ಮಹೀಂದ್ರಾದ ಹೊಸ ಕಾರಿಗೆ ಫುಲ್ ಡಿಮ್ಯಾಂಡ್.. ಪ್ರಿ-ಬುಕ್ಕಿಂಗ್ ಶುರು, ಉತ್ಪಾದನೆ ಪ್ರಮಾಣ 3 ಪಟ್ಟು ಹೆಚ್ಚಳ!

ಇದೇ ಆಗಸ್ಟ್ 14ರಂದು ನೂತನ ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ (Mahindra BE 6 Batman Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತು. ಈ ಕಾರು ಹೊರಭಾಗದಲ್ಲಿ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಅದು ನೋಡುಗರ ಕಣ್ಣು ಕುಕ್ಕುವಂತಿದೆ. ಸದ್ಯ ಹೊಸ 'ಬ್ಯಾಟ್‌ಮ್ಯಾನ್ ಎಡಿಷನ್'ಗೆ ಗ್ರಾಹಕರಿಂದ ನೀರಿಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ನೂತನ 'ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್'ಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಉತ್ಪಾದನೆ ಪ್ರಮಾಣವು 3 ಪಟ್ಟು ಹೆಚ್ಚಳಗೊಂಡಿದೆ. ಒಟ್ಟು 999 ಯುನಿಟ್‌ಗಳನ್ನು ತಯಾರಿಸಲು ಕಂಪನಿಯು ನಿರ್ಧರಿಸಿದೆ. ಈ ಮೊದಲು ಕೇವಲ 300 ಯುನಿಟ್‌ಗಳನ್ನು ಮಾತ್ರ ಉತ್ಪಾದನೆ ಮಾಡುವುದಾಗಿ ಘೋಷಣೆ ಮಾಡಿತ್ತು.

Mahindra BE 6 Batman Edition Pre-Bookings Open Details

ನಾಳೆ (ಆಗಸ್ಟ್ 23) ಬೆಳಗ್ಗೆ 11 ಗಂಟೆಯಿಂದ ಮಹೀಂದ್ರಾ ಕಂಪನಿಯು ಹೊಸ 'ಬ್ಯಾಟ್‌ಮ್ಯಾನ್ ಎಡಿಷನ್' ಕಾರಿಗೆ ಅಧಿಕೃತವಾಗಿ ಬುಕ್ಕಿಂಗ್‌ನ್ನು ಸ್ವೀಕರಿಸಲಿದೆ. ಅದರ ಹೊರತಾಗಿಯೂ ಗುರುವಾರದಿಂದಲೇ ಈ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಪ್ರಿ-ಆರ್ಡರ್‌ನ್ನು ತೆಗೆದುಕೊಳ್ಳುವುದಕ್ಕೆ ಶುರು ಮಾಡಿದೆ. ಆಸಕ್ತರು ರೂ.21,000 ಮುಂಗಡ ಹಣ ಪಾವತಿಸಿ ಕಾಯ್ದಿರಿಸಬಹುದು. ಸೆಪ್ಟೆಂಬರ್ 20 ರಂದು ವಿತರಣೆಗಳು ಪ್ರಾರಂಭವಾಗಲಿದೆ. ಇದು ರೂ.27.79 ಲಕ್ಷ (ಎಕ್ಸ್-ಶೋರೂಂ) ದರವನ್ನು ಹೊಂದಿದೆ.

ಮಹೀಂದ್ರಾ ಮತ್ತು ಕಾಮಿಕ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ವಾರ್ನರ್ ಬ್ರದರ್ಸ್ ಒಡಂಬಡಿಕೆ ಮಾಡಿಕೊಂಡಿವೆ. ಇದರಿಂದಾಗಿ ಹೊಸ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ ಹೊರಭಾಗದ ವಿನ್ಯಾಸದಲ್ಲಿ ಬ್ಯಾಟ್‌ಮ್ಯಾನ್ ಸಿನಿಮಾ & ಕಾಮಿಕ್ಸ್‌ಗಳಲ್ಲಿ ಕಾಣಸಿಗುವ ಅಂಶಗಳನ್ನೇ ಹೆಚ್ಚಾಗಿ ಬಳಸಲಾಗಿದೆ. ಈ ಕಾರು ಕಸ್ಟಮ್ ಸ್ಯಾಟಿನ್ ಬ್ಲ್ಯಾಕ್ ಬಾಡಿ ಕಲರ್ ಮತ್ತು ಫ್ರಂಟ್ ಡೋರ್‌ನಲ್ಲಿ ಕಸ್ಟಮ್ ಬ್ಯಾಟ್‌ಮ್ಯಾನ್ ಡೆಕಲ್‌ಗಳನ್ನು ಪಡೆದಿದೆ.

