ಭರ್ಜರಿ ಪರ್ಫಾಮೆನ್ಸ್ ಕಾರು: ಈ ಹ್ಯುಂಡೈ ಕಾರಿನ ಬೆಲೆ ಏರಿಕೆ ಶಾಕ್.. ಎಷ್ಟು?

ಜನಪ್ರಿಯ ವಾಹನ ತಯಾರಕ ಕಂಪನಿಯಾದ ಹ್ಯುಂಡೈ ಇತ್ತೀಚೆಗೆ ತನ್ನ ವೆನ್ಯೂ ಎನ್ ಲೈನ್ ಎಸ್‍ಯುವಿಯ ಬೆಲೆಯನ್ನು ಏರಿಕೆ ಮಾಡಿದೆ. ಈ ಹ್ಯುಂಡೈ ವೆನ್ಯೂ ಎನ್ ಲೈನ್ ಎಸ್‍ಯುವಿಯ ಬೆಲೆಯು ರೂ.7,000 ವರೆಗೆ ಹೆಚ್ಚಳವನ್ನು ಪಡೆದುಕೊಂಡಿದೆ. ಈ ಹೊಸ ಹ್ಯುಂಡೈ ವೆನ್ಯೂ ಎನ್ ಲೈನ್ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.12.15 ಲಕ್ಷದಿಂದ ರೂ.13.97 ಲಕ್ಷದವರೆಗೆ ಇದೆ. ಈ ವೆನ್ಯೂ ಪರ್ಫಾಮೆನ್ಸ್ ಮಾಡೆಲ್ ಹೆಚ್ಚು ಆಕರ್ಷಣೆ ಮತ್ತು ಡೈನಾಮಿಕ್ ಡ್ರೈವಿಂಗ್ ಅನುಭವಕ್ಕೆ ಹೆಸರುವಾಸಿಯಾಗಿದೆ.

ಹ್ಯುಂಡೈ ವೆನ್ಯೂ ಎನ್ ಲೈನ್ (Hyundai Venue N Line) ಎಸ್‍ಯುವಿ N6 ಮತ್ತು N8 ಎಂಬ ಎರಡೂ ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡೂ ಮಾದರಿಗಳು 1-ಲೀಟರ್, 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಈ ಎಂಜಿನ್ 120 PS ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಅತ್ಯಾಧುನಿಕ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ (ಡಿಸಿಟಿ) ಯೊಂದಿಗೆ ಜೋಡಿಸಲಾಗಿದೆ.

Hyundai Venue N Line

ಇದರೊಂದೊಗೆ ಈ ಪರ್ಫಾಮೆನ್ಸ್ ಎಸ್‍ಯುವಿಯಲ್ಲಿ ಪ್ಯಾಡಲ್ ಶಿಫ್ಟರ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಚಾಲನಾ ಅನುಭವವನ್ನು ಹೆಚ್ಚಿಸುತ್ತದೆ. ಇನ್ನು ಈ ಎಸ್‍ಯುವಿಯುಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಮೂರು ಡ್ರೈವಿಂಗ್ ಮೋಡ್‌ಗಳನ್ನು ಹೊಂದಿವೆ. ಈ ಕಾರು ಫಿಚರ್ಸ್ ವಿಷಯಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಿಂತ ಕಮ್ಮಿ ಇಲ್ಲ. ಅದರಲ್ಲಿರುವ ಫೀಚಸ್ ಗಳನ್ನು ಈ ಪರ್ಫಾಮೆನ್ಸ್ ರೂಪಾಂತರದಲ್ಲಿ ಕೂಡ ನೋಡಬಹುದು.

ಈ ಹ್ಯುಂಡೈ ಪರ್ಫಾಮೆನ್ಸ್ ಎಸ್‍ಯುವಿಯಲ್ಲಿ ಡಿಆರ್‌ಎಲ್‌ಗಳೊಂದಿಗೆ ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಸೊಗಸಾದ ಅಲಯ್ ವ್ಹೀಲ್ ಗಲು ಮತ್ತು ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಎರಡನ್ನೂ ಬೆಂಬಲಿಸುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಆಧುನಿಕ ಸೌಕರ್ಯಗಳನ್ನು ಹೊಂದಿದೆ.

Hyundai Venue N Line

ಇದರೊಂದಿಗೆ ಕನೆಕ್ಟಿವಿಟಿ ಕಾರ್ ತಂತ್ರಜ್ಞಾನ, 4-ವೇ ಚಾಲಿತ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಹಿಂಭಾಗದ AC ವೆಂಟ್‌ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳನ್ನು ಒಳಗೊಂಡ ಡ್ಯುಯಲ್-ಡ್ಯಾಶ್‌ಕ್ಯಾಮ್ ಸೆಟಪ್‌ನಿಂದ ಅನುಕೂಲಕರ ಅಂಶವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹೆಚ್ಚುವರಿ ಐಷಾರಾಮಿಗಳಲ್ಲಿ ವೈರ್‌ಲೆಸ್ ಚಾರ್ಜರ್, ಸಿಂಗಲ್-ಪೇನ್ ಎಲೆಕ್ಟ್ರಿಕ್ ಸನ್‌ರೂಫ್, ಕ್ರೂಸ್ ಕಂಟ್ರೋಲ್ ಸೇರಿವೆ.

ಈ ಹ್ಯುಂಡೈ ವೆನ್ಯೂ ಎನ್ ಲೈನ್ ಎಸ್‍ಯುವಿಯ ಸುರಕ್ಷತೆಯು ಒಂದು ಪ್ರಮುಖ ಕಾಳಜಿಯಾಗಿದೆ, ವೆನ್ಯೂ ಎನ್ ಲೈನ್‌ನ ಸುರಕ್ಷತಾ ವೈಶಿಷ್ಟ್ಯಗಳ ಸಮಗ್ರ ಸೂಟ್‌ನಿಂದ ಸಾಕ್ಷಿಯಾಗಿದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ISOFIX ಚೈಲ್ಡ್ ಸೀಟ್ ಆಂಕರ್‌ಗಳನ್ನು ಒಳಗೊಂಡಿದೆ.

Hyundai Venue N Line

ಇನ್ನು ಗಮನಾರ್ಹವಾಗಿ, ವಾಹನವು ಆಲ್-ವೀಲ್ ಡಿಸ್ಕ್ ಬ್ರೇಕ್ ಮತ್ತು ಕ್ಯಾಮೆರಾ-ಆಧಾರಿತ ಲೆವೆಲ್-1 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಸೂಟ್ ಅನ್ನು ಸಹ ಹೊಂದಿದೆ. ಈ ಸೂಟ್ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳಾದ ಲೇನ್-ಕೀಪ್ ಅಸಿಸ್ಟ್ ಮತ್ತು ಫಾರ್ವರ್ಡ್ ವಾರ್ನಿಂಗ್ ಅನ್ನು ಒಳಗೊಂಡಿದೆ. ಈ ಎಸ್‍ಯುವಿಯಲ್ಲಿ ಗಟ್ಟಿಯಾದ ಸಸ್ಪೆಕ್ಷನ್, ಉತ್ತಮ ರೆಸ್ಪಾನ್ಸ್ ಮತ್ತು ಎಕ್ಸಾಸ್ಟ್ ನೋಟ್ ಸೇರಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 30, 2025, 14:47 [IST]
English summary
Hyundai venue n line prices hiked in india details
Read more on hyundai india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+