ನಿನ್ನೆಯಷ್ಟೆ ಅದ್ದೂರಿಯಾಗಿ ಬಿಡುಗಡೆ: ಮಹೀಂದ್ರಾ BE 6 ಫಾರ್ಮುಲಾ ಇ ಎಡಿಷನ್ ವಿಶೇಷತೆಗಳು
ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿ ಮಹೀಂದ್ರಾ ತನ್ನ ಹೊಸ ಎಲೆಕ್ಟ್ರಿಕ್ ಎಸ್‌ಯುವಿ BE 6 ಅನ್ನು ಇದೀಗ ಫಾರ್ಮುಲಾ-ಇ ಎಡಿಷನ್‌ನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ.23.69 ಲಕ್ಷದಿಂದ ರೂ.24.49 ಲಕ್ಷ (ಎಕ್ಸ್-ಶೋರೂಂ) ವರೆಗೆ ಇದೆ, ಎಫ್ಇ2 (FE2) ಹಾಗೂ ಎಫ್ಇ3 (FE3) ಎಂಬ ವೇರಿಯೆಂಟ್‌ಗಳಲ್ಲಿ ಸಿಗುತ್ತದೆ. ಜನವರಿ 14, 2026 ರಿಂದ ಬುಕ್ಕಿಂಗ್ ತೆರೆಯಲಾಗುವುದು ಹಾಗೆಯೇ ಫೆಬ್ರವರಿ 14, 2026 ರಿಂದ ವಿತರಣೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಮಹೀಂದ್ರಾ ಕಂಪನಿ ತಿಳಿಸಿದೆ.
BE 6 ಫಾರ್ಮುಲಾ-ಇ ಎಡಿಷನ್ ವಿಶೇಷತೆಗಳು: ವೃತ್ತಾಕಾರದ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಶೈನಿಂಗ್ ಬ್ಲಾಕ್ ಬೆಜೆಲ್ ಫಿನಿಶ್ ಮತ್ತು ಆರೆಂಜ್ ಅಕ್ಸೆಂಟ್‌ಗಳೊಂದಿಗೆ ಹೊಚ್ಚ ಹೊಸ ಸಿಗ್ನೇಚರ್ ಫ್ರಂಟ್ ಬಂಪರ್‌ನೊಂದಿಗೆ ಸಜ್ಜುಗೊಂಡಿದೆ. ಎವರೆಸ್ಟ್ ವೈಟ್, ಫೈರ್‌ಸ್ಟಾರ್ಮ್ ಆರೆಂಜ್, ಟ್ಯಾಂಗೋ ರೆಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ನಾಲ್ಕು ಪ್ರೀಮಿಯಂ ಬಾಹ್ಯ ಬಣ್ಣ ಆಯ್ಕೆಗಳನ್ನು ಒಳಗೊಂಡಿದೆ.

ಬಂಪರ್‌ನಲ್ಲಿ ಫೈರ್‌ಸ್ಟಾರ್ಮ್ ಆರೆಂಜ್ ಮತ್ತು ಎವರೆಸ್ಟ್ ವೈಟ್ ಸಿಗ್ನೇಚರ್ ಅಕ್ಸೆಂಟ್ ಬಣ್ಣದ ಹೈಲೈಟ್‌ಗಳು, ಡಾರ್ಕ್ - ಟಿಂಟೆಡ್ ಸಿಗ್ನೇಚರ್ ವೀಲ್ ಫಿನಿಶ್‌ನೊಂದಿಗೆ ರೇಸ್‌ಟ್ರಾಕ್ - ಪ್ರೇರಿತ R20 ಅಲಾಯ್ ವೀಲ್‌ಗಳು, ಫೈರ್‌ಸ್ಟಾರ್ಮ್ ಆರೆಂಜ್ - ಬಣ್ಣದ ಬ್ರೇಕ್ ಕ್ಯಾಲಿಪರ್‌ಗಳು, ಸ್ಪೋರ್ಟಿ ರಿಯರ್ ಬೂಟ್ ಲಿಪ್ ಮತ್ತು ರೂಫ್ ಸ್ಪಾಯ್ಲರ್‌ಗಳು, ವಿಂಡ್‌ಶೀಲ್ಡ್‌ನಲ್ಲಿ "ಮಹೀಂದ್ರಾ ಫಾರ್ಮುಲಾ ಇ" ಸೆರಾಮಿಕ್ ಪೇಂಟ್ ಬ್ರ್ಯಾಂಡಿಂಗ್ ಹೊಂದಿದೆ.
ಫಿಕ್ಸೆಡ್ ಗ್ಲಾಸ್ ರೂಫ್ ಮತ್ತು ಬಾನೆಟ್‌ನಲ್ಲಿ ಸಿಗ್ನೇಚರ್ 12 ಸ್ಟ್ರೈಪ್ ಗ್ರಾಫಿಕ್ಸ್, ಸಿಗ್ನೇಚರ್ "ಬಿಇ 6 | ಫಾರ್ಮುಲಾ ಇ" ರಿಯರ್ ಬ್ಯಾಡ್ಜಿಂಗ್, ಡಾರ್ಕ್ ಲಿಕ್ವಿಡ್ ಮೆಟಲ್ ಪೇಂಟ್‌ನೊಂದಿಗೆ ಕೆಳಗಿನ ಕ್ಲಾಡಿಂಗ್, ಲಿಕ್ವಿಡ್ ಮೆಟಲ್ ಫಿನಿಶ್‌ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ಗಳು, ಡೋರ್‌ಗಳು, ಫೆಂಡರ್ ಮತ್ತು ಬಾನೆಟ್‌ನಲ್ಲಿ ರೇಸ್ - ಪ್ರೇರಿತ ಗ್ರಾಫಿಕ್ಸ್, ವಿಂಡ್‌ಸ್ಕ್ರೀನ್‌ನಲ್ಲಿ ಎಫ್‌ಐಎ ಬ್ರ್ಯಾಂಡಿಂಗ್ ನೀಡಲಾಗಿದೆ.

