ದೀಪಾವಳಿಗೆ ಪರಿಸರ ಸ್ನೇಹಿ 7-ಸೀಟರ್ ಹುಡುಕುತ್ತಿದ್ದೀರಾ? ಬೆಸ್ಟ್ ಕಾರಿದು ಒಮ್ಮೆ ಪರಿಶೀಲಿಸಿ
ದೇಶದ ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಕಿಯಾ, ತನ್ನ ಕ್ಯಾರೆನ್ಸ್ ಕ್ಲಾವಿಸ್ EV ಮಾಡಲ್ ಶ್ರೇಣಿಯನ್ನು ವಿಸ್ತರಿಸಿದ್ದು, ಹೊಸ ಟ್ರಿಮ್‌ಗಳಾದ HTX E ಮತ್ತು HTX E [ER] ಗಳನ್ನು ಪರಿಚಯಿಸಿದೆ. ಇವು ಕ್ರಮವಾಗಿ 19.99 ಲಕ್ಷ ರೂ. (ಎಕ್ಸ್ - ಶೋರೂಂ) ಮತ್ತು 21.99 ಲಕ್ಷ ರೂ. (ಎಕ್ಸ್ - ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 7 ಮಂದಿ ಆರಾಮವಾಗಿ ಪ್ರಯಾಣಿಸಬಹುದಾದ ಕಾರಾಗಿದೆ. ಕ್ಯಾರೆನ್ಸ್ ಕ್ಲಾವಿಸ್ ಇವಿಯ ಹೊಸ ಟ್ರಿಮ್‌ಗಳು ದೇಶಾದ್ಯಂತ ಕಿಯಾ ಶೋರೂಮ್‌ಗಳಲ್ಲಿ ಈಗ ಲಭ್ಯವಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಬಲವಾದ ಕಾರ್ಯಕ್ಷಮತೆಯೊಂದಿಗೆ ಸೊಗಸಾದ, ವೈಶಿಷ್ಟ್ಯ-ಭರಿತ ಎಲೆಕ್ಟ್ರಿಕ್ ವಾಹನವನ್ನು ಬಯಸುವ ನಗರ ಕುಟುಂಬಗಳಿಗೆ ಈ ಕಾರು ಬೆಸ್ಟ್ ಆಯ್ಕೆಯಾಗಿದೆ. ಗ್ರಾಹಕರ ಪ್ರತಿಕ್ರಿಯೆ ಮತ್ತು ವಿಕಸನಗೊಳ್ಳುತ್ತಿರುವ ಆದ್ಯತೆಗಳಿಗೆ ಪ್ರತಿಕ್ರಿಯೆಯಾಗಿ, ಕಿಯಾ ಇಂಡಿಯಾ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ವರ್ಧಿತ ಆಯ್ಕೆಗಳು ಮತ್ತು ವೈಶಿಷ್ಟ್ಯಗಳನ್ನು ನೀಡಲು ಈ ಹೊಸ ಟ್ರಿಮ್‌ಗಳನ್ನು ಪರಿಚಯಿಸಿರುವುದಾಗಿ ಹೇಳಿದೆ.

HTX E ಟ್ರಿಮ್ 42 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿರುತ್ತದೆ. ಹಾಗೆಯೇ HTX E ER 51.4 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಹೊಸ ಟ್ರಿಮ್‌ಗಳು ಪನೋರಮಿಕ್ ಸನ್‌ರೂಫ್, ಮೂರು ಸಾಲುಗಳಿಗೆ LED ಲ್ಯಾಂಪ್‌ಗಳು, ಎಲ್ಲಾ ವಿಂಡೋಗಳು ಆಟೋ ಅಪ್/ಡೌನ್, ECM ರೂಮ್ ಮಿರರ್, ವೈರ್‌ಲೆಸ್ ಚಾರ್ಜರ್ ಮತ್ತು ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಯ ಡ್ಯುಯಲ್-ಟೋನ್ ಸ್ಟೀರಿಂಗ್ ವೀಲ್ ಹೊಂದಿವೆ.
ವರ್ಧಿತ ಸೌಕರ್ಯ ಮತ್ತು ಅನುಕೂಲಕ್ಕಾಗಿ, ಕ್ಯಾಬಿನ್ ಸೀಟ್ ಬ್ಯಾಕ್ ಫೋಲ್ಡಿಂಗ್ ಟೇಬಲ್, ವೈರಸ್ ರಕ್ಷಣೆಯೊಂದಿಗೆ ಏರ್ - ಪ್ಯೂರಿಫೈಯರ್, ಲೆದರೆಟ್ ಸೀಟುಗಳು, ಫುಟ್‌ವೆಲ್ ಇಲ್ಯುಮಿನೇಷನ್‌ನೊಂದಿಗೆ ಬಹು - ಬಣ್ಣದ ಮೂಡ್ ಲ್ಯಾಂಪ್ ಮತ್ತು ಪ್ರತಿ ಪ್ರಯಾಣಕ್ಕೂ ಅತ್ಯಾಧುನಿಕ ಅನುಭವವನ್ನು ಖಾತ್ರಿಪಡಿಸುವ ಸೋಲಾರ್ ಗ್ಲಾಸ್ ಅನ್ನು ಹೊಂದಿದೆ.

