Kia Syros: 9 ಲಕ್ಷಕ್ಕೆ ಫುಲ್ ಪ್ರೀಮಿಯಂ ಕಿಯಾ ಕಾರು: ಅಗ್ಗದ ಬೆಲೆಯಲ್ಲಿ ಸನ್‌ರೂಫ್ SUV!
ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ, ಎತ್ತರದ ಬಾಕ್ಸಿ ವಿನ್ಯಾಸದೊಂದಿಗೆ ವಿಭಿನ್ನವಾಗಿ ಕಾಣುವ 'ಸೈರಸ್' ಎಸ್‌ಯುವಿಯನ್ನು ಇದೇ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿ ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಆಕರ್ಷಕ ಲುಕ್ ಮತ್ತು ವಿಶಿಷ್ಟ್ ವೈಶಿಷ್ಟ್ಯಗಳನ್ನು ಹೊಂದಿದೆ. ಕಿಯಾ ಸೈರಸ್ ಒಳಗೆ ಹೆಜ್ಜೆ ಹಾಕಿ ನೋಡಿದ್ರೆ, ಕ್ಯಾಬಿನ್ ಸಾನೆಟ್‌ಗಿಂತ ಪ್ರೀಮಿಯಂ ಅನುಭವ ನೀಡುತ್ತದೆ. ಈ ಎಸ್‌ಯುವಿ ರೂ.8.99 ಲಕ್ಷದಿಂದ ರೂ.17.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರಿನ ಪ್ರಮುಖ ಫೀಚರ್ಸ್ ಇಲ್ಲಿವೆ.
ಕೈಗೆಟುಕುವ ಬೆಲೆಯಲ್ಲಿ ತುಂಬಾ ಪ್ರೀಮಿಯಂ ಆಗಿರುವ ಈ ಕಾರಿನಲ್ಲಿ ಡ್ಯುಯಲ್-ಟೋನ್ ನೋಟವನ್ನು ನೀಡಲಾಗಿದೆ. ಮಲ್ಟಿ-ಲೇಯರ್ಡ್ ಡ್ಯಾಶ್‌ಬೋರ್ಡ್ ದೊಡ್ಡ 30-ಇಂಚಿನ ಸ್ಕ್ರೀನ್ ಹೊಂದಿದೆ. ಇದರಲ್ಲಿ ಡ್ರೈವರ್ ಡಿಸ್ಪ್ಲೆ, ಇನ್‌ಫೋಟೈನ್‌ಮೆಂಟ್ ಸಿಸ್ಟಮ್ (ಡ್ಯುಯಲ್-12.3-ಇಂಚಿನ ಸ್ಕ್ರೀನ್) ಹಾಗೂ ಕ್ಲೈಮೆಟ್ ಕಂಟ್ರೋಲ್ (5-ಇಂಚಿನ ಟಚ್‌ಸ್ಕ್ರೀನ್) ಗಳನ್ನು ಒಳಗೊಂಡಿದೆ.

ಇದರ ಇನ್ಫೋಟೈನ್‌ಮೆಂಟ್ ಸಿಸ್ಟಮ್ OTA ನವೀಕರಣಗಳನ್ನು ಸಹ ಒಳಗೊಂಡಿದ್ದು, ಇದು 8-ಸ್ಪೀಕರ್ ಹಾರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್‌ಗೆ ಸಂಪರ್ಕ ಹೊಂದಿದೆ. ಹಾಗೆಯೇ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಬಹು ಭಾರತೀಯ ಭಾಷೆಗಳಲ್ಲಿ ಧ್ವನಿ ಆಜ್ಞೆಗಳನ್ನು (ವಾಯಿಸ್ ಕಮಾಂಡ್) ಸ್ವೀಕರಿಸುವ ಕಿಯಾದ ಸಂಪರ್ಕಿತ ಕಾರು ಸೂಟ್‌ಗೆ ಸಪೋರ್ಟ್ ಮಾಡುತ್ತದೆ.
ಡ್ಯುಯಲ್-ಪೇನ್ ಪನೋರಮಿಕ್ ಸನ್‌ರೂಫ್, ಹಿಂಭಾಗದ AC ವೆಂಟ್‌ಗಳು, 64-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮುಂಭಾಗ ಮತ್ತು ಹಿಂಭಾಗದಲ್ಲಿ USB C ಪೋರ್ಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಹಿಂಭಾಗದ ವಿಂಡೋಗಳಿಗೆ ಮ್ಯಾನುಯಲ್ ಬ್ಲೈಂಡ್‌ಗಳು, AQI ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ ಏರ್ ಪ್ಯೂರಿಫೈಯರ್ ಒಳಗೊಂಡಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಲಾಗಿದೆ.

