Mahindra: ಮಹೀಂದ್ರಾ ವಾಹನಗಳಿಗೆ ಫುಲ್ ಡಿಮ್ಯಾಂಡ್: ದೇಶದಲ್ಲಿ 48 ಸಾವಿರ ವಾಹನಗಳು ಉಡೀಸ್!

ಭಾರತದ ಪ್ರಮುಖ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ, ಮಾರ್ಚ್ 2025 ರಲ್ಲಿ ಮಾರಾಟವಾದ ತನ್ನ ಒಟ್ಟಾರೆ ವಾಹನಗಳ (ಪ್ಯಾಸಿಂಜರ್, ವಾಣಿಜ್ಯ ಹಾಗೂ ಎಲೆಕ್ಟ್ರಿಕ್ ವಾಹನಗಳು ಒಳಗೊಂಡಂತೆ) ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಒಟ್ಟು 83,894 ವಾಹನಗಳು ಮಾರಾಟವಾಗಿದ್ದು, ರಫ್ತು ಸೇರಿದಂತೆ ಶೇ23 ರಷ್ಟು ಹೆಚ್ಚಾಗಿದೆ ಎಂದು ಘೋಷಿಸಿದೆ. ಯುಟಿಲಿಟಿ ವೆಹಿಕಲ್ಸ್ ವಿಭಾಗದಲ್ಲಿ, ಮಹೀಂದ್ರಾ ದೇಶೀಯ ಮಾರುಕಟ್ಟೆಯಲ್ಲಿ 48,048 ವಾಹನಗಳನ್ನು ಮಾರಾಟ ಮಾಡಿದೆ, ಇದು ಶೇ18 ರಷ್ಟು ಬೆಳವಣಿಗೆಯಾಗಿದೆ. ರಫ್ತು ಸೇರಿದಂತೆ ಒಟ್ಟಾರೆಯಾಗಿ 50,835 ವಾಹನಗಳು ಮಾರಾಟವಾದರೆ, ವಾಣಿಜ್ಯ ವಾಹನಗಳ ದೇಶೀಯ ಮಾರಾಟವು 23,951 ರಷ್ಟಿದೆ.

ಕಂಪನಿಯು ವರ್ಷವನ್ನು 5,51,487 SUV ಗಳೊಂದಿಗೆ ಮುಕ್ತಾಯಗೊಳಿಸಿದೆ, ಇದು ಕಂಪನಿಯ ಇತಿಹಾಸದಲ್ಲಿಯೇ ಇದುವರೆಗಿನ ಅತ್ಯಧಿಕವಾಗಿದೆ. ಹಾಗೆಯೇ ಶೇ20 ರಷ್ಟು ವಾರ್ಷಿಕ ಬೆಳವಣಿಗೆಯೊಂದಿಗೆ ಮುನ್ನುಗ್ಗಿದೆ. ಈ ಆರ್ಥಿಕ ವರ್ಷವನ್ನು ಶೇ20 ರಷ್ಟು ಬೆಳವಣಿಗೆಯೊಂದಿಗೆ (1 ಏಪ್ರಿಲ್ 2024 ರಿಂದ 31 ಮಾರ್ಚ್ 2025 ರವರೆಗೆ) ಅತ್ಯಧಿಕ ವಾಹನ ನೋಂದಣಿಗಳೊಂದಿಗೆ ಮುಕ್ತಾಯಗೊಳಿಸಿರುವುದಾಗಿ ಕಂಪನಿ ತಿಳಿಸಿದೆ.

mahindra-sell-83894-units-and-growth-of-23-percent-in-march-2025

ಈ ವರ್ಷದ ಇತರ ಕೆಲವು ಪ್ರಮುಖ ಸಾಧನೆಗಳಲ್ಲಿ, ಆದಾಯದಲ್ಲಿ ನಂ.1 ಎಸ್‌ಯುವಿ ಪ್ಲೇಯರ್ ಮತ್ತು ನಂ.2 ಪ್ಯಾಸೆಂಜರ್ ವೆಹಿಕಲ್ ತಯಾರಕರಾಗಿ ಮಹೀಂದ್ರಾ ಗುರ್ತಿಸಿಕೊಂಡಿದೆ. ಎಲ್‌ಸಿವಿ 3.5T ವಿಭಾಗದಲ್ಲಿ ಶೇ50 ರಷ್ಟು ಮಾರುಕಟ್ಟೆ ಪಾಲನ್ನು ದಾಟಿರುವುದು ಮತ್ತು ಅಂತರರಾಷ್ಟ್ರೀಯ ಕಾರ್ಯಾಚರಣೆಗಳನ್ನು ವರ್ಷದಿಂದ ವರ್ಷಕ್ಕೆ ಶೇ41 ರಷ್ಟು ಹೆಚ್ಚಿಸಿಕೊಂಡಿದೆ.

ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವೀಜಯ್ ನಕ್ರಾ ಮಾತನಾಡಿ, "ಮಾರ್ಚ್‌ನಲ್ಲಿ ನಾವು ಒಟ್ಟು 48,048 ಎಸ್‌ಯುವಿಗಳನ್ನು ಮಾರಾಟ ಮಾಡಿದ್ದು, ಶೇ18 ರಷ್ಟು ಬೆಳವಣಿಗೆ ಸಾಧಿಸಿದ್ದೇವೆ. ಹಾಗೆಯೇ ಎಲ್ಲಾ ರೀತಿಯ ವಾಹನಗಳ ಒಟ್ಟು 83,894 ವಾಹನಗಳನ್ನು ಮಾರಾಟ ಮಾಡಿ ಕಳೆದ ವರ್ಷಕ್ಕಿಂತ ಶೇ23 ರಷ್ಟು ಬೆಳವಣಿಗೆ ಸಾಧಿಸಿದ್ದೇವೆ.

mahindra-sell-83894-units-and-growth-of-23-percent-in-march-2025

ನಾವು ನಮ್ಮ ಎಲೆಕ್ಟ್ರಿಕ್ ಒರಿಜಿನ್ ಎಸ್‌ಯುವಿಗಳ ವಿತರಣೆಯನ್ನು ಸಹ ಪ್ರಾರಂಭಿಸಿದ್ದೇವೆ, ಇಲ್ಲಿ ನಾವು ಬಲವಾದ ನಿರಂತರ ಬೇಡಿಕೆಯ ವೇಗವನ್ನು ನೋಡುತ್ತಿದ್ದೇವೆ. ದೇಶೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ 5 ಲಕ್ಷಕ್ಕೂ ಹೆಚ್ಚು ಎಸ್‌ಯುವಿಗಳನ್ನು ಮಾರಾಟ ಮಾಡುವ ಮೂಲಕ ವರ್ಷವು ಬಹಳ ಸಕಾರಾತ್ಮಕ ಟಿಪ್ಪಣಿಯಲ್ಲಿ ಕೊನೆಗೊಂಡಿದೆ ಎಂದು ವೀಜಯ್ ನಕ್ರಾ ಹೇಳಿದರು.

ಮಹೀಂದ್ರಾ ಬಗ್ಗೆ: 1945 ರಲ್ಲಿ ಸ್ಥಾಪನೆಯಾದ ಮಹೀಂದ್ರಾ ಗ್ರೂಪ್ 100 ಕ್ಕೂ ಹೆಚ್ಚು ದೇಶಗಳಲ್ಲಿ 2,60,000 ಉದ್ಯೋಗಿಗಳನ್ನು ಹೊಂದಿರುವ ಅತಿದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಕೃಷಿ ಉಪಕರಣಗಳು, ಯುಟಿಲಿಟಿ ವಾಹನಗಳು, ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಸೇವೆಗಳಲ್ಲಿ ಸಕ್ರಿಯವಾಗಿದೆ. ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರಾಕ್ಟರ್ ಕಂಪನಿಯಾಗಿದೆ.

mahindra-sell-83894-units-and-growth-of-23-percent-in-march-2025

ನವೀಕರಿಸಬಹುದಾದ ಇಂಧನ, ಕೃಷಿ, ಲಾಜಿಸ್ಟಿಕ್ಸ್, ಆತಿಥ್ಯ ಮತ್ತು ರಿಯಲ್ ಎಸ್ಟೇಟ್‌ನಲ್ಲಿ ಇದು ಬಲವಾದ ಉಪಸ್ಥಿತಿಯನ್ನು ಹೊಂದಿದೆ. ಮಹೀಂದ್ರಾ ಗ್ರೂಪ್ ಜಾಗತಿಕವಾಗಿ ESG ಅನ್ನು ಮುನ್ನಡೆಸುವ, ಗ್ರಾಮೀಣ ಸಮೃದ್ಧಿಯನ್ನು ಸಕ್ರಿಯಗೊಳಿಸುವ ಮತ್ತು ನಗರ ಜೀವನವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಸಮುದಾಯಗಳು ಮತ್ತು ಪಾಲುದಾರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿರುವುದಾಗಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, April 1, 2025, 13:58 [IST]
English summary
Mahindra sell 83894 units and growth of 23 percent in march 2025
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+