ಹೊಸ ಕಿಯಾ ಕ್ಲಾವಿಸ್ ಎಂಪಿವಿ ಅನಾವರಣ: ಕೇವಲ 25,000 ರೂ. ಬುಕಿಂಗ್ ಮೊತ್ತ... ಭರ್ಜರಿ ವಿಶೇಷತೆಗಳು!
ಕಿಯಾ ಇಂಡಿಯಾ ಇಂದು ಕ್ಯಾರೆನ್ಸ್ ಎಂಪಿವಿಯ ಪ್ರೀಮಿಯಂ ಫೇಸ್ ಲಿಫ್ಟ್ ಆವೃತ್ತಿಯಾದ ಕಿಯಾ ಕ್ಲಾವಿಸ್ ಅನ್ನು ಅನಾವರಣಗೊಳಿಸಿದೆ. ಅಸ್ತಿತ್ವದಲ್ಲಿರುವ ಕ್ಯಾರೆನ್ಸ್ ಜೊತೆಗೆ ಹೆಚ್ಚು ಪ್ರೀಮಿಯಂ ಕೊಡುಗೆಯಾಗಿ ದಿಟ್ಟ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ವರ್ಧಿತ ಸುರಕ್ಷತೆಯೊಂದಿಗೆ ಪರಿಚಯಿಸಲಾಗಿದೆ. ಇದು ಭಾರತೀಯ ಮಾರುಕಟ್ಟೆಗೆ ಪ್ರೀಮಿಯಂ ಕೊಡುಗೆಯಾಗಿದ್ದು, ಕಂಪನಿಯ ಪ್ರಮುಖ ಎಂಪಿವಿ ಆಗಿ ಮುಂದುವರಿಯಲಿದೆ ಎಂದು ಕಂಪನಿ ಹೇಳಿದೆ. ಮೇ 9, 2025 ರಂದು ಕಿಯಾ ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್‌ಶಿಪ್‌ಗಳ ಮೂಲಕ 25,000 ರೂ.ಗಳಿಗೆ ಬುಕಿಂಗ್ ಪ್ರಾರಂಬವಾಗಲಿದೆ.
ಒಳಾಂಗಣ: ಕ್ಲಾವಿಸ್ ಆರು ಮತ್ತು ಏಳು ಆಸನಗಳ ಕಾನ್ಫಿಗರೇಶನ್ ಹೊಂದಿದ್ದು, ಮೊದಲ ಸಾಲಿನ ಪ್ಯಾಸೆಂಜರ್ ಸೀಟ್ ಸ್ಲೈಡ್ ಮಾಡಲು ವಾಕ್-ಇನ್ ಲಿವರ್ ಮತ್ತು ಸ್ಲೈಡಿಂಗ್, ರೆಕ್ಲೈನಿಂಗ್ ಮತ್ತು ಒನ್-ಟಚ್ ಎಲೆಕ್ಟ್ರಿಕ್ ಟಂಬಲ್ ಕಾರ್ಯಗಳನ್ನು ಒಳಗೊಂಡಿರುವ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳನ್ನು ಹೊಂದಿದೆ. ಡ್ಯುಯಲ್ ಪ್ಯಾನ್ ಪನೋರಮಿಕ್ ಸನ್ ರೂಫ್, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಎಸಿಗಾಗಿ ಟಚ್ ಕಂಟ್ರೋಲ್‌ಗಳು ಕ್ಯಾಬಿನ್‌ನ ಪ್ರೀಮಿಯಂ ಅನುಭವವನ್ನು ಹೆಚ್ಚಿಸುತ್ತವೆ.