ಇಂಟೀರಿಯರ್ ವಿಶೇಷತೆಗಳು: ಫೈರ್‌ಸ್ಟಾರ್ಮ್ ಆರೆಂಜ್ - ಥೀಮ್ ಒಳಾಂಗಣ, ಫೈರ್‌ಸ್ಟಾರ್ಮ್ ಆರೆಂಜ್ FIA X ಫಾರ್ಮುಲಾ E ಎಡಿಷನ್ ಪ್ಯಾನಲ್, ಪ್ರಯಾಣಿಕರ ಡ್ಯಾಶ್‌ಬೋರ್ಡ್ ಪ್ಯಾನೆಲ್ ಮತ್ತು ಆಸನಗಳ ಮೇಲೆ ಫಾರ್ಮುಲಾ E ಲೋಗೋವನ್ನು ಇರಿಸಲಾಗಿದೆ. ಸೀಟ್ ಬೆಲ್ಟ್‌ಗಳ ಮೇಲೆ FIA ಬ್ರ್ಯಾಂಡಿಂಗ್, ಫೈರ್‌ಸ್ಟಾರ್ಮ್ ಆರೆಂಜ್-ಆಕ್ಸೆಂಟೆಡ್ ಸ್ಟೀರಿಂಗ್ ವೀಲ್, ಇನ್ - ಟಚ್ ಕಂಟ್ರೋಲರ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಡೋರ್ ಓಪನ್ ಸ್ಟ್ರಾಪ್‌ಗಳು ಇವೆ.
ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ 12.3 - ಇಂಚಿನ ಸೂಪರ್ ಸ್ಕ್ರೀನ್ಗಳು, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಅಮೆಜಾನ್ ಅಲೆಕ್ಸಾ ರೇರ್ ಎಸಿ ವೆಂಟ್‌ಗಳು, ವೆಂಟಿಲೇಟೆಡ್ ಸೀಟ್‌ಗಳು, ಡುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಹಾಗೂ ಸೋನಿಕ್ ಸ್ಟುಡಿಯೋ ಸೌಂಡ್ ಸಿಸ್ಟಮ್ ಸೇರಿದಂತೆ ವಿವಿಧ ವೈಶಿಷ್ಟ್ಯಹಗಳನ್ನು ಹೊಂದಿದೆ.

ಸುರಕ್ಷತೆಯ ವಿಷಯಕ್ಕೆ ಬಂದರೆ 7 - ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಆಟೋ ಪಾರ್ಕಿಂಗ್ ಅಸಿಸ್ಟ್ & 360 ಡಿಗ್ರಿ ಕ್ಯಾಮೆರಾ, ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಒಳಗೊಂಡಿದೆ.
ಮಹೀಂದ್ರಾ BE 6 ಫಾರ್ಮುಲಾ E ಆವೃತ್ತಿಯು 202 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಕೇವಲ 6.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪಬಲ್ಲದು. ಇದರ ಪವರ್‌ಫುಲ್ ಮೋಟಾರ್ 282 bhp (210 kW) ಪವರ್ ಹೊರಹಾಕುತ್ತದೆ. ಈ ಮೋಟಾರ್ ತನ್ನ 79 kWh ಬ್ಯಾಟರಿಯೊಂದಿಗೆ ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲದು.


Click it and Unblock the Notifications








