ಇನ್ನೂ 'Thar Roxx' ಎಸ್‌ಯುವಿಯನ್ನು ಬೇಗ ಮನೆಗೆ ತರಬಹುದು.. ಈ ಮೇನಲ್ಲಿ ಕಾಯುವಿಕೆ ಅವಧಿ ಎಷ್ಟಿದೆ?

ಮಹೀಂದ್ರಾ ಥಾರ್ ರಾಕ್ಸ್ (Mahindra Thar Roxx) ಪ್ರಮುಖ ಆಫ್-ರೋಡ್ ಎಸ್‌ಯುವಿಯಾಗಿದ್ದು, ದೇಶೀಯ ರಸ್ತೆಯಲ್ಲಿ ಅಬ್ಬರಿಸುತ್ತಿದೆ. ಮಾರುತಿ ಸುಜುಕಿ ಜಿಮ್ನಿ ಹಾಗೂ ಫೋರ್ಸ್ ಗೂರ್ಖಾಗೆ ಪ್ರಬಲವಾದ ಸ್ಪರ್ಧೆಯೊಡ್ಡುತ್ತಿದೆ. ಇಲ್ಲಿವರೆಗೂ 'ಥಾರ್ ರಾಕ್ಸ್'ನ್ನು ವಿತರಣೆ ಪಡೆಯಲು ಗ್ರಾಹಕರು ಹಲವು ತಿಂಗಳ ಕಾಲ ತಾಳ್ಮೆಯಿಂದ ಕಾಯಬೇಕಾಗಿತ್ತು. ಅದರ ಹೊರತಾಗಿ ಇದೇ 'ಮೇ'ನಲ್ಲಿ ಈ ಥಾರ್ ರಾಕ್ಸ್ ಕಾಯುವಿಕೆ ಅವಧಿ (Waiting Period) ಬಹಳಷ್ಟು ಕಡಿಮೆಯಾಗಿದೆ. ಬನ್ನಿ, ಆ ಕುರಿತಂತೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಈ ಮೇ ತಿಂಗಳು ದೇಶಾದ್ಯಂತ ವಿವಿಧ ನಗರಗಳಲ್ಲಿ ನೂತನ 'ಮಹೀಂದ್ರಾ ಥಾರ್ ರಾಕ್ಸ್' 5-ಡೋರ್ ಎಸ್‌ಯುವಿಯ ಎಂಎಕ್ಸ್1 (MX1) ಹಾಗೂ ಎಎಕ್ಸ್7 ಎಲ್ (AX7 L) ರೂಪಾಂತರಗಳು (ವೇರಿಯೆಂಟ್), 6 ತಿಂಗಳವರೆಗೆ ಕಾಯುವಿಕೆ ಅವಧಿ ಹೊಂದಿವೆ. ಅದೇ ರೀತಿಯಲ್ಲಿ ಎಂಎಕ್ಸ್3 (MX3) ಮತ್ತು ಎಎಕ್ಸ್3 ಎಲ್ (AX3 L) ರೂಪಾಂತರಗಳು 4 ತಿಂಗಳೊಳಗೆ ಖರೀದಿದಾರರ ಕೈಸೇರಲಿವೆ.

