Acer Faster Awards: ಮಹೀಂದ್ರಾ ಥಾರ್ ರಾಕ್ಸ್ & ಬಜಾಜ್ ಫ್ರೀಡಂ 125ಗೆ ಗೌರವದ ಕಿರೀಟ!

ದೇಶದ ಆಟೋಮೋಟಿವ್ ಮಾಧ್ಯಮಗಳ ಒಕ್ಕೂಟವಾಗಿ 'ಫಾಸ್ಟರ್' ಹೊರಹೊಮ್ಮಿದೆ. ಗುರುಗ್ರಾಮದಲ್ಲಿ ಬುಧವಾರ ಪ್ರಖ್ಯಾತ ಕಾರು & ದ್ವಿಚಕ್ರ ವಾಹನಗಳಿಗೆ ಕೊಡಲಾಗುವ ಏಸರ್ ಫಾಸ್ಟರ್ ಪ್ರಶಸ್ತಿ (Acer Faster Awards - 2025) ಸಮಾರಂಭಕ್ಕೆ ಅದ್ದೂರಿಯಾಗಿ ತೆರೆ ಬಿದ್ದಿದೆ. ಜನಪ್ರಿಯ ಆಫ್-ರೋಡ್ ಎಸ್‌ಯುವಿ ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ವರ್ಷದ ಕಾರೆಂಬ ಪ್ರಶಸ್ತಿಯನ್ನು ಪಡೆದರೆ, ಬಜಾಜ್ ಫ್ರೀಡಂ 125 (Bajaj Freedom 125) ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಯಿತು.

Mahindra Thar Roxx And Bajaj Freedom 125 Wins Acer FASTER Awards 2025 Full Details

2025ರ ಏಸರ್ ಫಾಸ್ಟರ್ ಪ್ರಶಸ್ತಿ ಪಟ್ಟಿ ಇಲ್ಲಿದೆ..

ವರ್ಷದ ಆಟೋಮೋಟಿವ್ ಜಾಹೀರಾತು ಅಭಿಯಾನ ಪ್ರಶಸ್ತಿ (Automotive Ad Campaign of the Year): ಮಹೀಂದ್ರಾ ಎಕ್ಸ್ಇವಿ 9ಇ & ಬಿಇ 6.

ಸಿಎಸ್ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಇನಿಶಿಯೇಟಿವ್ಸ್ ಪ್ರಶಸ್ತಿ (CSR Initiatives Award): ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್.

ವರ್ಷದ ಪಿಆರ್ (ಸಾರ್ವಜನಿಕ ಸಂಪರ್ಕ) ತಂಡ ಪ್ರಶಸ್ತಿ: ಎಡೆಲ್ಮನ್ (ನಿಸ್ಸಾನ್)

ವರ್ಷದ ಸಂವಹನ ತಂಡ (Communication Team of the Year): ಮಹೀಂದ್ರಾ & ಮಹೀಂದ್ರಾ

ವರ್ಷದ ಅತ್ಯುತ್ತಮ ಪಿಆರ್ (ಸಾರ್ವಜನಿಕ ಸಂಪರ್ಕ) ವ್ಯಕ್ತಿ ಪ್ರಶಸ್ತಿ: ನೀರಜ್ ಅತ್ರಿ

ವರ್ಷದ ಸಂವಹನ ವ್ಯಕ್ತಿ ಪ್ರಶಸ್ತಿ: (Communications Personality of the Year): ಶಕ್ತಿ ಉಪಾಧ್ಯಾಯ (ಕೆಐಎ ಇಂಡಿಯಾ).

ಗೌರವ ಪ್ರಶಸ್ತಿ (Award of Honour): ರವಿ ಶರ್ಮಾ (ಮಾಧ್ಯಮ ಸಂಬಂಧ ವಿಚಾರಗಳು).

