ವರ್ಷಾಂತ್ಯಕ್ಕೆ ಕೆಲವೇ ದಿನ ಬಾಕಿ: ಮಾರುಕಟ್ಟೆ ಶೇಕ್ ಮಾಡಲು ಹೊಸ ರಗಡ್ SUV ಬಿಡುಗಡೆಗೆ ಸಜ್ಜು!

ಭಾರತದ ಪ್ರಮುಖ SUV ತಯಾರಕರಾದ ಮಹೀಂದ್ರಾ, ಇಂದು ಪ್ರೀಮಿಯಂ SUV ವಿಭಾಗದಲ್ಲಿ ತನ್ನ ಮುಂದಿನ ಪ್ರಮುಖ ಎಸ್‌ಯುವಿಯಾದ XUV 7XO ಹೆಸರನ್ನು ಘೋಷಿಸಿದೆ. ನವೀಕರಿಸಿದ XUV700 ಅನ್ನು ಮಹೀಂದ್ರಾ XUV 7XO ಎಂದು ಕರೆಯಲಾಗುವುದು ಎಂದು ಮಹೀಂದ್ರಾ ಈಗ ಅಧಿಕೃತವಾಗಿ ದೃಢಪಡಿಸಿದೆ. ಕೇವಲ ನಾಲ್ಕು ವರ್ಷಗಳಲ್ಲಿ 3,00,000 ಕ್ಕೂ ಹೆಚ್ಚು ಹೆಮ್ಮೆಯ ಮಾಲೀಕರೊಂದಿಗೆ ಭಾರತದಲ್ಲಿ SUV ವಿಭಾಗವನ್ನು ವಿಕಸನಗೊಳಿಸಿದ XUV700 ಪರಂಪರೆಯ ಮೇಲೆ ನಿರ್ಮಿಸಲಾದ XUV 7XO ಎಸ್‌ಯುವಿ ಮಾರುಕಟ್ಡೆಯಲ್ಲಿ ಗೇಮ್ ಚೇಂಚರ್ ಆಗಲಿದೆ ಎಂದು ಕಂಪನಿ ಹೇಳಿದೆ.

ಸ್ಫೂರ್ತಿ ನೀಡಲು ಮತ್ತು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಇದು XUV700 ನ ಸಾಬೀತಾಗಿರುವ ಸಾಮರ್ಥ್ಯಗಳನ್ನು ಉನ್ನತ ವಿನ್ಯಾಸ, ತಂತ್ರಜ್ಞಾನ, ಸೌಕರ್ಯ ಮತ್ತು ಕಾರ್ಯಕ್ಷಮತೆಯೊಂದಿಗೆ ಸಂಯೋಜಿಸುತ್ತದೆ. ಪ್ರೀಮಿಯಂ SUV ವಿಭಾಗದಲ್ಲಿ ಮಹೀಂದ್ರಾದ ನಾಯಕತ್ವವನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ XUV 7XO, ನಾಳಿನ SUV ಗಳಿಗೆ ಮತ್ತೆ ದಾರಿ ತೋರಿಸಲು ಸಜ್ಜಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

mahindra-will-launch-xuv-7xo-on-jan-5th-2026

ಹೊಸ 7XO ಜನವರಿ 5, 2026 ರಂದು ಬಿಡುಗಡೆಯಾಗಲಿದೆ ಎಂದು ಮಹೀಂದ್ರಾದ ಇತ್ತೀಚಿನ ಟೀಸರ್ ಒಂದರಲ್ಲಿ ದೃಢಪಡಿಸಿದೆ. ಟೀಸರ್‌ನಲ್ಲಿ ಅದರ ಹೆಡ್‌ಲೈಟ್, ಟೈಲ್-ಲೈಟ್ ಮತ್ತು ಗ್ರಿಲ್ ವಿನ್ಯಾಸದ ಕೆಲವು ಸಣ್ಣ ತುಣುಕುಗಳನ್ನು ತೋರಿಸಲಾಗಿದೆ. ಇವೆಲ್ಲವೂ ಅಪ್‌ಡೇಟ್ ಆಗಿರುವಂತೆ ಕಾಣುತ್ತವೆ. ಮುಂಭಾಗದ ಗ್ರಿಲ್ ಈಗ ಹೊಸ XEV 9S ಗೆ ಹೊಂದಿಕೆಯಾಗುತ್ತದೆ, ಆದರೆ ಹಿಂದಿನಂತೆಯೇ ಕ್ರೋಮ್ ಸ್ಲ್ಯಾಟ್‌ಗಳನ್ನು ಹೊಂದಿದೆ.

ಮಹೀಂದ್ರಾ XUV 7XO ನಿರೀಕ್ಷಿತ ಬೆಲೆ: ಮಹೀಂದ್ರಾ XUV700 ಪ್ರಸ್ತುತ ಬೇಸ್ ವೇರಿಯೆಂಟ್ ಬೆಲೆಯು 13.66 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಆರಂಭವಾಗುತ್ತದೆ. ಹಾಗೆಯೇ ಟಾಪ್ ವೇರಿಯೆಂಟ್ ಬೆಲೆಯು 23.71 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇದೆ. ಇನ್ನು ಮುಂಬರಲಿರುವ ಮಹೀಂದ್ರಾ XUV 7XO ಆರಂಭಿಕ ಬೆಲೆಯು ಸುಮಾರು 15 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ.