Mahindra Thar Roxx Suv May 2025 Waiting Period Reviled Details

ಇದೇ 'ಥಾರ್ ರಾಕ್ಸ್' ಎಸ್‌ಯುವಿಯ ಎಂಎಕ್ಸ್5 (MX5) ಹಾಗೂ ಎಎಕ್ಸ್5 ಎಲ್ (AX5 L) ರೂಪಾಂತರಗಳು, ಪೆಟ್ರೋಲ್ & ಡೀಸೆಲ್ ಚಾಲಿತ ಮಾದರಿಗಳನ್ನು (ಮಾಡೆಲ್‌ಗಳು) ಆಧರಿಸಿ 4 ರಿಂದ 6 ತಿಂಗಳ ಕಾಯುವಿಕೆ ಅವಧಿ ಹೊಂದಿವೆ. ಕಳೆದ ಅಕ್ಟೋಬರ್‌ 3ರಂದು ಹೊಸ ಥಾರ್ ರಾಕ್ಸ್‌ಗಾಗಿ ಕಂಪನಿಯು ಬುಕ್ಕಿಂಗ್ ಪಡೆಯುವುದನ್ನು ಶುರು ಮಾಡಿತ್ತು. ಕೇವಲ 60 ನಿಮಿಷಗಳಲ್ಲಿ 1.76 ಲಕ್ಷ ಯುನಿಟ್‌ಗಳನ್ನು ಗ್ರಾಹಕರು ಆರ್ಡರ್ ಮಾಡಿದ್ದರು. ಇದು ಈ ಎಸ್‌ಯುವಿಗಿರುವ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ.

ಮಹೀಂದ್ರಾ ಥಾರ್ ರಾಕ್ಸ್ ವಿಶೇಷತೆಗಳೇನು..

ಈ ಎಸ್‌ಯುವಿಯು ಕೊಂಚ ಮಟ್ಟಿಗೆ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ರೂ.12.99 ಲಕ್ಷದಿಂದ ರೂ.23.39 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಇದರಲ್ಲಿ 5 ಆಸನಗಳಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಸಂಚರಿಸಬಹುದು. ಹೆಚ್ಚಿನ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ 447 ಲೀ.ನಷ್ಟು ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ.

Mahindra Thar Roxx Suv May 2025 Waiting Period Reviled Details

ನೂತನ ಥಾರ್ ರಾಕ್ಸ್ ಹೊರಭಾಗದಲ್ಲಿ ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆದಿದೆ. ಇದರೊಂದಿಗೆ ಟ್ಯಾಂಗೋ ರೆಡ್, ಸ್ಟೆಲ್ತ್ ಬ್ಲಾಕ್, ಎವರೆಸ್ಟ್ ವೈಟ್, ಡೀಪ್ ಫಾರೆಸ್ಟ್, ನೆಬ್ಯುಲಾ ಬ್ಲೂ, ಬ್ಯಾಟಲ್‌ಶಿಪ್ ಗ್ರೇ ಮತ್ತು ಬರ್ನ್ಟ್ ಸಿಯೆನ್ನಾ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

ಈ ಕಾರು 2-ಲೀ. ಟರ್ಬೊ ಪೆಟ್ರೋಲ್ ಹಾಗೂ 2.2-ಲೀ. ಡಿಸೇಲ್ ಎಂಜಿನ್‌ನ್ನು ಒಳಗೊಂಡಿದೆ. 12.4 ರಿಂದ 15.2 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ 6-ಏರ್‌ಬ್ಯಾಗ್‌ಗಳನ್ನು ಹೊಂದಿದೆ.

Mahindra Thar Roxx Suv May 2025 Waiting Period Reviled Details

ಮಹೀಂದ್ರಾ ಥಾರ್ 3 ಡೋರ್‌ನ ಕಾಯುವಿಕೆ ಅವಧಿ ಎಷ್ಟಿದೆ..

ಈ ಎಸ್‌ಯುವಿಯ ವಿವಿಧ ರೂಪಾಂತರಗಳನ್ನು ಗ್ರಾಹಕರು 2 ತಿಂಗಳೊಳಗೆ ವಿತರಣೆ ಪಡೆಯಬಹುದು. ಇದು ರೂ.11.50 ಲಕ್ಷದಿಂದ ರೂ.17.62 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 1.5-ಲೀ. ಡಿಸೇಲ್, 2.2-ಲೀ. ಡಿಸೇಲ್ ಮತ್ತು 2.0-ಲೀ ಟರ್ಬೊ ಪೆಟ್ರೋಲ್ ಎಂಜಿನ್ ಪಡೆಡಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, May 27, 2025, 15:41 [IST]
English summary
Mahindra thar roxx suv may 2025 waiting period reviled details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+