7-ಸೀಟರ್.. ಅತಿ ಶೀಘ್ರದಲ್ಲೇ ಜನಪ್ರಿಯ Mahindra Scorpio N ಹೊಸ ಫೀಚರ್‌ನೊಂದಿಗೆ ಬಿಡುಗಡೆ?

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಜನಪ್ರಿಯ ಎಸ್‌ಯುವಿಯಾಗಿದೆ. 2022ರಲ್ಲಿ ಈ ಕಾರನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಹಲವು ಹೊಸತನಗಳಿಗೂ ಸಾಕ್ಷಿಯಾಗಿದ್ದು, ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸದ್ಯ, ನವೀಕರಣಕ್ಕೆ ಒಳಪಟ್ಟ 'ಸ್ಕಾರ್ಪಿಯೋ ಎನ್' ಎಸ್‌ಯುವಿಯನ್ನು ಮಾರಾಟಕ್ಕೆ ತರಲು ಕಂಪನಿಯು ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಅದಕ್ಕೆ ಸಂಬಂಧಿಸಿದ ಟೀಸರ್‌ವೊಂದನ್ನು ಬಿಡುಗಡೆಗೊಳಿಸಿದೆ.

ಎಲ್ಲವು ಅಂದುಕೊಂಡಂತೆ ನಡೆದರೆ, ಶೀಘ್ರದಲ್ಲೇ 2025ರ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಎನ್ ಎಸ್‌ಯುವಿಯು ಅದ್ದೂರಿಯಾಗಿಯೂ ಬಿಡುಗಡೆಯಾಗಲಿದೆ. ಇದು ಲೆವೆಲ್-2 ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಹಾಗೂ ಪನೋರಮಿಕ್ ಸನ್‌ರೂಫ್ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ.

Mahindra Scorpio-N Suv Gets ADAS And Panoramic Sunroof Launch Soon New Teaser Out

ಮಹೀಂದ್ರಾ ಕಂಪನಿಯು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿರುವ ಟೀಸರ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ಹೆದ್ದಾರಿಯಲ್ಲಿರುವ ಲೇನ್‌ಗಳನ್ನು ತೋರಿಸಲಾಗಿದೆ. ಇದು ಎಡಿಎಎಸ್‌ನಲ್ಲಿ ಬರುವ ಲೇನ್ ಕೀಪ್ ಅಸಿಸ್ಟ್ ಎಂದು ಸುಲಭವಾಗಿ ಹೇಳಬಹುದು. ಜೊತೆಗೆ ನೂತನ ಕಾರು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಹಾಗೂ ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ವಿವಿಧ ಎಡಿಎಎಸ್‌ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿರುವ ನಿರೀಕ್ಷೆಯೂ ಇದೆ.

ಈಗಾಗಲೇ, ದೇಶೀಯವಾಗಿ ಮಹೀಂದ್ರಾ ಯಶಸ್ವಿಯಾಗಿ ಮಾರಾಟಗೊಳಿಸುವ ಎಕ್ಸ್‌ಯುವಿ 3ಎಕ್ಸ್ಒ, ಎಕ್ಸ್‌ಯುವಿ700, ಬಿಇ6 ಹಾಗೂ ಎಕ್ಸ್ಇವಿ 9ಇ ಕಾರುಗಳು ಲೆವೆಲ್ 2 ಎಡಿಎಎಸ್ ಆಯ್ಕೆಯನ್ನು ಹೊಂದಿವೆ. ಈ ರಕ್ಷಣಾತ್ಮಕ ವೈಶಿಷ್ಟ್ಯದೊಂದಿಗೆ ಬಿಡುಗಡೆಯಾಗುವ ಸ್ಕಾರ್ಪಿಯೋ ಎನ್ ಕೊಂಚ ಮಟ್ಟಿಗೆ ದುಬಾರಿ ಬೆಲೆಯನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

Mahindra Scorpio-N Suv Gets ADAS And Panoramic Sunroof Launch Soon New Teaser Out

ಪ್ರಸ್ತುತ ಖರೀದಿಗೆ ದೊರೆಯುವ ಮಹೀಂದ್ರಾ ಸ್ಕಾರ್ಪಿಯೋ ಎನ್ ವಿಶೇಷತೆಗಳೇನು:

ಈ ಎಸ್‌ಯುವಿ ಕನಿಷ್ಠ ರೂ.14 ಲಕ್ಷ ಹಾಗೂ ಗರಿಷ್ಠ ರೂ.25 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಜಡ್2, ಜಡ್4, ಜಡ್6, ಜಡ್8 ಎಸ್, ಜಡ್8 ಹಾಗೂ ಜಡ್8 ಎಲ್ ಸೇರಿದಂತೆ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ದೊರೆಯುತ್ತದೆ. ಹೊರಭಾಗದಲ್ಲೂ ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಮಿಡ್‌ನೈಟ್ ಬ್ಲ್ಯಾಕ್, ಎವರೆಸ್ಟ್ ವೈಟ್, ಡ್ಯಾಜ್ಲಿಂಗ್ ಸಿಲ್ವರ್, ರೆಡ್ ರೇಜ್, ಡೀಪ್ ಫಾರೆಸ್ಟ್ ಹಾಗೂ ನಪೋಲಿ ಬ್ಲ್ಯಾಕ್ ಎಂಬ ಬಣ್ಣಗಳನ್ನು ಪಡೆದಿದೆ.

ಇದು ಶಕ್ತಿಯುತವಾದ ಎರಡು ಪವರ್‌ಟ್ರೇನ್‌ನ್ನು ಹೊಂದಿದೆ. 2-ಲೀಟರ್ ಟರ್ಬೊ ಪೆಟ್ರೋಲ್ & 2.2-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. 6-ಸ್ಪೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 12 ರಿಂದ 15 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 57 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.

ನೂತನ ಸ್ಕಾರ್ಪಿಯೋ ಎನ್ ಎಸ್‌ಯುವಿಯಲ್ಲಿ 6/ 7 ಆಸನಗಳನ್ನು ಒಳಗೊಂಡಿದೆ. ದೂರದ ಊರುಗಳಿಗೆ ಹೋಗುವಾಗ ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 460 ಲೀಟರ್‌ನಷ್ಟು ಬೂಟ್ ಸ್ಪೇಸ್‌ನ್ನು ಹೊಂದಿದೆ. ಈ ಕಾರು 4662 ಎಂಎಂ ಉದ್ದ, 1917 ಎಂಎಂ ಅಗಲ ಹಾಗೂ 1857 ಎಂಎಂ ಎತ್ತರವು ಇದೆ. 2750 ಎಂಎಂ ವೀಲ್ ಬೇಸ್‌ನ್ನು ಒಳಗೊಂಡಿದೆ.

ಈ ಕಾರು 8-ಇಂಚಿರುವ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್ ಝೋನ್ ಕ್ಲೇಮೇಟ್ ಕಂಟ್ರೋಲ್ ಹಾಗೂ ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಟಿಪಿಎಂಎಸ್ (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಂತೆ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.

Article Published On: Wednesday, June 25, 2025, 16:26 [IST]
English summary
Mahindra scorpio n suv gets adas and panoramic sunroof launch soon new teaser out
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+