ವರ್ಷದ ಮೋಟಾರ್‌ಸ್ಪೋರ್ಟ್ ವ್ಯಕ್ತಿ ಪ್ರಶಸ್ತಿ (Motorsport Personality of the Year): ಸಂಜಯ್ ಟಕಲೆ.

ವರ್ಷದ ಕೈಗಾರಿಕಾ ವ್ಯಕ್ತಿ ಪ್ರಶಸ್ತಿ (Industry Personality of the Year): ಸಂತೋಷ್ ಅಯ್ಯರ್ (ಮರ್ಸಿಡಿಸ್-ಬೆಂಜ್ ಇಂಡಿಯಾ)

ವರ್ಷದ ಅತ್ಯುತ್ತಮ ಬಿಡಿಭಾಗಗಳ ತಯಾರಕ ಪ್ರಶಸ್ತಿ (Components Manufacturer of the Year): ಮಿಂಡಾ ಕಾರ್ಪೊರೇಷನ್

ವರ್ಷದ ಆಟೋ ತಂತ್ರಜ್ಞಾನ ಪ್ರಶಸ್ತಿ (Auto Tech of the Year): ಬಜಾಜ್ ಆಟೋ.

ವರ್ಷದ ನವೀಕರಣ ಪ್ರಶಸ್ತಿ (2 ವೀಲರ್ - ದ್ವಿಚಕ್ರ ವಾಹನ) Update of the Year (Two-Wheeler): ಟಿವಿಎಸ್ ಅಪಾಚೆ ಆರ್‌ಆರ್ 310.

ವರ್ಷದ ನವೀಕರಣ (4 ವೀಲರ್ - ನಾಲ್ಕು ಚಕ್ರದ ವಾಹನ) Update of the Year (Four-Wheeler): ಹ್ಯುಂಡೈ ಅಲ್ಕಾಜರ್.

ವರ್ಷದ ಎಲೆಕ್ಟ್ರಿಕ್ ಕಾರು ಪ್ರಶಸ್ತಿ (Electric Car of the Year): ಎಂಜಿ ವಿಂಡ್ಸರ್.

2 ವೀಲರ್ ವರ್ಷದ ಇವಿ ಪ್ರಶಸ್ತಿ (EV of the Year 2W): ಎಥರ್ ರಿಜ್ಟಾ.

ವರ್ಷದ ಪ್ರೀಮಿಯಂ ಬೈಕ್ ಪ್ರಶಸ್ತಿ (Premium Bike of the Year): ಬಿಎಂಡಬ್ಲ್ಯೂ ಆರ್ 1300 ಜಿಎಸ್.

ವರ್ಷದ ಪ್ರೀಮಿಯಂ ಕಾರು ಪ್ರಶಸ್ತಿ (Premium Car of the Year): ಮರ್ಸಿಡಿಸ್-ಬೆಂಜ್ ಇ-ಕ್ಲಾಸ್.

ಟೈಮ್‌ಲೆಸ್ ಐಕಾನ್ ಪ್ರಶಸ್ತಿ (2 ವೀಲರ್): ಹೀರೋ ಸ್ಪ್ಲೆಂಡರ್.

ಟೈಮ್‌ಲೆಸ್ ಐಕಾನ್ ಪ್ರಶಸ್ತಿ (4 ವೀಲರ್): ಮಾರುತಿ ಸುಜುಕಿ ಸ್ವಿಫ್ಟ್.

ವರ್ಷದ ಸ್ಕೂಟರ್ ಪ್ರಶಸ್ತಿ (Scooter of the Year): ಟಿವಿಎಸ್ ಜೂಪಿಟರ್.

ವರ್ಷದ ಮೋಟಾರ್‌ಸೈಕಲ್ ಪ್ರಶಸ್ತಿ (Motorcycle of the Year): ಬಜಾಜ್ ಫ್ರೀಡಂ 125.

ವರ್ಷದ ಕಾರು ಪ್ರಶಸ್ತಿ (Car of the Year): ಮಹೀಂದ್ರಾ ಥಾರ್ ರಾಕ್ಸ್.

