Kia: ಮಾರ್ಚ್ 31ಕ್ಕೆ ಕಥೆ ಮುಗಿಯುತ್ತದೆ! ಕಿಯಾ ಹಠಾತ್ ನಿರ್ಧಾರ ಗ್ರಾಹಕರನ್ನು ಬೆಚ್ಚಿಬೀಳಿಸಿದೆ!

ಭಾರತವು ವಿಶ್ವ ಆಟೋ ಉದ್ಯಮದಲ್ಲಿ ಪ್ರಮುಖ ಮಾರುಕಟ್ಟೆಯಾಗಿ ಬೆಳೆಯಿತ್ತಿರುವುದು ಖುಷಿಯ ವಿಚಾರವಾದರೆ, ಮತ್ತೊಂದೆಡೆ ಪ್ರಮುಖ ಕಾರು ತಯಾರಕ ಕಂಪನಿಗಳು ತಮ್ಮ ಕಾರುಗಳ ಬೆಲೆ ಏರಿಕೆಯನ್ನು ಘೋಷಿಸುತ್ತಿರುವುದು ಕಹಿ ಸಂಗತಿಯಾಗಿದೆ. ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೆ ತಮ್ಮ ಕಾರುಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಇದೀಗ ಕಿಯಾ (Kia) ಮೋಟಾರ್ ಕೂಡ ಬೆಲೆ ಏರಿಕೆಯನ್ನು ಘೋಷಿಸಿ ಗ್ರಾಹಕರಿಗೆ ಷಾಕ್ ನೀಡಿದೆ. ಕಿಯಾ ಇಂಡಿಯಾ, ತನ್ನ ಸಂಪೂರ್ಣ ಶ್ರೇಣಿಯಲ್ಲಿ (ಎಲ್ಲಾ ಕಾರುಗಳ ಮೇಲೆ) ಶೇ3 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ.

ಹೌದು, ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ ಬೆಲೆ ಏರಿಕೆ ಘೋಷಣೆ ಬೆನ್ನಲ್ಲೇ ಕಿಯಾ ಕೂಡ ಏಪ್ರಿಲ್ 1, 2025 ರಿಂದ ಬೆಲೆ ಏರಿಕೆಯನ್ನು ಘೋಷಿಸಿಬಿಟ್ಟಿದೆ. ಪ್ರಾಥಮಿಕವಾಗಿ ಹೆಚ್ಚುತ್ತಿರುವ ಸರಕುಗಳ ಬೆಲೆಗಳು ಮತ್ತು ಹೆಚ್ಚುತ್ತಿರುವ ಪೂರೈಕೆ ಸರಪಳಿ ಸಂಬಂಧಿತ ವೆಚ್ಚಗಳಿಂದಾಗಿ ಈ ನಿರ್ಣಯ ತೆಗುಕೊಳ್ಳಲಾಗಿದೆ ಎಂದು ಕಿಯಾ ಕಂಪನಿ ತಿಳಿಸಿದೆ.

kia-announces-3-percent-price-hike-from-1st-april-2025

"ನಮ್ಮ ಗ್ರಾಹಕರಿಗೆ ಅಸಾಧಾರಣ ಮೌಲ್ಯ ಮತ್ತು ಗುಣಮಟ್ಟವನ್ನು ಒದಗಿಸಲು ಬದ್ಧವಾಗಿರುವ ಬ್ರ್ಯಾಂಡ್ ಆಗಿ, ನಾವು ಯಾವಾಗಲೂ ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ವಾಹನಗಳನ್ನು ನೀಡಲು ಶ್ರಮಿಸುತ್ತಿದ್ದೇವೆ. ಆದರೂ ಸರಕುಗಳು ಮತ್ತು ಇನ್‌ಪುಟ್ ಸಾಮಗ್ರಿಗಳ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ, ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ಎಲ್ಲಾ ಕಿಯಾ ಕಾರುಗಳ ಮೇಲೆ ಶೇ3 ವರೆಗೆ ಬೆಲೆ ಏರಿಕೆಯನ್ನು ಹೆಚ್ಚಿಸುತ್ತೇವೆ.

