ಮಹೀಂದ್ರಾ ಕಾರು ಮಾರಾಟದಲ್ಲಿ ಗಣನೀಯ ಏರಿಕೆ: ಶೋರೂಂ ಎದುರು ಸಾಲುಗಟ್ಟಿ ನಿಂತ ಜನ!

ಜನಪ್ರಿಯ ಸ್ವದೇಶಿ ಕಾರು ತಯಾರಕ ಕಂಪನಿಯಾದ ಮಹೀಂದ್ರಾ (Mahindra) ತನ್ನ 2024ರ ಡಿಸೆಂಬರ್ ತಿಂಗಳ ಕಾರು ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಈ ಮಾರಾಟದ ವರದಿ ಪ್ರಕಾರ, ಕಳೆದ ತಿಂಗಳು ಮಹೀಂದ್ರಾ ಕಂಪನಿಯು ಒಟ್ಟು 69,768 ಯುನಿಟ್‌ಗಳನ್ನು ಮಾರಾಟ ಮಾಡುವುದರ ಮೂಲಕ 16 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಇನ್ನು ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 41,424 ಯುನಿಟ್‌ಗಳಷ್ಟು ಮಾರಾಟ ಮಾಡಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 18 ರಷ್ಟು ಹೆಚ್ಚಳವಾಗಿದೆ.

ಮಹೀಂದ್ರಾ ಕಂಪನಿಯ ರಫ್ತು ಸೇರಿದಂತೆ ಒಟ್ಟು ಯುಟಿಲಿಟಿ ವಾಹನಗಳ ಮಾರಾಟವು 42,958 ಯುನಿಟ್‌ಗಳಷ್ಟಿದೆ. ವಾಣಿಜ್ಯ ವಾಹನ ವಲಯವು ದೇಶೀಯ ಮಾರುಕಟ್ಟೆಯಲ್ಲಿ 19,502 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಉತ್ತಮ ಸಂಖ್ಯೆಯ ಮಾರಾಟವನ್ನು ಕಂಡಿದೆ. ಮಹೀಂದ್ರಾ ಕಂಪನಿಯು ಪ್ರಯಾಣಿಕ ವಾಹನ ವಿಭಾಗದಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಇನ್ನು FY2025ರ ಒಟ್ಟು ರಫ್ತುಗಳಲ್ಲಿ 22 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ.

Mahindra Car Sales

ಕೃಷಿ ಸಲಕರಣೆಗಳ ವಲಯವು 2024ರ ಡಿಸೆಂಬರ್ ತಿಂಗಳಿನಲ್ಲಿ ಬಲವಾದ ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ದೇಶೀಯ ಟ್ರಾಕ್ಟರ್ ಮಾರಾಟವು 22,019 ಯುನಿಟ್‌ಗಳಿಗೆ ಏರಿತು. 2023ರ ಡಿಸೆಂಬರ್ ತಿಂಗಳಿನಲ್ಲಿ 18,028 ಯುನಿಟ್‌ಗಳ ಮಾರಾಟವನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಹೀಂದ್ರಾ ಕಂಪನಿಯು 22 ಪ್ರತಿಶತ ಬೆಳವಣಿಗೆಯನ್ನು ಸಾಧಿಸಿದೆ.

ಮಹೀಂದ್ರಾ ಕಂಪನಿಯ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಅವರು ಮಾತನಾಡಿ, 18% ಬೆಳವಣಿಗೆಯನ್ನು ಪ್ರತಿಬಿಂಬಿಸುವ 41,424 ಎಸ್‍ಯುವಿಗಳನ್ನು ಮಾರಾಟ ಮಾಡುವುದರೊಂದಿಗೆ ನಾವು ಡಿಸೆಂಬರ್ ಅನ್ನು ಅಂತ್ಯಗೊಳಿಸಿದ್ದೇವೆ. ಒಟ್ಟಾರೆಯಾಗಿ, ನಾವು 69,768 ವಾಹನಗಳನ್ನು ಮಾರಾಟ ಮಾಡಿದ್ದೇವೆ, 16% ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್ (DJSI) ವಿಶ್ವ ನಾಯಕ ಸ್ಥಾನಮಾನವನ್ನು ಪಡೆದುಕೊಂಡ ಏಕೈಕ ಭಾರತೀಯ ವಾಹನ ಕಂಪನಿಯಾಗಿ ಮಹೀಂದ್ರಾ ಈ ವರ್ಷ ಗಮನಾರ್ಹವಾಗಿದೆ. ಎಂದು ಹೇಳಿದರು.