ಕ್ಯಾರೆನ್ಸ್ ಕ್ಲಾವಿಸ್ EV ಕಾರು 255 Nm ಟಾರ್ಕ್ ಅನ್ನು ನೀಡುವ 99kW & 126kW ಮೋಟಾರ್‌ನಿಂದ ನಡೆಸಲ್ಪಡುತ್ತದೆ. ಡ್ಯುಯಲ್ ಬ್ಯಾಟರಿ ಆಯ್ಕೆಗಳೊಂದಿಗೆ - 51.4 kWh (ಸಿಂಗಲ್ ಚಾರ್ಜ್‌ನಲ್ಲಿ 490 ಕಿ.ಮೀ ರೇಂಜ್) ಮತ್ತು 42 kWh (404 ಕಿಮೀ ರೇಂಜ್) ಬರುತ್ತದೆ. ಕೇವಲ 39 ನಿಮಿಷಗಳಲ್ಲಿ ಶೆ80 ರಷ್ಟು ಚಾರ್ಜಿಂಗ್ ಆಗುತ್ತದೆ.
ಕ್ಯಾರೆನ್ಸ್ ಕ್ಲಾವಿಸ್ EV ಯಲ್ಲಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC) ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 18 ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಒಳಗೆ, 67.62 ಸೆಂ.ಮೀ (26.62") ಡ್ಯುಯಲ್ ಪನೋರಮಿಕ್ ಡಿಸ್ಪ್ಲೇ, 90 ಕನೆಕ್ಟೆಡ್ ಕಾರ್ ಫೀಚರ್ಸ್ ಸಂಪರ್ಕಿತ ಚಾಲನಾ ಅನುಭವವನ್ನು ಖಚಿತಪಡಿಸುತ್ತವೆ.

MyKia ಅಪ್ಲಿಕೇಶನ್‌ನಲ್ಲಿ K-ಚಾರ್ಜ್ ಪ್ಲಾಟ್‌ಫಾರ್ಮ್ ಮೂಲಕ 11,000 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳು, ಲೈವ್ ಚಾರ್ಜರ್ ಲಭ್ಯತೆ, ಮಾರ್ಗ ಯೋಜನೆ ಮತ್ತು Kia EV ರೂಟ್ ಪ್ಲಾನರ್‌ನೊಂದಿಗೆ ಸುವ್ಯವಸ್ಥಿತ ಪಾವತಿ ಆಯ್ಕೆಗಳನ್ನು ಒಳಗೊಂಡಿದೆ. 250 ಕ್ಕೂ ಹೆಚ್ಚು EV-ಸಿದ್ಧ ಕಾರ್ಯಾಗಾರಗಳು ಮತ್ತು DC ಫಾಸ್ಟ್ ಚಾರ್ಜರ್‌ಗಳನ್ನು ಹೊಂದಿರುವ 100 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳೊಂದಿಗೆ, ಕಿಯಾ ಪ್ರತಿ EV ಪ್ರಯಾಣವನ್ನು ಅನುಕೂಲಕರವಾಗಿಸುತ್ತದೆ ಎಂದು ತಿಳಿಸಿದೆ.
ಎರಡು ಟ್ರಿಮ್‌ಗಳಾದ 42 kWh ಬ್ಯಾಟರಿಯ HTX E ಟ್ರಿಮ್ ಬೆಲೆ 19,99,000 ಹಾಗೂ 51.4 kWh ಬ್ಯಾಟರಿಯ HTX E ER ಟ್ರಿಮ್ ಬೆಲೆ 21,99,000 ಇದೆ. ಇತ್ತೀಚಿನ ಈ ಎರಡು ಟ್ರಿಮ್ ಸೇರ್ಪಡೆಯೊಂದಿಗೆ ಕ್ಯಾರೆನ್ಸ್ ಕ್ಲಾವಿಸ್ ಇವಿ ಈಗ ಆರು ಟ್ರಿಮ್‌ಗಳಲ್ಲಿ ಲಭ್ಯವಿದೆ: HTK+, HTX E, HTX, HTX E [ER], HTX [ER], ಮತ್ತು HTX+ [ER].


Click it and Unblock the Notifications








