ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಹೊಸ ಎಸ್‌ಯುವಿ: ಜೋರು ಪರೀಕ್ಷೆ... ಶೀಘ್ರದಲ್ಲೆ ಬಿಡುಗಡೆ

ಆಗಸ್ಟ್ 2025 ರಲ್ಲಿ ಅನಾವರಣಗೊಂಡ ಮಹೀಂದ್ರಾದ ಫ್ರೀಡಂ_ಎನ್‌ಯು (Freedom_NU) ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ 4 - ಮೀಟರ್‌ಗಿಂತ ಕಡಿಮೆ ಇರುವ ಕಾನ್ಸೆಪ್ಟ್ ಮಾಡಲ್ ಮಹೀಂದ್ರಾ ವಿಷನ್.ಎಸ್ (Mahindra Vision.S) ಎಸ್‌ಯುವಿ, ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸಲ್ಪಡುತ್ತಿರುವುದು ಕಂಡುಬಂದಿದೆ. 2027 ರ ಆರಂಭದಲ್ಲಿ ಬಿಡುಗಡೆಯಾಗುವ ಗುರಿಯೊಂದಿಗೆ ಉತ್ಪಾದನೆಗೆ ಸಿದ್ಧಗೊಳ್ಳುತ್ತಿದೆ, ಇದು ಶೋರೂಂಗಳನ್ನು ತಲುಪುತ್ತಿರುವ ನಾಲ್ಕು ಕಾನ್ಸೆಪ್ಟ್‌ ಮಾಡಲ್‌ಗಳಲ್ಲಿ (ವಿಷನ್.ಎಸ್, ವಿಷನ್.ಟಿ, ವಿಷನ್.ಎಕ್ಸ್, ವಿಷನ್.ಎಸ್‌ಎಕ್ಸ್‌ಟಿ) ಮೊದಲನೆಯದಾಗಿದೆ. ಈ ಮಾಡಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು ಇಲ್ಲಿವೆ.

ಡಿಸೈನ್ ಮುಖ್ಯಾಂಶಗಳು: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿರುವ ಮಾಡಲ್‌ ಅನ್ನು ಆಧರಿಸಿ, ಇದು ದೃಢವಾದ ಬಾಕ್ಸಿ ವಿನ್ಯಾಸದೊಂದಿಗೆ ಹಿಂಭಾಗದಲ್ಲಿ ಜೋಡಿಸಲಾದ ಬಿಡಿ ಚಕ್ರ ಮತ್ತು 4 ಮೀಟರ್‌ಗಿಂತ ಕಡಿಮೆ ಉದ್ದ, ಎತ್ತರವಾದ ಬಾಕ್ಸಿ ಡಿಸೈನ್ ಹೊಂದಿದೆ. ಮುಂಭಾಗವು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು ಮತ್ತು ರೆಟ್ರೊ - ಆಧುನಿಕ ಸ್ಲ್ಯಾಟ್ ಗ್ರಿಲ್ ಮತ್ತು ಲಂಬವಾದ ಟೈಲ್‌ಲ್ಯಾಂಪ್‌ಗಳು ಮಹೀಂದ್ರಾದ ಈ SUV ಅನ್ನು ರಗಡ್ ಆಗಿ ಕಾಣುವಂತೆ ಮಾಡಿವೆ.

mahindra-vision-s-suv-spotted-while-road-test

ಪ್ಲಾಟ್‌ಫಾರ್ಮ್ ಮತ್ತು ಪವರ್‌ಟ್ರೇನ್: ಮಾನೋಕೋಕ್ ಫ್ರೀಡಂ_ಎನ್‌ಯು (nu_IQ) ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ ಇದು, ಲ್ಯಾಡರ್ - ಫ್ರೇಮ್‌ನಲ್ಲಿ ನಿರ್ಮಾಣವಾಗಿರುವ ಸ್ಕಾರ್ಪಿಯೋ - ಎನ್ ಮತ್ತು ಕ್ಲಾಸಿಕ್‌ಗಿಂತ ಭಿನ್ನವಾಗಿರುವ ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಆಯ್ಕೆಗಳನ್ನು ಪಡೆಯಲಿದೆ ಎಂದು ಮಹೀಂದ್ರಾ ಈಗಾಗಲೇ ಧೃಡಪಡಿಸಿದೆ. ಸದ್ಯ ಎಂಜಿನ್ ಅಥವಾ ಡ್ರೈವ್‌ಟ್ರೇನ್ ಆಯ್ಕೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಆ ವಿವರಗಳು ಬಹಿರಂಗಗೊಳ್ಳಬಹುದು.

ಇಂಟೀರಿಯರ್ ನಿರೀಕ್ಷೆಗಳು: ಡ್ಯುಯಲ್ ಡಿಜಿಟಲ್ ಸ್ಕ್ರೀನ್‌ಗಳು, ಸೌಕರ್ಯ ಮತ್ತು ಕ್ರಿಯಾತ್ಮಕತೆಯ ಮೇಲೆ ಕೇಂದ್ರೀಕರಿಸಿದ ಮರುವಿನ್ಯಾಸಗೊಳಿಸಲಾದ ಪ್ರೀಮಿಯಂ ಕ್ಯಾಬಿನ್ ಅನ್ನು ನಿರೀಕ್ಷಿಸಲಾಗಿದೆ. ಜೊತೆಗೆ ಆಧುನಿಕ ವಿನ್ಯಾಸದೊಂದಿಗೆ ತಂತ್ರಜ್ಞಾನ - ಕೇಂದ್ರಿತ ಕ್ಯಾಬಿನ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ. ನಗರ ಮತ್ತು ಆಫ್ - ರೋಡ್ ಖರೀದಿದಾರರಿಗೆ ಸೂಕ್ತವಾದ ಐಷಾರಾಮಿ ಜೊತೆಗೆ ಒರಟಾದ ಉಪಯುಕ್ತತೆಗೆ ಒತ್ತು ನೀಡಿ ಕಾರು ನಿರ್ಮಾಣಗೊಳ್ಳುತ್ತಿದೆ.

