ವಾಹನ ಲೋಕದ ಸುರ-ಸುಂದರನಿವನು: ಅರಮನೆಯಂತಹ ಇಂಟೀರಿಯರ್... ಸೆಲೆಬ್ರಿಟಿಗಳು ಮುಗಿಬಿದ್ದು ಖರೀದಿ!

ಭಾರತದಲ್ಲಿ ಅಗ್ಗದ ಕಾರುಗಳನ್ನು ನೀಡುವ ಮಾರುತಿ ಸುಜುಕಿ ಕಂಪನಿಗೆ ಬಡ ಹಾಗೂ ಮಧ್ಯಮ ವರ್ಗದಲ್ಲಿ ಭಾರೀ ಬೇಡಿಕೆ ಇದೆ. ಹಾಗೆಯೇ ಶ್ರೀಮಂತರು ಇಷ್ಟಪಡುವ ಕೆಲ ಐಷಾರಾಮಿ ಕಾರುಗಳಿವೆ, ಅದರಲ್ಲೂ ತುಂಬಾ ಆರಾಮ ಹಾಗೂ ಐಷಾರಾಮಿತನವನ್ನು ಈಡೇರಿಸುವ ಪ್ರಮುಖ ಕಾರುಗಳಲ್ಲಿ ಒಂದಾಗಿರುವ ಲೆಕ್ಸಸ್ ಎಲ್‌ಎಂ 350ಹೆಚ್ (Lexus LM 350h) ಅತ್ಯಂತ ಡಿಮ್ಯಾಂಡ್ ಹೊಂದಿರುವ ಕಾರಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು ಉದ್ಯಮಿಗಳವರೆಗೆ ಬಹುತೇಕರ ಫೇವರೆಟ್ ಕಾರು ಕೂಡ ಹೌದು. ಶ್ರೀಮಂತರು ಅಷ್ಟು ಇಷ್ಟಪಡಲು ಈ ಕಾರಿನಲ್ಲಿ ಅಂತಹದ್ದೇನಿದೆ?

ಈ ಲೆಕ್ಸಸ್ LM 350h (Lexus LM 350h) ಕಾರನ್ನು ಬುಕ್ ಮಾಡುವವರಿಗೆ ಸಂಪೂರ್ಣವಾಗಿ ಬಿಲ್ಟ್-ಅಪ್ (CBU) ವಾಹನವಾಗಿ ಭಾರತಕ್ಕೆ ತಂದು ಡೆಲಿವರಿ ನೀಡಲಾಗುತ್ತದೆ. 5,125 mm ಉದ್ದ, 1,890 mm ಅಗಲ ಮತ್ತು 1,945 mm ಎತ್ತರ, 3,000 mm ಉದ್ದದ ವೀಲ್‌ಬೇಸ್‌ ಅನ್ನು ಹೊಂದಿದ್ದು, ಪ್ರಯಾಣಿಕರಿಗೆ ವಿಮಾನದಂತಹ ಇಂಟೀರಿಯರ್ ಸೌಕರ್ಯವನ್ನು ನೀಡುತ್ತದೆ.

lexus-lm-350h-price-features-mileage-details

ಬೆಲೆಗಳ ವಿಷಯಕ್ಕೆ ಬಂದರೆ ಈ ಹೊಸ ಲೆಕ್ಸಸ್ LM 350h ಮಿನಿವ್ಯಾನ್ 7-ಸೀಟರ್ VIP ಹಾಗೂ 4-ಸೀಟರ್ ಅಲ್ಟ್ರಾ ಲಕ್ಸುರಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತದೆ. ಇದರಲ್ಲಿ 7-ಸೀಟರ್ VIP ರೂಪಾಂತರ ಬೆಲೆಯು ರೂ. 2 ಕೋಟಿಯಾಗಿದ್ದರೆ, 4-ಸೀಟರ್ ಅಲ್ಟ್ರಾ ಲಕ್ಸುರಿ ರೂಪಾಂತರದ ಬೆಲೆಯು ರೂ. 2.50 ಕೋಟಿ (ಎರಡು ಎಕ್ಸ್ ಶೋರೂಂ ಬೆಲೆಗಳು) ಆಗಿದೆ.

