682 ಕಿ.ಮೀ ರೇಂಜ್.. ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರಿನ ವಿತರಣೆ ಶುರು.. ಪಟಾಕಿ ಸಿಡಿಸಿ ಸಂಭ್ರಮಾಚರಣೆ!
ಮಹೀಂದ್ರಾ & ಮಹೀಂದ್ರಾ (Mahindra & Mahindra), ಪ್ರಖ್ಯಾತ ಸ್ವದೇಶಿ ಕಾರು ತಯಾರಕ ಕಂಪನಿಯಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ವಿದೇಶಿ ಕಾರುಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಹೊಚ್ಚ ಹೊಸ ಬಿಇ 6 (BE 6) ಮತ್ತು ಎಕ್ಸ್ಇವಿ 9ಇ (XEV 9e) ಎಂಬ ಎರಡು ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಈಗಾಗಲೇ ದೇಶಾದ್ಯಂತ ಗ್ರಾಹಕರಿಗೂ ಕಂಪನಿಯು ಈ ಕಾರುಗಳನ್ನು ವಿತರಿಸುವುದಕ್ಕೆ ಶುರು ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ನೂತನ ಮಹೀಂದ್ರಾ ಬಿಇ 6 (Mahindra BE 6) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿದಾರರು ಕೂಡ ಬಹಳ ಸಂಭ್ರಮದಿಂದ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಿನ್ನೆಯಷ್ಟೇ ಉತ್ತರಖಂಡದ ಡೀಲರ್‌ಶಿಪ್‌ವೊಂದರಲ್ಲಿ ಇದೇ ಕಾರನ್ನು ಕುಟುಂಬವೊಂದು ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಖುಷಿಯಿಂದ ವಿತರಣೆ ಪಡೆದಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಹೀಂದ್ರಾ ಬಿಇ 6 ವಿಶೇಷತೆಗಳೇನು: ಈ ಕಾರು ಕನಿಷ್ಠ ರೂ.18.90 ಲಕ್ಷ ಹಾಗೂ ಗರಿಷ್ಠ ರೂ.26.90 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು 79 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 682 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತದೆ.
ಈ ಕಾರು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ಉತ್ತಮವಾಗಿರುವ ಹೆಡ್‌ಲ್ಯಾಂಪ್‌ಗಳು, 'ಜೆ' ಆಕಾರದಂತಿರುವ ಡಿಆರ್‌ಎಲ್‌ಗಳು, 20-ಇಂಚಿನ ವೀಲ್‌ಗಳು, ಫ್ಲಶ್ - ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ. ಇದು 5 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದ್ದು, ಪ್ರಯಾಣಿಕರು ಸುಲಭವಾಗಿ ಓಡಾಟ ನಡೆಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು 455 ಲೀ. ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

ನೂತನ ಮಹೀಂದ್ರಾ ಬಿಇ 6 ಕಾರು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ & ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಡುಯಲ್ ಸ್ಕ್ರೀನ್, ಟೂ-ಸ್ಪೋಕ್ ಸ್ಟೀರಿಂಗ್ ವೀಲ್, ವೆಂಟಿಲೇಟೆಡ್ ಸೀಟ್‌ಗಳು, ವೈರ್‌ಲೆಸ್ ಚಾರ್ಜರ್‌ಗಳು ಹಾಗೂ 16-ಸ್ಪೀಕರ್ ಹರ್ಮನ್ ಕಾರ್ಡನ್ ಮ್ಯೂಸಿಕ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಮಲ್ಟಿಪಲ್ ಏರ್‌ಬ್ಯಾಗ್‌ಗಳು, ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಮತ್ತು 360 ಡಿಗ್ರಿ ಕ್ಯಾಮೆರಾಗಳನ್ನು ಪಡೆದಿದೆ.
ಮಹೀಂದ್ರಾ ಎಕ್ಸ್ಇವಿ 9ಇ (Mahindra XEV 9e) ವಿತರಣೆಯೂ ಶುರುವಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ, ರೂ.21.90 ಲಕ್ಷದಿಂದ ರೂ.30.50 ಲಕ್ಷ (ಎಕ್ಸ್-ಶೋರೂಂ) ದರವನ್ನು ಒಳಗೊಂಡಿದೆ. 59 ಕೆಡಬ್ಲ್ಯೂಹೆಚ್ & 79 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 542 ರಿಂದ 656 ಕಿಲೋಮೀಟರ್ ಓಡುತ್ತದೆ.
ಈ ಕಾರಿನಲ್ಲಿಯೂ 5 ಮಂದಿ ಸುಲಭವಾಗಿ ಓಡಾಟ ನಡೆಸಬಹುದು. ಸ್ಟೆಲ್ತ್ ಬ್ಲ್ಯಾಕ್, ನೆಬ್ಯುಲಾ ಬ್ಲೂ, ಟ್ಯಾಂಗೋ ರೆಡ್, ಎವರೆಸ್ಟ್ ವೈಟ್, ಎವರೆಸ್ಟ್ ವೈಟ್ ಸ್ಯಾಟಿನ್ ಹಾಗೂ ಡೆಸರ್ಟ್ ಮಿಸ್ಟ್ ಸ್ಯಾಟಿನ್ ಎಂಬ ಬಣ್ಣಗಳನ್ನು ಒಳಗೊಂಡಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ & ಪ್ಯಾಸೆಂಜರ್-ಸೈಡ್ ಡಿಸ್‌ಪ್ಲೇಗಾಗಿ 12.3-ಇಂಚಿನ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 7 ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