ಇದು ಮಾತ್ರವಲ್ಲದೆ ಸ್ಟ್ಯಾಂಡರ್ಡ್ 'ಬಿಇ 6' ಮಾಡೆಲ್‌ನಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಡಿಆರ್‌ಎಲ್‌ಗಳು, 20-ಇಂಚಿನ ಅಲಾಯ್ ವೀಲ್‌ಗಳು, ಫಂಕಿ ಸ್ಪಾಯ್ಲರ್ ಮತ್ತು ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. 4,371 ಎಂಎಂ ಉದ್ದ, 1,907 ಎಂಎಂ ಅಗಲ & 1,627 ಎಂಎಂ ಎತ್ತರ ಕೂಡ ಇದೆ. 207 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 2,775 ಎಂಎಂ ವೀಲ್‌ಬೇಸ್‌ನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ 2415 ಕೆಜಿ ತೂಕವಿದೆ.

ಈ ಕಾರು ಒಂದೇ ಪವರ್‌ಟ್ರೇನ್‌ ಆಯ್ಕೆಯನ್ನು ಪಡೆದಿದೆ. 79 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 682 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿರುವ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟಾರ್, 285 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 380 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ.

ಮಹೀಂದ್ರಾ ಬಿಇ 6 ಬ್ಯಾಟ್‌ಮ್ಯಾನ್ ಎಡಿಷನ್ 202 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 6.7 ಸೆಕೆಂಡುಗಳಲ್ಲಿ 0 ರಿಂದ 100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಈ ಕಾರಿನ ಬ್ಯಾಟರಿ ಪ್ಯಾಕ್ 140 ಕೆಡಬ್ಲ್ಯೂ ಡಿಸಿ ಫಾಸ್ಟ್ ಚಾರ್ಜರ್ ಬಳಕೆಯಲ್ಲಿ 20 ನಿಮಿಷಗಳಲ್ಲೇ 20 ರಿಂದ 80% ಚಾರ್ಜ್ ಆಗಿ ಬಿಡುತ್ತದೆ.

ನೂತನ ಬ್ಯಾಟ್‌ಮ್ಯಾನ್ ಎಡಿಷನ್ ಕ್ಯಾಬಿನ್ ವಿನ್ಯಾಸವು ಚೆನ್ನಾಗಿದ್ದು, ಆಲ್ ಬ್ಲ್ಯಾಕ್ ಪೇಂಟ್ ಸ್ಕೀಮ್‌ನ್ನು ಪಡೆದಿದೆ. 5 ಆಸನಗಳನ್ನು ಒಳಗೊಂಡಿದೆ. ಜಾಸ್ತಿ ಲಗೇಜ್ ತೆಗೆದುಕೊಂಡು ಹೋಗಲು 455 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಪಡೆದಿದೆ. ಇನ್ಫೋಟೈನ್‌ಮೆಂಟ್ & ಇನ್ಸ್ಟ್ರುಮೆಂಟೇಶನ್ ಸ್ಕ್ರೀನ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್‌ಗಳು ಹಾಗೂ ಮ್ಯಾಗ್ನೆಟಿಕ್ ಕೀ-ಫೋಬ್‌ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಕಾರು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ 7 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿ - ಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್ 2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) & 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.

More from DriveSpark

Article Published On: Friday, August 22, 2025, 16:17 [IST]
English summary
Mahindra be 6 batman edition pre bookings open details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+