ಆಟೋ ಎಕ್ಸ್‌ಪೋ 2025: ಆಕರ್ಷಕ ಕಾರನ್ನು ಅನಾವರಣಗೊಳಿಸಿ ಭಾರತೀಯರ ಮನಗೆದ್ದ ಕಿಯಾ!
ಪ್ರಮುಖ ಕಾರು ತಯಾರಕ ಕಂಪನಿಯಾದ ಕಿಯಾ ಇಂಡಿಯಾ, ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 (Bharat Mobility Global Expo 2025) ರಲ್ಲಿ ಹೊಸ EV6 ಅನ್ನು ಅನಾವರಣಗೊಳಿಸಿದೆ. ಹಾಗೆಯೇ ಹೊಸ ಕಿಯಾ EV6 ಬುಕಿಂಗ್‌ಗಳು ಇಂದು ಪ್ರಾರಂಭವಾಗಿವೆ. ಈ ಅತ್ಯಾಧುನಿಕ ಕಾರು, 27 ಸುಧಾರಿತ ಸುರಕ್ಷತೆ ಮತ್ತು ಚಾಲಕ ಸಹಾಯ ವೈಶಿಷ್ಟ್ಯ (Driver assistance features) ಗಳನ್ನು ಒಳಗೊಂಡಿರುವ ADAS 2.0 ಪ್ಯಾಕೇಜ್‌ನೊಂದಿಗೆ ಸಜ್ಜುಗೊಂಡಿದೆ. ಹಿಂದಿನ EV6 ಗೆ ಹೋಲಿಸಿದರೆ ಇದು ಐದು ಹೆಚ್ಚುವರಿ ADAS 2.0 ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಈ ಆಧುನಿಕ ಫೀಚರ್‌ಗಳನ್ನು ನಮ್ಮ ಪ್ರಮುಖ ಮಾದರಿ EV9 ನ ಅತ್ಯಾಧುನಿಕ ತಂತ್ರಜ್ಞಾನದಿಂದ ಪಡೆಯಲಾಗಿದೆ. ಘರ್ಷಣೆ ಸುರಕ್ಷತೆ, ರಚನಾತ್ಮಕ ಬಿಗಿತ ಮತ್ತು ವರ್ಧಿತ ಪ್ರಯಾಣಿಕರ ರಕ್ಷಣೆಗೆ ಸುಧಾರಣೆ ಒಳಗೊಂಡಿದೆ. ಹೆಚ್ಚುವರಿ ಪವರ್ ಮತ್ತು ವರ್ಧಿತ ADAS ಪ್ಯಾಕೇಜ್‌ನೊಂದಿಗೆ, EV6 ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಿಯಾ ಕಂಪನಿ ಭರವಸೆ ನೀಡಿದೆ.

ಕಿಯಾದ ಹೊಸ EV6 ಹಿಂದೆಂದಿಗಿಂತಲೂ ಆಕರ್ಷಕ ಡಿಸೈನ್, ಪವರ್ ಮತ್ತು ತಂತ್ರಜ್ಞಾನದೊಂದಿಗೆ ವಿದ್ಯುದ್ದೀಕರಿಸುವ ಮುನ್ನಡೆಯಾಗಿದೆ. ಕಿಯಾದ ಮೊದಲ ಮೀಸಲಾದ EV ಯ ರಿಫ್ರೆಶ್ ಆವೃತ್ತಿಯಾಗಿ, ವಾಹನವು ಮಾರುಕಟ್ಟೆಯಲ್ಲಿ ಅತ್ಯಂತ ಮುಂದುವರಿದ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಿ ತನ್ನ ಸ್ಥಾನವನ್ನು ಬಲಪಡಿಸುವ ಗಮನಾರ್ಹ ಅಪ್‌ಡೇಟ್‌ಗಳನ್ನು ಹೊಂದಿದೆ.
ಈ ಕಾರು ಹೆಚ್ಚು ಸ್ಪೋರ್ಟಿಯರ್ ಮತ್ತು ಹೆಚ್ಚು ಆಕ್ರಮಣಕಾರಿ ಮುಂಭಾಗದ ಡಿಸೈನ್ ಹೊಂದಿದೆ. ಕನೆಕ್ಟೆಡ್ DRL ಗಳೊಂದಿಗೆ ಹೊಸ ಸಿಗ್ನೇಚರ್ ಸ್ಟಾರ್ ಮ್ಯಾಪ್ ಲೈಟಿಂಗ್, ಮುಂಭಾಗದ GT-ಲೈನ್ ಸ್ಟೈಲಿಂಗ್ ಬಂಪರ್, 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಸ್ಟಾರ್-ಮ್ಯಾಪ್ LED ಹಿಂಭಾಗದ ಲ್ಯಾಂಪ್‌ಗಳು ಸೇರಿದಂತೆ 15 ವರ್ಧನೆಗಳೊಂದಿಗೆ, ಹೊಸ EV6 ಅದರ ಹಿಂದಿನ ಮಾಡೆಲ್‌ಗಿಂತ ಹೆಚ್ಚು ಆಕರ್ಷಕವಾಗಿದೆ.