ಈ ಮಾಡ್ಯುಲರ್ ಸೆಟಪ್ ವೈವಿಧ್ಯಮಯ ಬಾಡಿ ಡಿಸೈನ್‌ನೊಂದಿಗೆ, ವಿಷನ್ ಎಸ್ ಅನ್ನು ಕಾಂಪ್ಯಾಕ್ಟ್ ಸ್ಕಾರ್ಪಿಯೋದಂತೆ ತೋರಿಸುತ್ತದೆ. ಮಹೀಂದ್ರಾ 2027 ರ ಸುಮಾರಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಸ್ಪರ್ಧಾತ್ಮಕ ಬೆಲೆ, ಪ್ರಾಯೋಗಿಕತೆಯನ್ನು ಬಯಸುವ ಖರೀದಿದಾರರನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು, ಸಬ್ - 4 ಮೀಟರ್‌ ವಿಭಾಗದಲ್ಲಿ ಪ್ರತಿಸ್ಪರ್ಧಿಗಳಿಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ.

ಕಂಪನಿ ಹೇಳಿರುವ ಬಿಡುಗಡೆ ಸಮಯಕ್ಕೆ ಕಾರನ್ನು ಪರಿಚಯಿಸುವುದು ಬಹುತೇಕ ಖಚಿತವಾಗಿದೆ. ವಿಷನ್.ಎಸ್ ಫ್ರೀಡಂ_ಎನ್‌ಯು ಕಾನ್ಸೆಪ್ಟ್‌ ಮಾಡಲ್‌ಗಳಲ್ಲಿ ಉತ್ಪಾದನೆಗೆ ಹತ್ತಿರವಾಗುತ್ತಿರುವ ಮೊದಲನೆಯ ಎಸ್‌ಯುವಿಯಾಗಿದೆ. ಭಾರತೀಯ ರಸ್ತೆಗಳಲ್ಲಿ ಪರೀಕ್ಷಾರ್ಥ ಕಾರುಗಳನ್ನು ಈಗಾಗಲೇ ಹಲವು ಬಾರಿ ಗುರುತಿಸಲಾಗಿದೆ, ಇದರ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿದ್ದು, ಅಂದುಕೊಂಡ ಸಮಯಕ್ಕೆ ಮಾರುಕಟ್ಟೆಗೆ ಎಂಟ್ರಿಕೊಡಬಹುದು ಎಂದು ಸೂಚಿಸುತ್ತಿದೆ.

mahindra-vision-s-suv-spotted-while-road-test

Vision.S ಉತ್ಪಾದನೆಗೆ ಪ್ರವೇಶಿಸಿದ ನಂತರ ಸ್ಕಾರ್ಪಿಯೋ ಕುಟುಂಬಕ್ಕೆ ಸೇರುವ ನಿರೀಕ್ಷೆಯಿರುವುದರಿಂದ ಇದು ವಿಶೇಷ ಮಾಡಲ್ ಆಗಿದೆ. ನಿರ್ಮಾಣದ ವಿಷಯದಲ್ಲಿ ಇದು ಸ್ಕಾರ್ಪಿಯೋ - N ಮತ್ತು ಸ್ಕಾರ್ಪಿಯೋ ಕ್ಲಾಸಿಕ್ ಎರಡರಿಂದಲೂ ಭಿನ್ನವಾಗಿರುತ್ತದೆ. Vision.S ನ ಉತ್ಪಾದನಾ ಆವೃತ್ತಿಯು ಲ್ಯಾಡರ್ - ಫ್ರೇಮ್ ಚಾಸಿಸ್ ಅನ್ನು ಬಳಸುವುದಿಲ್ಲ, ಮೊದಲೇ ಹೇಳಿದಂತೆ ಇದು ಮಾನೋಕಾಕ್ ಫ್ರೀಡಮ್_NU ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾಗುವುದು.

ಮಹೀಂದ್ರಾ Vision.S ನಂತರ Vision.SXT, Vision.T ಮತ್ತು Vision.X ಒಂದೊಂದಾಗಿ ಕಂಪನಿಯಿಂದ ಬಿಡುಗಡೆಯಾಗುವ ಮಾಡಲ್‌ಗಳಾಗಿವೆ. ಅವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಬಾಡಿ ಡಿಸೈನ್ ಹೊಂದಿರಲಿವೆ. ಆದರೆ ಅವೆಲ್ಲವೂ ಒಂದೇ ಮಾಡ್ಯುಲರ್ ಆರ್ಕಿಟೆಕ್ಚರ್ ಅಡಿಯಲ್ಲಿ ಬ್ರ್ಯಾಂಡ್‌ನ ಮುಂದಿನ ಹಂತದ SUV ವಿನ್ಯಾಸ ಮತ್ತು ಎಂಜಿನಿಯರಿಂಗ್ ಅನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ಕಂಪನಿ ಹೇಳಿದೆ.

More from DriveSpark

Article Published On: Tuesday, December 30, 2025, 13:48 [IST]
English summary
Mahindra vision s suv spotted while road test
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+