ವರ್ಷಾಂತ್ಯಕ್ಕೆ ಕೆಲವೇ ದಿನ ಬಾಕಿ: ಎರಡು ಹೊಸ ಮಹೀಂದ್ರಾ ಎಸ್‌ಯುವಿಗಳು ಬಿಡುಗಡೆಗೆ ಸಜ್ಜು

ದೇಶದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ ತನ್ನ XUV700 (ಈಗ XUV 7XO) ಮತ್ತು ಸ್ಕಾರ್ಪಿಯೋ-N ಫೇಸ್‌ಲಿಫ್ಟ್ ಮಾಡಲ್‌ಗಳನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಈ ಎರಡೂ ಎಸ್‌ಯುವಿಗಳಿಗೆ ಆಯಾ ವಿಭಾಗಗಳಲ್ಲಿ ಪ್ರತಿಸ್ಪರ್ಧಿ ಕಾರುಗಳಿಂದ ಪೈಪೋಟಿ ಹೆಚ್ಚಾಗಿದ್ದು, ಕಂಪನಿಯು ಈ ಎರಡು ಮಾಡಲ್‌ಗಳನ್ನು ಹೊಸ ನವೀಕರಣ ಹಾಗೂ ಆಕರ್ಷಕ ಫೀಚರ್ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈಗಾಗಲೇ ರಸ್ತೆಯಲ್ಲಿ ಟೆಸ್ಟಿಂಗ್ ಜೋರಾಗಿ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದ ಸ್ಪೈ ಶಾಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಎರಡು SUV ಗಳಿಂದ ಏನೆಲ್ಲಾ ನಿರೀಕ್ಷಿಸಬಹುದು ನೋಡೋಣ.

ಸ್ಕಾರ್ಪಿಯೋ-N ಫೇಸ್‌ಲಿಫ್ಟ್: ಹೊಸ ಮಹೀಂದ್ರಾ ಸ್ಕಾರ್ಪಿಯೊ - N ಫೇಸ್‌ಲಿಫ್ಟ್ ಎಸ್‌ಯುವಿ, ಹೆಚ್ಚು ಆಕ್ರಮಣಕಾರಿ ಗ್ರಿಲ್ ಮತ್ತು ನವೀಕರಿಸಿದ LED ಹೆಡ್‌ಲ್ಯಾಂಪ್‌ಗಳೊಂದಿಗೆ ಮರುವಿನ್ಯಾಸಗೊಳಿಸಲಾದ ಮುಂಭಾಗವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದು ಸ್ಕಾರ್ಪಿಯೊ - N ಎಸ್‌ಯುವಿಯ ದಿಟ್ಟ ರಸ್ತೆ ಉಪಸ್ಥಿತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಲುಕ್ ಒಂದೇ ರೀತಿ ಇದ್ದರೂ, ಸೂಕ್ಷ್ಮವಾದ ಕಾಸ್ಮೆಟಿಕ್ ನವೀಕರಣಗಳು ಕಾರಿಗೆ ಆಧುನಿಕ ನೋಟವನ್ನು ನೀಡಲಿದೆ.

mahindra-planning-to-launch-facelift-of-scorpio-n-and-xuv-7xo

ಪ್ರೀಮಿಯಂ ವೈಶಿಷ್ಟ್ಯಗಳು ಮತ್ತು ವರ್ಧಿತ ಸುರಕ್ಷತೆಯನ್ನು ಸೇರಿಸುವ ಮೂಲಕ ಪ್ರತಿಸ್ಪರ್ಧಿಗಳೊಂದಿಗೆ ಬಲವಾಗಿ ಸ್ಪರ್ಧಿಸಲು ಕಂಪನಿ ಪ್ಲಾನ್ ಮಾಡಿಕೊಂಡಿದೆ. ಪ್ರಸ್ತುತ ಸ್ಕಾರ್ಪಿಯೋ N ಬೇಸ್ ವೇರಿಯೆಂಟ್ ರೂ. 13.20 ಲಕ್ಷ ಹಾಗೂ ಟಾಪ್ ವೇರಿಯೆಂಟ್ ರೂ. 24.17 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಮಾರಾಟವಾಗುತ್ತಿದೆ. ಹೊಸ ವೈಶಿಷ್ಟ್ಯಗಳಿಂದಾಗಿ ಮುಂಬರುವ ಹೊಸ ಮಹೀಂದ್ರಾ ಸ್ಕಾರ್ಪಿಯೊ-N ಫೇಸ್‌ಲಿಫ್ಟ್ ಸ್ವಲ್ಪ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.