ಬೆಲೆ ಏರಿಕೆಯು ಸವಾಲಿನದ್ದಾಗಿರಬಹುದು ಆದರೆ, ನಮ್ಮ ಗ್ರಾಹಕರು ಕಿಯಾದಿಂದ ನಿರೀಕ್ಷಿಸುವ ಉತ್ತಮ ಗುಣಮಟ್ಟದ ವಾಹನಗಳನ್ನು ನಾವು ತಲುಪಿಸುವುದನ್ನು ಮುಂದುವರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೆಲೆ ಹೊಂದಾಣಿಕೆಯು ನಮ್ಮ ಮೌಲ್ಯಯುತ ಗ್ರಾಹಕರಿಗೆ ಸಾಧ್ಯವಾದಷ್ಟು ನಿರ್ವಹಿಸಬಹುದಾದ ರೀತಿಯಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತೇವೆ ಎಂದು ಕಿಯಾ ಇಂಡಿಯಾದ ಮಾರಾಟ ಮತ್ತು ಮಾರುಕಟ್ಟೆಯ ಹಿರಿಯ ಉಪಾಧ್ಯಕ್ಷ ಹರ್ದೀಪ್ ಸಿಂಗ್ ಬ್ರಾರ್ ಹೇಳಿದ್ದಾರೆ.

kia-announces-3-percent-price-hike-from-1st-april-2025

ಕಿಯಾ ಇಲ್ಲಿಯವರೆಗೆ ಭಾರತ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಒಟ್ಟು 1.45 ಮಿಲಿಯನ್ ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 6,90,000 ವಾಹನಗಳ ಮಾರಾಟ ಕಂಡ ಸೆಲ್ಟೋಸ್ ಭಾರತದಲ್ಲಿ ಕಿಯಾದ ಪ್ರಮುಖ ವಾಹನವಾಗಿದೆ. ನಂತರ ಸೋನೆಟ್ 5,00,000 ಯೂನಿಟ್‌ ವಾಹನಗಳು, ಕ್ಯಾರೆನ್ಸ್ 2,32,000 ಯೂನಿಟ್‌ ವಾಹನಗಳು ಮತ್ತು ಕಾರ್ನಿವಲ್ 15,000 ಯೂನಿಟ್‌ ವಾಹನಗಳು ಮಾರಾಟವಾಗಿವೆ.

ಇಲ್ಲಿಯವರೆಗೆ ಕಿಯಾ ಇಂಡಿಯಾ ಭಾರತೀಯ ಮಾರುಕಟ್ಟೆಗೆ ಸೆಲ್ಟೋಸ್, ಸೈರಸ್, ಸೋನೆಟ್, ಕ್ಯಾರೆನ್ಸ್, ಕಾರ್ನಿವಲ್, ಇವಿ6 ಮತ್ತು ಇವಿ9 ಸೇರಿದಂತೆ ಏಳು ವಾಹನಗಳನ್ನು ಬಿಡುಗಡೆ ಮಾಡಿದೆ. ಕಿಯಾ ಇಂಡಿಯಾ ತನ್ನ ಅನಂತಪುರ ಸ್ಥಾವರದಿಂದ ಸುಮಾರು 1.6 ಮಿಲಿಯನ್ ವಾಹನ ರವಾನೆಯನ್ನು ಪೂರ್ಣಗೊಳಿಸಿದೆ, ಇದರಲ್ಲಿ 1.2 ಮಿಲಿಯನ್ ದೇಶೀಯ ಮಾರಾಟ ಮತ್ತು 3.67 ಲಕ್ಷಕ್ಕೂ ಹೆಚ್ಚು ರಫ್ತುಗಳು ಸೇರಿವೆ.

kia-announces-3-percent-price-hike-from-1st-april-2025

ಭಾರತೀಯ ರಸ್ತೆಗಳಲ್ಲಿ 4.5 ಲಕ್ಷಕ್ಕೂ ಹೆಚ್ಚು ಸಂಪರ್ಕಿತ ಕಾರುಗಳೊಂದಿಗೆ, ಇದು ದೇಶದ ಸಂಪರ್ಕಿತ ಕಾರು ವಿಭಾಗದಲ್ಲಿ ತನ್ನನ್ನು ಗುರ್ತಿಸಿಕೊಂಡಿದೆ. ಕಿಯಾ ಕಂಪನಿಯು ಸದ್ಯ ಭಾರತದ 315 ನಗರಗಳಲ್ಲಿ 725 ಟಚ್‌ಪಾಯಿಂಟ್‌ಗಳ ವ್ಯಾಪಕ ಜಾಲವನ್ನು ಹೊಂದಿದೆ. ದೇಶಾದ್ಯಂತ ತನ್ನ ಹೆಜ್ಜೆಗುರುತುಗಳನ್ನು ಬಲಪಡಿಸುವತ್ತ ಗಮನಹರಿಸಿರುವುದಾಗಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, March 18, 2025, 17:17 [IST]
English summary
Kia announces 3 percent price hike from 1st april 2025
Read more on kia motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+