ಒಳಗೆ, ಹೊಸ EV6 ಇನ್ನೂ ಹೆಚ್ಚು ಪ್ರೀಮಿಯಂ ಮತ್ತು ವಿಶಾಲವಾದ ಕ್ಯಾಬಿನ್ ಹೊಂದಿದೆ. ಹ್ಯಾಂಡ್ಸ್-ಆನ್ ಫೈಂಡ್ ತಂತ್ರಜ್ಞಾನದೊಂದಿಗೆ ಡಬಲ್ D-ಕಟ್ ಸ್ಟೀರಿಂಗ್ ವೀಲ್‌ನಂತಹ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಈಗ ಶಕ್ತಿಯುತವಾದ 84-kWh ಬ್ಯಾಟರಿಯನ್ನು ಹೊಂದಿದ್ದು, 650 ಕಿ.ಮೀಗಿಂತ ಹೆಚ್ಚಿನ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
325 PS ಪವರ್ ಮತ್ತು 605 Nm ಟಾರ್ಕ್ ಉತ್ಪಾದನೆಯೊಂದಿಗೆ, ನವೀಕರಿಸಿದ EV6 ರೋಮಾಂಚಕಾರಿ ಚಾಲನಾ ಅನುಭವವನ್ನು ನೀಡುತ್ತದೆ. ತನ್ನ 350-kW ಸ್ಪೀಡ್ ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ ಶೇ10 ರಿಂದ ಶೇ80 ರಷ್ಟು ಚಾರ್ಜ್ ಮಾಡಬಹುದು. ಒಟ್ಟಾರೆಯಾಗಿ ಹೊಸ EV6 ಭಾರತೀಯ ರಸ್ತೆಗಳಲ್ಲಿನ ಸುರಕ್ಷಿತ ಹಾಗೂ ಪವರ್‌ಫುಲ್ ಎಲೆಕ್ಟ್ರಿಕ್ ವಾಹನಗಳಲ್ಲಿ ಒಂದಾಗಲಿದೆ ಎಂದು ಕಂಪನು ಭರವಸೆ ನೀಡದೆ.
ಹೊಸ EV6 ಡ್ಯುಯಲ್ 31.2cm (12.3-ಇಂಚಿನ) ಪನೋರಮಿಕ್ ಬಾಗಿದ ಡಿಸ್ಪ್ಲೆಯನ್ನು ಹೊಂದಿದೆ. ಇದು ಕಿಯಾದ ಮುಂದಿನ ಪೀಳಿಗೆಯ ಇನ್ಫೋಟೈನ್‌ಮೆಂಟ್ ಸಿಸ್ಟಮ್- ಕನೆಕ್ಟೆಡ್ ಕಾರ್ ನ್ಯಾವಿಗೇಷನ್ ಕಾಕ್‌ಪಿಟ್ ಅನ್ನು ಸಂಯೋಜಿಸುತ್ತದೆ. ವಾಹನವು ಕಿಯಾ ಕನೆಕ್ಟ್ 2.0 ಅನ್ನು ಸಹ ಹೊಂದಿದ್ದು, ಕಿಯಾ ಕನೆಕ್ಟ್ ಡಯಾಗ್ನೋಸ್ಟಿಕ್ಸ್ ಮತ್ತು ಓವರ್-ದಿ-ಏರ್ (OTA) ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಸಪೋರ್ಟ್ ಮಾಡುತ್ತದೆ.
ಹೆಚ್ಚುವರಿಯಾಗಿ, ಡಿಜಿಟಲ್ ಕೀ 2.0 (ಅಲ್ಟ್ರಾ-ವೈಡ್‌ಬ್ಯಾಂಡ್ ತಂತ್ರಜ್ಞಾನವನ್ನು ಒಳಗೊಂಡಿದೆ) ಹೊಂದಾಣಿಕೆಯ ಸ್ಮಾರ್ಟ್‌ಫೋನ್ ಅನ್ನು ವರ್ಚುವಲ್ ಕೀ ಆಗಿ ಪರಿವರ್ತಿಸುತ್ತದೆ. ಇದು ಹೊಸ ಮಟ್ಟದ ಅನುಕೂಲತೆಯನ್ನು ನೀಡುತ್ತದೆ ಎಂದು ಕಿಯಾ ಹೇಳಿಕೊಂಡಿದೆ. ಒಟ್ಟಾರೆ ಈ ಕಾರು ಭಾರತದಲ್ಲಿ ಸದ್ಯದ ಎಲ್ಲಾ ಪ್ರೀಮಿಯಂ ಕಾರುಗಳ ಸಾಲಿನಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತದೆ ಎಂದು ಕಂಪನಿ ಹೇಳಿದೆ.


Click it and Unblock the Notifications