ಇನ್ನು ಮಹೀಂದ್ರಾ ಹೊಸ ಎರಡೂ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಿ ಬಿರುಗಾಳಿಯನ್ನು ಎಬ್ಬಿಸಿದೆ. ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.21.90 ಲಕ್ಷವಾದರೆ, ಮಹೀಂದ್ರಾ BE 6e (Mahindra BE 6e) ಬೆಲೆಯು ರೂ.18.90 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಮಹೀಂದ್ರಾ ಕಂಪನಿಯು INGLO ಪ್ಲಾಟ್‌ಫಾರ್ಮ್‌ನ ಆಧಾರದ ಮೇಲೆ ಇವಿ-ನಿರ್ದಿಷ್ಟ ಮಾಡ್ಯುಲರ್ ಆರ್ಕಿಟೆಕ್ಚರ್ ಅನ್ನು ಕೆಲವು ಭವಿಷ್ಯದ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳನ್ನು ಇರಿಸಲು ಉದ್ದೇಶಿಸಲಾಗಿದೆ. ಈ ಮಹೀಂದ್ರಾ XEV 9e ಎಲೆಕ್ಟ್ರಿಕ್ ಕಾರು ತ್ರಿಕೋನ ಎಲ್ಇಡಿ ಹೆಡ್‌ಲ್ಯಾಂಪ್ ಕಾನ್ಫಿಗರೇಶನ್ ಅನ್ನು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಹೊಂದಿವೆ. ಇರ್ನವರ್ಟಡ್ ಎಲ್-ಆಕಾರದ ಕನೆಕ್ಟಿವಿಟಿಯು LED DRL ಗಳೊಂದಿಗೆ LED ಟೈಲ್‌ಲೈಟ್‌ಗಳನ್ನು ಸಂರ್ಪಕವಿದೆ.

ಈ ಮಹೀಂದ್ರಾ BE 6e ಎಲೆಕ್ಟ್ರಿಕ್ ಕಾರು ಫಾಂಟ್ ಲೈನ್ ಗಳು, ಬೃಹತ್ ವ್ಹೀಲ್ ಅರ್ಚಾರ್ ಗಳು, ಸಿ-ಆಕಾರದ LED DRL ಗಳು ಮ ತ್ತು ನಯವಾದಬಂಪರ್ ಅನ್ನು ಒಳಗೊಂಡಿದೆ. ಇನ್ನು ಏರೋಡೈನಾಮಿಕ್ ಖಚಿತಪಡಿಸಿಕೊಳ್ಳಲು ಹುಡ್ ಸ್ಕೂಪ್ ಅನ್ನು ಹೊಂದಿದೆ ಮತ್ತು ಹುಡ್‌ನಲ್ಲಿ BE ಲೋಗೋವನ್ನು ಹೊಂದಿದೆ. ಈ ಎಸ್‍ಯುವಿ ಆಪ್ಟಿಮೈಸ್ಡ್ 20-ಇಂಚಿನ ವ್ಹೀಲ್ ಗಳೊಂದಿಗೆ ಬರಲಿದೆ.

ಮಹೀಂದ್ರಾ XEV 9e ಮತ್ತು BE 6e ಎರಡೂ ಎಲೆಕ್ಟ್ರಿಕ್ ಕಾರುಗಳು ಡ್ರೈವರ್-ಕೇಂದ್ರಿತ ಕ್ಯಾಬಿನ್‌ಗಳೊಂದಿಗೆ ಬರುತ್ತವೆ. ಈ ಎಸ್‍ಯುವಿಗಳ ಕ್ಯಾಬಿನ್ ವಿನ್ಯಾಸಕ್ಕಾಗಿ ಫೈಟರ್ ಜೆಟ್‌ಗಳಿಂದ ಸ್ಫೂರ್ತಿ ಪಡೆದಿದೆ ಎಂದು ಕಾರು ತಯಾರಕರು ಹೇಳಿಕೊಂಡಿದ್ದಾರೆ. XEV 9e ಕ್ಯಾಬಿನ್‌ನಲ್ಲಿನ ಹೈಲೈಟ್ ಟ್ರಿಪಲ್-ಸ್ಕ್ರೀನ್ ಸೆಟಪ್ ಆಗಿದ್ದು, ಮೂರು 12.3-ಇಂಚಿನ ಡಿಸ್ಪ್ಲೇಗಳನ್ನು ಮಹೀಂದ್ರಾದ ಅಡ್ರೆನಾಕ್ಸ್ ಸಾಫ್ಟ್‌ವೇರ್‌ನಿಂದ ನಡೆಸುತ್ತದೆ.

More from DriveSpark

Article Published On: Wednesday, January 1, 2025, 18:22 [IST]
English summary
Mahindra car sales in december 2024 details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+