ಸುರಕ್ಷತೆಯ ವಿಷಯದಲ್ಲಿ, ಕಿಯಾ ಸೈರಸ್ ಆರು ಏರ್‌ಬ್ಯಾಗ್‌ಗಳು, ನಾಲ್ಕು ಡಿಸ್ಕ್ ಬ್ರೇಕ್‌ಗಳು (ಟಾಪ್-ಸ್ಪೆಕ್ ಮಾದರಿಗಳಲ್ಲಿ ಮಾತ್ರ), ಮಕ್ಕಳ ಆಸನಗಳಿಗೆ ISOFIX ಆಂಕರ್ ಪಾಯಿಂಟ್‌ಗಳು, ಕ್ರೂಸ್ ಕಂಟ್ರೋಲ್, ಮುಂಭಾಗ, ಬದಿ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, 360-ಡಿಗ್ರಿ ಕ್ಯಾಮೆರಾ, EBD ಜೊತೆಗೆ ABS, ಸ್ಟೆಬಿಲಿಟಿ ಕಂಟ್ರೋಲ್, ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಇತ್ಯಾದಿಗಳನ್ನು ಒಳಗೊಂಡಿದೆ.
ಇದರಲ್ಲಿ ಮುಂಭಾಗದ ಡಿಕ್ಕಿ ಎಚ್ಚರಿಕೆ, ಮುಂಭಾಗದ ಡಿಕ್ಕಿ ತಪ್ಪಿಸುವಿಕೆ, ಲೇನ್ ವಾಹನ ನಿರ್ಗಮನ ಎಚ್ಚರಿಕೆ, ಸ್ಟಾಪ್ ಮತ್ತು ಗೋ ಜೊತೆ ಕ್ರೂಸ್ ಕಂಟ್ರೋಲ್, ಸೈರಸ್ ಕಿಯಾ ಅವರ ಲೆವೆಲ್ 2 ADAS ಸೆಟಪ್ ಅನ್ನು 16 ಸ್ವಾಯತ್ತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಬ್ಲಿಂಗ್ ವ್ಯೂ ಮಾನಿಟರ್ ಸೇರಿದಂತೆ ಇನ್ನೂ ಹೆಚ್ಚಿನವು ಸೇರಿವೆ.

ಎಂಜಿನ್ ವಿಷಯಕ್ಕೆ ಬಂದರೆ 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಟರ್ಬೊ ಡೀಸೆಲ್ ಆಯ್ಕೆಗಳನ್ನು ನೀಡಲಾಗಿದೆ. ಇದರಲ್ಲಿ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118bh ಪವರ್ ಮತ್ತು 172Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.
ಮತ್ತೊಂದೆಡೆ, ಟರ್ಬೊ-ಡೀಸೆಲ್ 114bh ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಬರುತ್ತದೆ. ಸದ್ಯ ಕಿಯಾ ನೀಡುತ್ತಿರುವ ಅತ್ಯುತ್ತಮ ಕಾರುಗಳಲ್ಲಿ ಅಗ್ಗದ ಬೆಲೆಗೆ ಇಷ್ಟು ಫೀಚರ್ಸ್ ಒಳಗೊಂಡ ಕಾರುಗಳಲ್ಲಿ ಇದು ಮೊದಲ ಸಾಲಿನಲ್ಲಿ ನಿಲ್ಲುತ್ತದೆ.


Click it and Unblock the Notifications