Mahindra Thar Roxx And Bajaj Freedom 125 Wins Acer FASTER Awards 2025 Full Details

ಈ ಪ್ರಶಸ್ತಿ ಸಮಾರಂಭದ ಬಗ್ಗೆ ಮೋಟರಾಯ್ಡ್ಸ್‌ ಸಂಪಾದಕ ಹಾಗೂ ಫಾಸ್ಟರ್ ಒಕ್ಕೂಟದ ಅಧ್ಯಕ್ಷ ಅಮಿತ್ ಛಂಗನಿ ಅವರು ಮಾತನಾಡಿದ್ದಾರೆ. 'ಇದು ಭಾರತೀಯ ಆಟೋಮೋಟಿವ್ ಉದ್ಯಮದ ಬೆಳವಣಿಗೆಯ ಶ್ರೇಷ್ಠತೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿದೆ. ಈ ಮೂಲಕ ಚಲನಶೀಲತೆಯ ಭವಿಷ್ಯವನ್ನು ರೂಪಿಸಲು ಶ್ರಮಿಸುತ್ತಿರುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಹೆಮ್ಮೆಯಿಂದ ಗೌರವಿಸಲಾಗುತ್ತದೆ' ಎಂದು ಹೇಳಿದ್ದಾರೆ.

ಗೇರ್‌ಫ್ಲಿಕ್‌ ಸಂಪಾದಕ ಮತ್ತು ಫಾಸ್ಟರ್ ಒಕ್ಕೂಟದ ಕಾರ್ಯದರ್ಶಿ ನರೇಂದ್ರ ಶರ್ಮಾ ಅವರು ಮಾತನಾಡಿ, 'ಈ ಪ್ರಶಸ್ತಿ ವಿತರಣಾ ಸಮಾರಂಭವು ಆಟೋಮೋಟಿವ್ ವಲಯವನ್ನು ಬಹು ಎತ್ತರಕ್ಕೆ ಕೊಂಡೊಯ್ಯುವ ಉತ್ಸಾಹ ಹಾಗೂ ದೃಢಸಂಕಲ್ಪದ ಬದ್ಧತೆಯ ಬಗ್ಗೆ ಬೆಳಕನ್ನು ಚೆಲ್ಲುತ್ತದೆ' ಎಂದು ತಿಳಿಸಿದ್ದಾರೆ.

Mahindra Thar Roxx And Bajaj Freedom 125 Wins Acer FASTER Awards 2025 Full Details

ಕಳೆದ ತಿಂಗಳ 26 ಹಾಗೂ 27ರಂದು ಚೆನ್ನೈನ ಮದ್ರಾಸ್ ಮೋಟಾರ್ ರೇಸ್ ಟ್ರ್ಯಾಕ್‌ನಲ್ಲಿ ಈ ಏಸರ್ ಫಾಸ್ಟರ್ ಪ್ರಶಸ್ತಿಗಾಗಿ ವಾಹನಗಳನ್ನು ಆಯ್ಕೆ ಮಾಡಲು ಜ್ಯೂರಿಗಳ (ತೀರ್ಪುಗಾರರ) ಸಭೆಯನ್ನು ನಡೆಸಲಾಗಿತ್ತು. ಅಲ್ಲಿ ಕೆಲವೊಂದು ವಾಹನಗಳನ್ನು ಅಂತಿಮ ಸುತ್ತಿಗೂ ನಾಮನಿರ್ದೇಶನ ಮಾಡಲಾಗಿತ್ತು. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದ ಯಶಸ್ವಿಗಾಗಿ 'ಏಸರ್'ನೊಂದಿಗೆ ಗಾರ್ವೇರ್ ಹೈ-ಟೆಕ್ ಫಿಲ್ಮ್ಸ್ ಹಾಗೂ ರೆಡ್ ಬುಲ್ ಕಂಪನಿಗಳು ಸಹ ಕೈಜೋಡಿಸಿದ್ದವು.

