Hyundai: ಭಾರತೀಯ ರೈಲ್ವೆ ತಾಕತ್ತು... ಹೆಮ್ಮೆ ಹಂಚಿಕೊಂಡ ಹ್ಯುಂಡೈ... 1.6 ಲಕ್ಷ ಕಾರುಗಳಿಗೆ ಸಾಥ್!
ಜನಪ್ರಿಯ ಕಾರು ತಯರಾಕ ಕಂಪನಿಯಾಗಿರುವ ಹ್ಯುಂಡೈ (Hyundai) ಕಂಪನಿಯು, ತನ್ನ ಭಾರೀ ಸಂಖ್ಯೆ ಕಾರುಗಳ ರವಾನೆ ಮಾಡಿರುವುದರ ಖುಷಿಯನ್ನು ಹಂಚಿಕೊಂಡಿದೆ. ಇದಕ್ಕೆ ಭಾರತೀಯ ರೈಲ್ವೆ ಸಾಥ್ ನೀಡಿದ್ದು, ಈ ಬಗ್ಗೆ ಹ್ಯುಂಡೈ ಮೋಟಾರ್ ಹೆಮ್ಮೆಯನ್ನು ವ್ಯಕ್ತಪಡಿಸಿದೆ. 2024 ರಲ್ಲಿ (ಜನವರಿ-ಡಿಸೆಂಬರ್) ಒಟ್ಟು ದೇಶೀಯ ಸಗಟು ಸಂಪುಟಗಳಲ್ಲಿ ಶೇ26 ರಷ್ಟು ರೈಲು ಸಾಗಣೆ ಮೂಲಕ 1,56,724 ಯೂನಿಟ್ ಕಾರುಗಳನ್ನು ಸಾಗಿಸಿದೆ. ಈ ಮೂಲಕ ರಸ್ತೆ ಸಾಗಣೆಯಲ್ಲಿ ಹೊರ ಹೊಮ್ಮುವ ಭಾರೀ ಮೊತ್ತದ CO2 ಹೊರಸೂಸುವಿಕೆಯನ್ನು ತಡೆಗಟ್ಟಿರುವುದಾಗಿ ಕಂಪನಿ ಹೆಮ್ಮೆ ವ್ಯಕ್ತಪಡಿಸಿದೆ.
ವಿವರವಾಗಿ ಹೇಳುವುದಾದರೆ ಕಂಪನಿಯ ಪ್ರಕಾರ 1,56,724 ಯೂನಿಟ್ ಕಾರುಗಳನ್ನು ರೈಲು ಮೂಲಕ ಸಾಗಿಸಿ ಬರೋಬ್ಬರಿ 18,352 ಟನ್ ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟಲಾಗಿದೆ. ಭಾರತದ ಈಶಾನ್ಯ ಪ್ರದೇಶಕ್ಕೆ ಸಾಗಿಸಲಾದ ಎಲ್ಲಾ ಕಾರುಗಳಿಗಾಗಿ ರೈಲನ್ನು ಬಳಸಲಾಗಿದೆ. ರಸ್ತೆ ಮೂಲಕ ಸಾಗಿಸುವುದಕ್ಕೆ ಹೋಲಿಸಿದರೆ ರೈಲು ಸರಕು ಸಾಗಣೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವ ಮೂಲಕ 2024 ರಲ್ಲಿ ಭಾರೀ ಪ್ರಮಾಣದ ಹೊರಸೂಸುವಿಕೆಯನ್ನು ತಡೆಗಟ್ಟಲಾಗಿದೆ ಎಂದು ಹ್ಯುಂಡೈ ಹೇಳಿದೆ.

