಕ್ಯಾಬಿನ್ ಒಳಗೆ ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ನೀಡಲಾಗಿದೆ.

hyundai-motor-launched-new-verna-sx-plus-variant

ಹೊಸ ವರ್ನಾ SX+ ವೇರಿಯೆಂಟ್‌ನಲ್ಲಿ ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಲೆದರ್ ಸೀಟ್ ಅಪ್ಹೋಲ್ಸ್ಟರಿ, ಮುಂಭಾಗದ ವೆಂಟಿಲೇಷನ್ ಸೀಟ್ ಮತ್ತು ಹೀಟೆಡ್ ಸೀಟುಗಳು, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, LED ಹೆಡ್‌ಲ್ಯಾಂಪ್‌ಗಳು ಸೇರಿದಂತೆ ಇನ್ನೂ ಹಲವು ಪ್ರೀಮಿಯಂ ಫೀಚರ್ಸ್ ಒದಗಿಸಲಾಗಿದೆ.

ಒಟ್ಟಾರೆ ಹುಂಡೈ ವರ್ನಾ ಫ್ಯೂಚರಿಸ್ಟಿಕ್ ಡಿಸೈನ್, ಸುಧಾರಿತ ತಂತ್ರಜ್ಞಾನ, ವಿಶಾಲವಾದ ಒಳಾಂಗಣ ಮತ್ತು ರೋಮಾಂಚಕ ಪರ್ಫಾಮೆನ್ಸ್‌ನೊಂದಿಗೆ ತನ್ನ ವಿಭಾಗದಲ್ಲಿ ಧೂಳೆಬ್ಬಿಸಲಿದೆ. ಹಾಗೆಯೇ ಜಾಗತಿಕ NCAP ಸೇಫ್ಟಿ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ, ಇದು ಸುರಕ್ಷತೆಯಲ್ಲಿ ತನ್ನನ್ನು ತಾನು ನಾಯಕನಾಗಿ ಸಾಭೀತುಪಡಿಸಿಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.

hyundai-motor-launched-new-verna-sx-plus-variant

ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಪರಿಚಯ: ವರ್ನಾ ವೇರಿಯೆಂಟ್ ವಿಸ್ತರಿಸುವುದರ ಜೊತೆಗೆ, ತನ್ನ ಏಳು ಮಾಡಲ್‌ಗಳಾದ ಗ್ರ್ಯಾಂಡ್ i10 ನಿಯೋಸ್, ಎಕ್ಸ್‌ಟರ್, ವರ್ನಾ, ಆರಾ, ವೆನ್ಯೂ, ವೆನ್ಯೂ-N ಲೈನ್ ಮತ್ತು ಅಲ್ಕಜಾರ್‌ಗಳಲ್ಲಿ ವೈರ್‌ಲೆಸ್ ಆಪಲ್ ಕಾರ್‌ಪ್ಲೇ (Apple CarPlay) ಮತ್ತು ಆಂಡ್ರಾಯ್ಡ್ ಆಟೋ (Android Auto) ಒದಗಿಸಲು ವಿನ್ಯಾಸಗೊಳಿಸಲಾದ ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಅನ್ನು ಸಹ ಪರಿಚಯಿಸಿದೆ.

ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಬಳಕೆಯ ಅನುಕೂಲತೆ ಮತ್ತು ಸುಲಭತೆಯನ್ನು ಹೆಚ್ಚಿಸುತ್ತದೆ. ಮ್ಯಾಪ್ಸ್ ನ್ಯಾವಿಗೇಟ್ ಮಾಡುವುದಾಗಲಿ ಅಥವಾ ಮ್ಯೂಸಿಕ್ ಸ್ಟ್ರೀಮಿಂಗ್ ಮಾಡುವುದಾಗಲಿ, ವೈರ್‌ಲೆಸ್ ಅಡಾಪ್ಟರ್ ಬಳಕೆದಾರರು ತಮ್ಮ ನೆಚ್ಚಿನ ಮೊಬೈಲ್ ಅಪ್ಲಿಕೇಶನ್‌ಗಳನ್ನು (ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ) ವಾಹನದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕ ನೇರವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

hyundai-motor-launched-new-verna-sx-plus-variant

ಹೊಸ ವೆರ್ನಾ SX+ ಮತ್ತು ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್‌ ಕುರಿತು ಪ್ರತಿಕ್ರಿಯಿಸಿದ ಹುಂಡೈ ನಿರ್ದೇಶಕ ತರುಣ್ ಗರ್ಗ್, ಹೊಸ VERNA SX+ ರೂಪಾಂತರದ ಪರಿಚಯವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡಿ ಮಾಲೀಕತ್ವದ ಅನುಭವವನ್ನು ಹೆಚ್ಚಿಸುತ್ತಿದ್ದೇವೆ. ಹೆಚ್ಚುವರಿಯಾಗಿ, ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ನಮ್ಮ ಉತ್ಪನ್ನ ಶ್ರೇಣಿಯಾದ್ಯಂತ ಸುಧಾರಿತ ಸಂಪರ್ಕ ಪರಿಹಾರಗಳನ್ನು ನೀಡುತ್ತದೆ. ಇದನ್ನು ನಮ್ಮ ಗ್ರಾಹಕರು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 5, 2025, 13:30 [IST]
English summary
Hyundai motor launched new verna sx plus variant
Read more on hyundai new launches india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+