ಜ್ಯೂರಿ ಸದಸ್ಯರ ಪಟ್ಟಿ

ಅಮಿತ್ ಛಂಗಾನಿ - ಸಂಪಾದಕರು, ಮೋಟರಾಯ್ಡ್ಸ್‌

ನರೇಂದ್ರ ಶರ್ಮಾ - ಸಂಪಾದಕರು, ಗೇರ್‌ಫ್ಲಿಕ್

ರೋಹಿತ್ ಖುರಾನಾ - ಸಂಪಾದಕರು, ಕಾರ್‌ಬ್ಲಾಗ್‌ ಇಂಡಿಯಾ

ಗೌರವ್ ಯಾದವ್ - ಸಂಪಾದಕರು, ಗಾಡಿವಾಡಿ

ರೋಶನ್ ಜೋಸೆಫ್ - ಸಂಪಾದಕರು, ಪೈಲಟ್ ಆನ್ ವೀಲ್ಸ್

ಪ್ರೋಮೀತ್ ಘೋಷ್ - ವಿಮರ್ಶಾ ಸಂಪಾದಕರು, (ರಿವ್ಯೂಸ್ ಎಡಿಟರ್), ಡ್ರೈವ್‌ಸ್ಪಾರ್ಕ್

ಫಾಸ್ಟರ್ ಕುರಿತ ಒಂದಷ್ಟು ವಿವರ: ಕನ್ನಡ, ತಮಿಳು, ತೆಲುಗು ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ 250 ಮಿಲಿಯನ್‌ಗಿಂತಲೂ ಹೆಚ್ಚಿನ ಮಾಸಿಕ ಡಿಜಿಟಲ್ ಓದುಗರನ್ನು ತಲುಪುವ ಆಟೋಮೋಟಿವ್ ಮಾಧ್ಯಮ ಸಂಸ್ಥೆಗಳ ಒಕ್ಕೂಟ ಈ ಫಾಸ್ಟರ್ ಆಗಿದೆ. ವಿಶೇಷವಾಗಿ ನಮ್ಮ 'ಡ್ರೈವ್‌ಸ್ಪಾರ್ಕ್' ಪೋರ್ಟಲ್ ಇದೇ ಫಾಸ್ಟರ್ ಒಕ್ಕೂಟದ ಭಾಗವಾಗಿರುವುದು ಸಂತಸದ ಸಂಗತಿಯಾಗಿದೆ.

ವರ್ಷದ ಕಾರು ಪ್ರಶಸ್ತಿಗೆ ಭಾಜನವಾದ ಮಹೀಂದ್ರಾ ಥಾರ್ ರಾಕ್ಸ್ ಎಸ್‌ಯುವಿ ಬಗ್ಗೆ ಹೇಳುವುದಾದರೆ, ಇದು ರೂ.12.99 ಲಕ್ಷದಿಂದ ರೂ.23.09 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.0 ಲೀ. ಟರ್ಬೊ ಪೆಟ್ರೋಲ್ & 2 ಲೀ. ಡೀಸೆಲ್ ಎಂಜಿನ್‌ ಹೊಂದಿದ್ದು, 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವರ್ಷದ ಮೋಟಾರ್‌ಸೈಕಲ್ ಎಂಬ ಗೌರವಕ್ಕೆ ಪಾತ್ರವಾಗಿರುವ ಬಜಾಜ್ ಫ್ರೀಡಂ 125 ಕುರಿತಂತೆ ಹೇಳುವುದಾದರೆ, ಇದೊಂದು ಸಿಎನ್‌ಜಿ ಬೈಕ್ ಆಗಿದ್ದು, ರೂ.90,272 ರಿಂದ ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 125 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಪಡೆದಿದ್ದು, 330 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಎಲ್‌ಸಿಡಿ ಡಿಸ್‌ಪ್ಲೇ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 27, 2025, 14:18 [IST]
English summary
Mahindra thar roxx and bajaj freedom 125 wins acer faster awards 2025 full details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+