ಪ್ರಸ್ತುತ ಟಾಪ್ ಟ್ರಿಮ್‌ಗಳಿಗೆ ಸೀಮಿತವಾಗಿರುವ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ಪ್ಯಾಕೇಜ್ ಅನ್ನು ಎಲ್ಲಾ ವೇರಿಯೆಂಟ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕಾಣಬಹುದು ಎನ್ನಲಾಗುತ್ತಿದೆ. ಒಳಾಂಗಣ ನವೀಕರಣಗಳಲ್ಲಿ ದೊಡ್ಡ ಟಚ್ ‌ಸ್ಕ್ರೀನ್ ಇನ್ಫೋಟೈನ್ ‌ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟುಗಳು ಮತ್ತು ಪ್ರೀಮಿಯಂ ಹರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್ ಸೇರಿವೆ.

mahindra-planning-to-launch-facelift-of-scorpio-n-and-xuv-7xo

ಮಹೀಂದ್ರಾ XUV 7XO: ಹೊಸ XUV 7XO ತನ್ನ ಹಿಂದಿನ ಮಾಡಲ್ ಆಗಿರುವ XUV700 ನಂತೆ ಅದೇ ಸಾಮರ್ಥ್ಯ, ತಂತ್ರಜ್ಞಾನ ಮತ್ತು ಪರ್ಫಾಮೆನ್ಸ್ ಹೊಂದಿರಲಿದೆ. ನಾಲ್ಕು ವರ್ಷಗಳ ಮಾರಾಟದ ನಂತರ, ಮಹೀಂದ್ರಾ XUV700 ಅನ್ನು 'XUV 7XO' ಎಂಬ ಹೆಸರಿನಡಿಯಲ್ಲಿ ಮಾರಾಟಕ್ಕೆ ತರುತ್ತಿದೆ. ಮುಂಭಾಗವು ಹೊಸ ಗ್ರಿಲ್‌ನೊಂದಿಗೆ ತೀಕ್ಷ್ಣವಾಗಿ ಕಾಣುತ್ತಿದ್ದು, ಹೆಡ್‌ಲ್ಯಾಂಪ್‌ಗಳು ಟ್ವಿನ್-ಪಾಡ್ ವಿನ್ಯಾಸವನ್ನು ಹೊಂದಿವೆ.

ಸುರಕ್ಷತೆಗಾಗಿ 7-ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೆಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್ ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ - ಆಪಲ್ ಕಾರ್‌ಪ್ಲೇ ಸಪೋರ್ಟ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್‌, ಪವರ್ಡ್ ಡ್ರೈವರ್ ಇರಲಿದೆ.

mahindra-planning-to-launch-facelift-of-scorpio-n-and-xuv-7xo

ಹಿಂಭಾಗದಲ್ಲಿ, ಹೊಸ ಟೈಲ್-ಲ್ಯಾಂಪ್‌ಗಳು ಈ ನವೀಕರಿಸಿದ ವಿನ್ಯಾಸವನ್ನು ಪಡೆದಿವೆ. ಹೊಸ ಏರೋ-ಆಪ್ಟಿಮೈಸ್ಡ್ ವೀಲ್‌ಗಳೊಂದಿಗೆ ಪರಿಷ್ಕೃತ ಬಂಪರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ. ಈ ಬಾರಿ ಒಳಭಾಗದಲ್ಲಿವೆ ಟ್ರಿಪಲ್-ಸ್ಕ್ರೀನ್ ವಿನ್ಯಾಸವಿರಲಿದೆ. ಪವರ್‌ಟ್ರೇನ್‌ಗಳು ಬದಲಾಗದೆ ಉಳಿಯುವ ಸಾಧ್ಯತೆಯಿದ್ದು, ಹಾಗೆಯೇ 6- ಅಥವಾ 7-ಸೀಟರ್ ಕಾನ್ಫಿಗರೇಶನ್‌ನ ಆಯ್ಕೆಯೂ ಸಹ ಇರಬಹುದು.

ಮುಂಬರಲಿರುವ ಹೊಸ ಮಹೀಂದ್ರಾ XUV 7XO ಆರಂಭಿಕ ಬೆಲೆಯು ಸುಮಾರು 15 ಲಕ್ಷ ರೂ.ಗಳಿಂದ ರೂ.26 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬುಕಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತರು, ಯಾವುದೇ ಅಧಿಕೃತ ಮಹೀಂದ್ರಾ ಡೀಲರ್‌ಶಿಪ್‌ ಅಥವಾ ವೆಬ್‌ಸೈಟ್‌ನಲ್ಲಿ ರೂ. 21,000 ಮುಂಗಡ ಹಣ ಪಾವತಿಸಿ ಬುಕ್ಕಿಂಗ್ ಮಾಡಬಹುದು. ಈ ಕಾರನ್ನು ಜನವರಿ 5 ರಂದು ಕಂಪನಿ ಬಿಡುಗಡೆ ಮಾಡಲಿದೆ.

More from DriveSpark

Article Published On: Monday, December 15, 2025, 16:47 [IST]
English summary
Mahindra planning to launch facelift of scorpio n and xuv 7xo
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+