ಮುಂಬರಲಿರುವ ಹೊಸ ಮಹೀಂದ್ರಾ XUV 7XO ಎಸ್‌ಯುವಿಯು ಮಾರುಕಟ್ಟೆಯಲ್ಲಿ ಪ್ರಮುಖ ಕಾರುಗಳಾದ ಟಾಟಾ ಸಫಾರಿ, ಹುಂಡೈ ಅಲ್ಕಾಜರ್, ಮಹೀಂದ್ರಾ ಸ್ಕಾರ್ಪಿಯೊ N ಮತ್ತು MG ಹೆಕ್ಟರ್ ಪ್ಲಸ್‌ಗೆ ಪ್ರತಿಸ್ಪರ್ಧಿಯಾಗಲಿದೆ. ಟಾಟಾ ಹ್ಯಾರಿಯರ್ ಜೊತೆಗೆ ಟಾಟಾ ಸಫಾರಿ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯಲಿದೆ, ಏಕೆಂದರೆ ಇದು ಇಲ್ಲಿಯವರೆಗೆ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿತ್ತು.

ನಿರೀಕ್ಷಿತ ಫೀಚರ್‌ಗಳು: ಹೊಸ ಮುಂಬರಲಿರುವ XUV 7XO ಇಂಟೀರಿಯರ್‌ನಲ್ಲಿ ಟ್ರಿಪಲ್-ಸ್ಕ್ರೀನ್ ಸೆಟಪ್‌ನಂತಹ ನವೀಕರಣಗಳನ್ನು ಪಡೆಯುವ ನಿರೀಕ್ಷೆಯಿದೆ. ಹೊಸ ಡಿಸ್ಪ್ಲೇ ವಿನ್ಯಾಸದೊಂದಿಗೆ, ಮಹೀಂದ್ರಾ ಕೆಲವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸುವ ನಿರೀಕ್ಷೆಯಿದೆ. ಅಂದರೆ ಇತ್ತೀಚೆಗೆ ಬಿಡುಗಡೆಯಾದ ಮಹೀಂದ್ರಾ XEV 9S ಎಲೆಕ್ಟ್ರಿಕ್ ಎಸ್‌ಯುವಿನಂತೆ ಪ್ರೀಮಿಯಂ ಆಗಿರಲಿದೆ.

ಇವುಗಳಲ್ಲಿ ಮಸಾಜ್ ಮಾಡುವ ಮುಂಭಾಗದ ಸೀಟುಗಳು, 6-ಸೀಟರ್ ರೂಪಾಂತರಗಳಿಗೆ ಹಿಂಭಾಗದ ವೆಂಟಿಲೇಟೆಡ್ ಸೀಟುಗಳು, 16-ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್ ಮತ್ತು ಎರಡನೇ ವೈರ್‌ಲೆಸ್ ಚಾರ್ಜರ್ ಸೇರಿವೆ. ಜೊತೆಗೆ ಪನೋರಮಿಕ್ ಸನ್‌ರೂಫ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್, ಡ್ಯುಯಲ್ - ಜೋನ್ ಕ್ಲೈಮೇಟ್ ಕಂಟ್ರೋಲ್‌ನೊಂದಿಗೆ ಪವರ್ಡ್ ಡ್ರೈವರ್ ಸೀಟ್ ಸೇರಿವೆ.

ಸುರಕ್ಷತಾ ವೈಶಿಷ್ಟ್ಯಗಳು ಸಹ ಬದಲಾಗದೆ ಉಳಿಯುವ ನಿರೀಕ್ಷೆಯಿದೆ. ಆದ್ದರಿಂದ 7 ಏರ್‌ಬ್ಯಾಗ್‌ಗಳು (6 ಸ್ಟ್ಯಾಂಡರ್ಡ್), ESC, ಆಟೋ ಹೆಡ್‌ಲ್ಯಾಂಪ್ ‌ಗಳು, 360 - ಡಿಗ್ರಿ ಕ್ಯಾಮೆರಾ, TPMS, ISOFIX ಮೌಂಟ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಲೆವೆಲ್ 2 ADAS ಅನ್ನು ನಿರೀಕ್ಷಿಸಲಾಗಿದೆ. ಇವುಗಳ ಜೊತೆಗೆ ಹೆಚ್ಚುವರಿ ಫೀಚರ್ಸ್ ಸೇರಿಸುವ ಸಾಧ್ಯತೆಯು ಇದೆ.

ಎಂಜಿನ್: XUV 7XO ಎಂಜಿನ್ ವಿಷಯದಲ್ಲಿ ಯಾವುದೇ ಬದಲಾವಣೆಗಳನ್ನು ನಿರೀಕ್ಷಿಸಲಾಗಿಲ್ಲ, ಅಂದರೆ XUV700 ನೊಂದಿಗೆ ಲಭ್ಯವಿರುವ ಅದೇ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಇದು ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿದೆ. ಅದೇ 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಡೀಸೆಲ್ ಆಯ್ಕೆಗಳು ಇರಲಿವೆ. 6-ಸ್ಪೀಡ್ MT, 6-ಸ್ಪೀಡ್ AT ಗೇರ್‌ಬಾಕ್ಸ್ ಆಯ್ಕೆಗಳಲ್ಲಿ ಬರಬಹುದು.

More from DriveSpark

Article Published On: Monday, December 8, 2025, 17:32 [IST]
English summary
Mahindra will launch xuv 7xo on jan 5th 2026
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+