ಕ್ಲಾವಿಸ್ ನವೀಕರಿಸಿದ ಡ್ಯಾಶ್ ಬೋರ್ಡ್ ಮತ್ತು ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 26.62-ಇಂಚಿನ ಡ್ಯುಯಲ್ ಪನೋರಮಿಕ್ ಡಿಸ್ ಪ್ಲೇ ಪ್ಯಾನಲ್ ನೊಂದಿಗೆ ಬರುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟುಗಳು, 8-ಸ್ಪೀಕರ್ ಬೋಸ್ ಆಡಿಯೊ ಸಿಸ್ಟಮ್, ಕೂಲಿಂಗ್ ನೊಂದಿಗೆ ವೈರ್ ಲೆಸ್ ಚಾರ್ಜಿಂಗ್ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿವೆ.
ಎಂಜಿನ್: ಕ್ಲಾವಿಸ್ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಸ ಮ್ಯಾನುವಲ್ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ ಬರಲಿದೆ. ಲಭ್ಯವಿರುವ ಎಂಜಿನ್‌ಗಳಲ್ಲಿ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (115 ಬಿಹೆಚ್ ಪಿ, 144 ಎನ್ಎಂ ಟಾರ್ಕ್), 1.5-ಲೀಟರ್ ಟರ್ಬೊ-ಪೆಟ್ರೋಲ್ (160 ಬಿಹೆಚ್ ಪಿ, 253 ಎನ್ಎಂ ಟಾರ್ಕ್) ಮತ್ತು 1.5-ಲೀಟರ್ ಡೀಸೆಲ್ (116 ಬಿಹೆಚ್ ಪಿ, 250 ಎನ್ಎಂ ಟಾರ್ಕ್) ಸೇರಿವೆ.

ಸುರಕ್ಷತೆ: ಕ್ಲಾವಿಸ್ ಹೆಚ್ಚಿನ ಸುರಕ್ಷತೆಗಾಗಿ ಫಾರ್ವರ್ಡ್ ಕೊಲಿಷನ್ ತಪ್ಪಿಸುವುದು, ಲೇನ್ ಕೀಪ್ ಅಸಿಸ್ಟ್, ಎಕ್ಸಿಟ್ ವಾರ್ನಿಂಗ್, ಅಡ್ಜಸ್ಟಬಲ್ ಕ್ರೂಸ್ ಕಂಟ್ರೋಲ್, ಬ್ಲೈಂಡ್-ಸ್ಪಾಟ್ ಅನ್ನು ಒಳಗೊಂಡಿರುವ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ಎಡಿಎಎಸ್) ಅನ್ನು ಹೊಂದಿರಲಿದೆ. ಹಾಗೆಯೇ 360 ಡಿಗ್ರಿ ಕ್ಯಾಮೆರಾ ಮತ್ತು ಆರು ಏರ್ ಬ್ಯಾಗ್‌ಗಳಂತಹ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
ಕಿಯಾ ಕ್ಲಾವಿಸ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಡಿಜಿಟಲ್ ಟೈಗರ್ ಫೇಸ್ ನೊಂದಿಗೆ ಒರಟಾದ ನೋಟವನ್ನು ಪಡೆದುಕೊಂಡಿದೆ. ಟ್ರೈ-ಬೀಮ್ ಎಲ್‌ಇಡಿ ಹೆಡ್‌ಲೈಟ್ ಗಳು, ಬಾಣದ ಆಕಾರದ ಎಲ್‌ಇಡಿ ಡಿಆರ್‌ಎಲ್ ಗಳು ಮತ್ತು ಹಿಂಭಾಗದಲ್ಲಿ ಸ್ಟಾರ್ಮ್ಯಾಪ್ ಎಲ್ಇಡಿ ಕನೆಕ್ಟೆಡ್ ಟೈಲ್ಲೈಟ್‌ಗಳನ್ನು ಲೈಟ್ ಬಾರ್‌ನೊಂದಿಗೆ ಪ್ರದರ್ಶಿಸಲಾಗಿದೆ. 17-ಇಂಚಿನ ಕ್ರಿಸ್ಟಲ್-ಕಟ್ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.

ಕಿಯಾ ಕ್ಲಾವಿಸ್ ಬಿಡುಗಡೆ ನಂತರ ಭಾರತದಲ್ಲಿ ಟೊಯೊಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಸುಜುಕಿ ಇನ್ವಿಕ್ಟೋ ಕಾರುಗಳಿಗೆ ಪೈಪೋಟಿ ನೀಡಲಿದೆ. ಕಿಯಾ ಕ್ಲಾವಿಸ್ ಎಂಪಿವಿ ಕಾರೆನ್ಸ್ ಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ಹೊಂದಿರಲಿದ್ದು, ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.10.6 ಲಕ್ಷದಿಂದ ಆರಂಭವಾಗಿ ರೂ.19.6 ಲಕ್ಷಗಳವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








