Hyundai: ಸುಮ್ಮನಿದ್ದ ಕಾರಿಗೆ ಐಷಾರಾಮಿ ಅಪ್‌ಡೇಟ್ಸ್: ಮೊನ್ನೆಯಷ್ಟೆ ಬಿಡುಗಡೆ: ಸಖತ್ ಫೀಚರ್ಸ್!
ಹ್ಯುಂಡೈ ತನ್ನ ವರ್ನಾ ಕಾರನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಹೊಸ SX+ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ವೇರಿಯೆಂಟ್ ಎರಡು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಗ್ರಾಹಕರಿಗೆ ಹೆಚ್ಚು ಬಹುಮುಖ ಮತ್ತು ವೈಶಿಷ್ಟ್ಯ - ಭರಿತ ಚಾಲನಾ ಅನುಭವವನ್ನು ನೀಡುತ್ತದೆ ಎಂದು ಹ್ಯುಂಡೈ ಮೋಟಾರ್ ಹೇಳಿದೆ. ಹೊಸ ವರ್ನಾ SX+ ವೇರಿಯೆಂಟ್ ಪರಿಚಯಿಸುವುದರ ಜೊತೆಗೆ, ಕಂಪನಿಯ ಏಳು ಮಾಡಲ್‌ಗಳಲ್ಲಿ ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಅನ್ನು ಸಹ ಪರಿಚಯಿಸಿರುವುದಾಗಿ ತಿಳಿಸಿದೆ.
ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಪರಿಚಯ
ವರ್ನಾ ವೇರಿಯೆಂಟ್ ವಿಸ್ತರಿಸುವುದರ ಜೊತೆಗೆ, ವೈರ್‌ಲೆಸ್ ಆಪಲ್ ಕಾರ್‌ಪ್ಲೇ (Apple CarPlay) ಮತ್ತು ಆಂಡ್ರಾಯ್ಡ್ ಆಟೋ (Android Auto) ಒದಗಿಸಲು ವಿನ್ಯಾಸಗೊಳಿಸಲಾದ ಹೊಸ ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ಅನ್ನು ಈಗ ತನ್ನ ಏಳು ಮಾಡಲ್‌ಗಳಾದ ಗ್ರ್ಯಾಂಡ್ i10 ನಿಯೋಸ್, ಎಕ್ಸ್‌ಟರ್, ವರ್ನಾ, ಆರಾ, ವೆನ್ಯೂ, ವೆನ್ಯೂ-N ಲೈನ್ ಮತ್ತು ಅಲ್ಕಜಾರ್‌ಗಳಲ್ಲಿ ಸಹ ಪರಿಚಯಿಸಿದೆ.

ಈ ಹೊಸ ಫೀಚರ್ ಮ್ಯಾಪ್ಸ್ ನ್ಯಾವಿಗೇಟ್ ಮಾಡುವುದಾಗಲಿ ಅಥವಾ ಮ್ಯೂಸಿಕ್ ಸ್ಟ್ರೀಮಿಂಗ್ ಮಾಡುವುದಾಗಲಿ, ವೈರ್‌ಲೆಸ್ ಅಡಾಪ್ಟರ್ ಬಳಕೆದಾರರು ತಮ್ಮ ನೆಚ್ಚಿನ ಮೊಬೈಲ್ ಅಪ್ಲಿಕೇಶನ್‌ಗಳನ್ನು (ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ) ವಾಹನದ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮೂಲಕ ನೇರವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಒಟ್ಟಾರೆ ಇದು ಇನ್ಫೋಟೈನ್‌ಮೆಂಟ್ ಸಿಸ್ಟಮ್ ಬಳಕೆಯ ಅನುಕೂಲತೆ ಮತ್ತು ಸುಲಭತೆಯನ್ನು ಹೆಚ್ಚಿಸುತ್ತದೆ.
ವರ್ನಾ ಹೊಸ ವೇರಿಯೆಂಟ್ ವಿಶೇಷತೆಗಳು
ಹೊಸ SX+ ವೇರಿಯೆಂಟ್ ವರ್ನಾದ ಮ್ಯಾನುವಲ್ ಮತ್ತು ವ್ಯಾಪಕವಾಗಿ ಮೆಚ್ಚುಗೆ ಪಡೆದ iVT (Intelligent Variable Transmission) ಟ್ರಾನ್ಸ್‌ಮಿಷನ್ ಎರಡರಲ್ಲೂ ಲಭ್ಯವಿದೆ. ಹೊಸದಾಗಿ ಪರಿಚಯಿಸಲಾದ ಹೊಸ SX+ ವೇರಿಯೆಂಟ್‌ಗಳ ಬೆಲೆಗಳ ವಿಚಾರಕ್ಕೆ ಬಂದರೆ 1.5 MPi iVT SX+ ಬೆಲೆಯು 15,04,300 (ಎಕ್ಸ್-ಶೋರೂಂ) ಇದ್ದರೇ, 1.5 MPi ಮ್ಯಾನುವಲ್ SX+ ಬೆಲೆಯು 13,79,300 (ಎಕ್ಸ್-ಶೋರೂಂ) ಇದೆ.