ಈ ಮಿನಿವ್ಯಾನ್ ಇಂಟೀರಿಯರ್ ಫೀಚರ್ಸ್ ವಿಷಯಕ್ಕೆ ಬಂದರೆ, ಒಳಗೆ ರೆಫ್ರಿಜರೇಟರ್, ಸ್ಟೋರೇಜ್ ವಿಭಾಗಗಳು, ಹಿಟೆಡ್ ಆರ್ಮ್ ರೆಸ್ಟ್‌ಗಳು ಮತ್ತು ಬಾಡಿಯ ಉಷ್ಣತೆಯನ್ನು ಪತ್ತೆಹಚ್ಚುವ ಮತ್ತು HVAC ಅನ್ನು ನಿಯಂತ್ರಿಸುವ ಸುಧಾರಿತ ತಾಪಮಾನ ಮತ್ತು ಕೂಲಿಂಗ್ ಸಿಸ್ಟಂ ಸಹ ಅದರ ಒಳಾಂಗಣದ ಒಂದು ಭಾಗವಾಗಿದೆ. ಅತ್ಯುತ್ತಮವಾದ ಸೌಕರ್ಯವನ್ನು ನೀಡುವ ದೊಡ್ಡ ಸೀಟುಗಳನ್ನು ಸಹ ಒಳಗೊಂಡಿದೆ.

lexus-lm-350h-price-features-mileage-details

ಲೆಕ್ಸಸ್ LM 350h ಎರಡೂ ರೂಪಾಂತರಗಳು ಒಂದೇ 2.5-ಲೀಟರ್, ನಾಲ್ಕು-ಸಿಲಿಂಡರ್ ಪೆಟ್ರೋಲ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಸಿಸ್ಟಮ್‌ನೊಂದಿಗೆ ಬರುತ್ತವೆ. ಇದು 190 bh ಪವರ್ ಮತ್ತು 240 Nm ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು 19.28 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

ಈ ಕಾರಿನ ಸೌಕರ್ಯಯುತ ಪ್ರಯಾಣವನ್ನು ಖಚಿತಪಡಿಸುವ ಒಂದಷ್ಟು ಯಾಂತ್ರಿಕ ಘಟಕಗಳಿವೆ. ಅವುಗಳೆಂದರೆ ಸೂಕ್ಷ್ಮ ಪಿಸ್ಟನ್ ಸುಧಾರಿತ AVS ಸಸ್ಪೆಕ್ಷನ್ ಅನ್ನು ಹೊಂದಿದ್ದು, ಸುಗಮ ಸವಾರಿಯನ್ನು ನೀಡುವುದಲ್ಲದೆ ಕಾರಿನೊಳಗಿನ ಕಂಪನಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಇದು ಒಳಗಿನ ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸುವಂತಹ ಅನುಭವ ನೀಡುತ್ತದೆ.

lexus-lm-350h-price-features-mileage-details

ಹೊಸ ಲೆಕ್ಸಸ್ LM ಸುರಕ್ಷತಾ ಫೀಚರ್ಸ್ ದೀರ್ಘ ಪಟ್ಟಿಯೊಂದಿಗೆ ಬರುತ್ತದೆ. ಇವುಗಳಲ್ಲಿ ಡೈನಾಮಿಕ್ ರಾಡಾರ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ಅಲರ್ಟ್ ಮತ್ತು ಅಸಹಜ ಡ್ರೈವರ್ ರೆಸ್ಪಾನ್ಸ್ ಸಿಸ್ಟಮ್ ಅನ್ನು ಒಳಗೊಂಡಿದೆ. ಪ್ರೀ-ಕೊಲಿಷನ್ ವಾರ್ನಿಂಗ್, ಪ್ರಿ-ಕೊಲಿಶನ್ ಬ್ರೇಕ್ ಅಸಿಸ್ಟ್ ಮತ್ತು ಪ್ರಿ-ಕೊಲಿಶನ್ ಬ್ರೇಕಿಂಗ್ ಸೇರಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 8, 2025, 11:28 [IST]
English summary
Lexus lm 350h price features mileage details
Read more on lexus india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+