2024 ರಲ್ಲಿ ಭಾರತದ ಈಶಾನ್ಯ ಪ್ರದೇಶಕ್ಕೆ ಶೇ100 ರಷ್ಟು ರವಾನೆಗೆ ರೈಲನ್ನು ಬಳಸುವುದನ್ನು ಒಳಗೊಂಡಂತೆ ಲಾಜಿಸ್ಟಿಕ್ಸ್‌ನಲ್ಲಿ ರೈಲು ಸರಕು ಸಾಗಣೆಯ ಪಾಲನ್ನು ಪರಿಣಾಮಕಾರಿಯಾಗಿ ಉತ್ತಮಗೊಳಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಈ ಸಾಗಣೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ದೇಶದ ಬಹುತೇಕ ಭಾಗಗಳಿಗೆ ರೈಲನ್ನೆ ಬಳಸುವ ಯೋಜನೆ ಇದೆ. ರಸ್ತೆ ಮಾರ್ಗಗಳನ್ನು ಗಣನೀಯವಾಗಿ ಕಡಿಮೆ ಮಾಡಲು ನೋಡುತ್ತಿರುವುದಾಗಿ ಕಂಪನಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹ್ಯುಂಡೈನ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತರುಣ್ ಗಾರ್ಗ್, ಹ್ಯುಂಡೈ ಕಂಪನಿಯಲ್ಲಿ ನಮ್ಮ ಕಾರ್ಯಾಚರಣೆಗಳ ಎಲ್ಲಾ ಅಂಶಗಳಲ್ಲಿ ಸುಸ್ಥಿರತೆಯನ್ನು ಉತ್ತೇಜಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಪಟ್ಟುಬಿಡದೆ ಕೆಲಸ ಮಾಡುತ್ತಿದ್ದೇವೆ. ಅದು ಉತ್ಪಾದನೆಯಾಗಿರಬಹುದು, ರವಾನೆಗಳು, ಮಾರಾಟಗಳು ಅಥವಾ ಮಾರಾಟದ ನಂತರದ ಬೆಂಬಲವಾಗಿರಬಹುದು ಎಲ್ಲದರಲ್ಲು ಉತ್ತೇಜಿಸುತ್ತಿದ್ದೇವೆ.

ಚೆನ್ನೈನ ಪೆರಂಬದೂರಿನಲ್ಲಿರುವ ನಮ್ಮ ಕಾರು ಉತ್ಪಾದನಾ ಸ್ಥಾವರದಿಂದ ಭಾರತದಾದ್ಯಂತ ಅನೇಕ ಸ್ಥಳಗಳಿಗೆ ಹ್ಯುಂಡೈ ವಾಹನಗಳನ್ನು ತಲುಪಿಸಲು ಭಾರತೀಯ ರೈಲ್ವೆಯ ವ್ಯಾಪಕವಾದ ರೈಲು - ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತಿದ್ದೇವೆ, ನಾವು 2024 ರಲ್ಲಿ 18,352 ಟನ್ CO2 ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದ್ದೇವೆ, ಈ ಪ್ರಕ್ರಿಯೆಯಲ್ಲಿ 1,56,724 ಯೂ ಕಾರುಗಳನ್ನು ರವಾನಿಸಿದ್ದೇವೆ.
ಭಾರತ ಸರ್ಕಾರವು ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳು ಮತ್ತು ಆಧುನಿಕ ಮತ್ತು ಇಂಧನ ದಕ್ಷ ರೋಲಿಂಗ್ ಸ್ಟಾಕ್‌ನೊಂದಿಗೆ ರೈಲು ಮೂಲಸೌಕರ್ಯವನ್ನು ನವೀಕರಿಸುವುದನ್ನು ಮುಂದುವರೆಸುತ್ತಿರುವುದರಿಂದ, ಹ್ಯುಂಡೈ ತನ್ನ ಲಾಜಿಸ್ಟಿಕ್ ಕಾರ್ಯಾಚರಣೆಗಳನ್ನು ಅತ್ಯುತ್ತಮವಾಗಿಸಲು ರೈಲು ಸರಕು ಸಾಗಣೆಯನ್ನು ಬಳಸಿಕೊಳ್ಳಲು ಬದ್ಧವಾಗಿದೆ. ಇದು ಕಾರ್ಬನ್ ಹೊರಸೂಸುವಿಕೆಯಲ್ಲಿ ದೀರ್ಘಾವಧಿಯ ಕಡಿತಕ್ಕೆ ಕಾರಣವಾಗುತ್ತದೆ ಎಂದರು.

ಹ್ಯುಂಡೈ ಕಂಪನಿಯು 2021 - 2024 ರ ನಡುವೆ ಕಳೆದ 4 ವರ್ಷಗಳಲ್ಲಿ ಒಟ್ಟು 5,37,499 ಯೂನಿಟ್ ಕಾರುಗಳನ್ನು ರೈಲಿನ ಮೂಲಕ ರವಾನಿಸಿದೆ. ಒಟ್ಟಾರೆ 63,452 ಟನ್ CO2 ಹೊರಸೂಸುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಾಗಿದೆ. ಇದು ದೇಶದಲ್ಲಿ ಪರಿಸರ ಮಾಲೀನ್ಯವನ್ನು ತಡೆಗಟ್ಟುವಲ್ಲಿ ಕಂಪನಿಯ ಬದ್ದತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