ಹೊಸ ವರ್ನಾ SX+ ವೇರಿಯೆಂಟ್‌ನಲ್ಲಿ ಮುಂಭಾಗದ ವೆಂಟಿಲೇಷನ್ ಸೀಟ್ ಮತ್ತು ಹೀಟೆಡ್ ಸೀಟುಗಳು, ಮುಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಬೋಸ್ ಪ್ರೀಮಿಯಂ ಸೌಂಡ್ 8 ಸ್ಪೀಕರ್ ಸಿಸ್ಟಮ್, ಲೆದರ್ ಸೀಟ್ ಅಪ್ಹೋಲ್ಸ್ಟರಿ, LED ಹೆಡ್‌ಲ್ಯಾಂಪ್‌ಗಳು ಸೇರಿದಂತೆ ಇನ್ನೂ ಹಲವು ಪ್ರೀಮಿಯಂ ಫೀಚರ್ಸ್ ಒದಗಿಸಲಾಗಿದೆ.
ಜಾಗತಿಕ NCAP ಸೇಫ್ಟಿ ಪರೀಕ್ಷೆಯಲ್ಲಿ 5 - ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ, ಇದು ಸುರಕ್ಷತೆಯಲ್ಲಿ ತನ್ನನ್ನು ತಾನು ನಾಯಕನಾಗಿ ಸಾಭೀತುಪಡಿಸಿಕೊಂಡಿದೆ. ಒಟ್ಟಾರೆ ಹುಂಡೈ ವರ್ನಾ ಫ್ಯೂಚರಿಸ್ಟಿಕ್ ಡಿಸೈನ್, ಸುಧಾರಿತ ತಂತ್ರಜ್ಞಾನ, ವಿಶಾಲವಾದ ಒಳಾಂಗಣ ಮತ್ತು ರೋಮಾಂಚಕ ಪರ್ಫಾಮೆನ್ಸ್‌ನೊಂದಿಗೆ ತನ್ನ ವಿಭಾಗದಲ್ಲಿ ಧೂಳೆಬ್ಬಿಸಲಿದೆ.

ಹೊಸ VERNA SX+ ರೂಪಾಂತರದ ಪರಿಚಯವು ಪ್ರೀಮಿಯಂ ವೈಶಿಷ್ಟ್ಯಗಳನ್ನು ಗ್ರಾಹಕರಿಗೆ ನೀಡಿ ಮಾಲೀಕತ್ವದ ಅನುಭವವನ್ನು ಹೆಚ್ಚಿಸುತ್ತಿದ್ದೇವೆ. ಹೆಚ್ಚುವರಿಯಾಗಿ, ವೈರ್ಡ್ ಟು ವೈರ್‌ಲೆಸ್ ಅಡಾಪ್ಟರ್ ನಮ್ಮ ಉತ್ಪನ್ನ ಶ್ರೇಣಿಯಾದ್ಯಂತ ಸುಧಾರಿತ ಸಂಪರ್ಕ ಪರಿಹಾರಗಳನ್ನು ನೀಡುತ್ತದೆ. ಇದನ್ನು ನಮ್ಮ ಗ್ರಾಹಕರು ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ಹುಂಡೈ ನಿರ್ದೇಶಕ ತರುಣ್ ಗರ್ಗ್ ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








