ಕಳಪೆ ಕಾರುಗಳನ್ನು ಖರೀದಿಸಬೇಡಿ: ಭಾರತದ ಇತ್ತೀಚಿನ ಸುರಕ್ಷಿತ 5-ಸ್ಟಾರ್ ರೇಟೆಡ್ ಕಾರುಗಳಿವು!

ಭಾರತದಲ್ಲಿ ಕಾರುಗಳನ್ನು ಕ್ರ್ಯಾಶ್ ಟೆಸ್ಟ್ ಮಾಡುವ ಮೂಲಕ ಅವುಗಳ ನಿರ್ಮಾಣ ಗುಣಮಟ್ಟವನ್ನು ನಿರ್ಧರಿಸುವ ಭಾರತ್ ಎನ್‌ಸಿಎಪಿ (Bharat New Car Assessment Program), ಭಾರತೀಯ ಖರೀದಿದಾರರಿಗೆ ಯಾವ ಕಾರು ಎಷ್ಟು ಸುರಕ್ಷಿತ ಎಂಬುದರ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ. ಪ್ರಯಾಣಿಕರ ರಕ್ಷಣೆಯ ದೃಷ್ಟಿಯಿಂದ ಇತ್ತೀಚಿನ ಕಾರು ಮಾದರಿಗಳನ್ನು ಹೆಚ್ಚಿನ ಕಂಪನಿಗಳು ಮೌಲ್ಯಮಾಪನಕ್ಕಾಗಿ ಭಾರತ್ ಎನ್‌ಸಿಎಪಿಗೆ ಕಳುಹಿಸಿವೆ. ಫಲಿತಾಂಶವನ್ನು ಕೂಡ ಬಂದಿದೆ, ಹಾಗಾದ್ರೆ ಭಾರತ್ ಎನ್‌ಸಿಎಪಿ ನಡೆಸಿದ ಪರೀಕ್ಷೆಯಲ್ಲಿ ಯಾವ ಕಾರು ಎಷ್ಟು ಸ್ಕೋರ್ ಮಾಡಿದೆ ಬನ್ನಿ ನೋಡೋಣ.

ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಸಿಟ್ರನ್ ಸಿ3 ಏರ್‌ಕ್ರಾಸ್ ಬೆಲೆಯು 8.29 ಲಕ್ಷ ರೂ. (ಎಕ್ಸ್ ಶೋರೂಂ)ದಿಂದ ಆರಂಭವಾಗಿ 13.69 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 27.05 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 40 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

latest-bharat-ncap-5-star-rated-cars-in-india

ಮಾರುತಿ ಸುಜುಕಿ ಇನ್ವಿಕ್ಟೋ: ಹೊಸ ಇನ್ವಿಕ್ಟೋ ಸ್ಟ್ರಾಂಗ್ ಹೈಬ್ರಿಡ್ ಎಸ್‌ಯುವಿ ಬೆಲೆಯು ರೂ.24.97 ಲಕ್ಷ (ಎಕ್ಸ್ ಶೋರೂಂ)ದಿಂದ ಆರಂಭವಾಗಿ ರೂ.28.70 ಲಕ್ಷದ (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 30.43 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 45 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

ಟಾಟಾ ಆಲ್ಟ್ರೊಜ್: ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಆಲ್ಟ್ರೊಜ್ ಹ್ಯಾಚ್‌ಬ್ಯಾಕ್ ಬೆಲೆಯು 6.30 ಲಕ್ಷ ರೂ. (ಎಕ್ಸ್ ಶೋರೂಂ)ದಿಂದ ಆರಂಭವಾಗಿ 10.15 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 29.65 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 44.90 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

latest-bharat-ncap-5-star-rated-cars-in-india

ಮಾರುತಿ ಸುಜುಕಿ ವಿಕ್ಟೋರಿಸ್: ಮಾರುತಿ ವಿಕ್ಟೋರಿಸ್ ಬೆಲೆಯು ರೂ. 10.50 ಲಕ್ಷದಿಂದ 19.99 ಲಕ್ಷ ರೂ.ಗಳ (ಎಕ್ಸ್‌ ಶೋರೂಂ) ನಡುವೆ ಇದೆ. ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಿಗೆ 31.66 ಮತ್ತು ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 43 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಇದನ್ನು ಅಂಡರ್ ಬಾಡಿ-ಮೌಂಟೆಡ್ ಟ್ಯಾಂಕ್ ಹೊಂದಿರುವ ಸಿಎನ್‌ಜಿ ವೇರಿಯೆಂಟ್‌ಗಳಿಗೆ ಸಹ ಬಳಸಲಾಗುತ್ತದೆ.

ಟೊಯೊಟಾ ಇನೋವಾ ಹೈಕ್ರಾಸ್: ಹೊಸ ಇನ್ನೋವಾ ಹೈಕ್ರಾಸ್ ಭಾರತ್ ಎನ್‌ಸಿಎಪಿಯಿಂದ ರೇಟ್ ಪಡೆದ ಮೊದಲ ಎಂಪಿವಿ ಆಗಿದ್ದು, ಬೆಲೆಯು ರೂ.18.05 ಲಕ್ಷ (ಎಕ್ಸ್ ಶೋರೂಂ)ದಿಂದ ಆರಂಭವಾಗಿ ರೂ.31.90 ಲಕ್ಷದ (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 30.47 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 45 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

latest-bharat-ncap-5-star-rated-cars-in-india

ಟಾಟಾ ಹ್ಯಾರಿಯರ್ ಇವಿ: ಹೊಸ ಹ್ಯಾರಿಯರ್ ಇವಿ ಬೆಲೆಯು 21.50 ಲಕ್ಷ ರೂ. (ಎಕ್ಸ್ ಶೋರೂಂ)ದಿಂದ ಆರಂಭವಾಗಿ 29.49 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 32 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 45 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

ಮಾರುತಿ ಸುಜುಕಿ ಡಿಜೈರ್: ಡಿಜೈರ್ ಮಾರುತಿ ಸುಜುಕಿಯ ಮೊದಲ 5-ಸ್ಟಾರ್ ಸುರಕ್ಷತೆ ಗಳಿಸಿರುವ ಕಾರಾಗಿದೆ. ಇದರ ಬೆಲೆಯು 6.25 ಲಕ್ಷ ರೂ. (ಎಕ್ಸ್ ಶೋರೂಂ)ದಿಂದ ಆರಂಭವಾಗಿ 9.31 ಲಕ್ಷ ರೂ. (ಎಕ್ಸ್ ಶೋರೂಂ)ವರೆಗೆ ಇದೆ. ಭಾರತ್ ಎನ್‌ಸಿಎಪಿ ನಿರ್ವಹಿಸಿದ ಪರೀಕ್ಷೆಯಲ್ಲಿ ವಯಸ್ಕರ ರಕ್ಷಣೆಯಲ್ಲಿ 32 ಅಂಕಗಳಲ್ಲಿ 29.46 ಅಂಕಗಳನ್ನು ಗಳಿಸಿದರೆ ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಲ್ಲಿ 41.57 ಅಂಕಗಳನ್ನು ಗಳಿಸಿದೆ. ಒಟ್ಟಾರೆ ಪರೀಕ್ಷೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ.

More from DriveSpark

Article Published On: Friday, November 21, 2025, 10:01 [IST]
English summary
Latest bharat ncap 5 star rated cars in india
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+