Mahindra: ಹೊಸ ಮಹೀಂದ್ರಾ SUVಗೆ ಫುಲ್ ಡಿಮ್ಯಾಂಡ್: 2 ತಿಂಗಳಲ್ಲಿ 10 ಸಾವಿರ ಕಾರುಗಳು ಮಾರಾಟ

ಮಹೀಂದ್ರಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಕ್ಸ್‌ಇವಿ 9ಇ (Mahindra XEV 9e) ಮತ್ತು ಬಿಇ 6 (BE 6) ಕಾರುಗಳು ತಮ್ಮ ಅಲ್ಟ್ರಾ-ಪ್ರೀಮಿಯಂ ಒಳಾಂಗಣ ಮತ್ತು ಆಕರ್ಷಕ ಫೀಚರ್ಸ್, ಫ್ಯೂಚಿರಿಸ್ಟಿಕ್ ಡಿಸೈನ್‌ನೊಂದಿಗೆ ದೇಶಾದ್ಯಂತ ಗ್ರಾಹಕರ ಹೃದಯಗಳನ್ನು ಗೆಲ್ಲುತ್ತಿವೆ. 2025 ಫೆಬ್ರವರಿ 14 ರಂದು ಈ ಎರಡೂ ಕಾರಿಗಳಿಗೆ ಬುಕಿಂಗ್ ತೆರೆಯಲಾಗಿದ್ದು, ಕೇವಲ 70 ದಿನಗಳಲ್ಲಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳ 10,000 ಯುನಿಟ್ ವಾಹನಗಳನ್ನು ಡೆಲಿವರಿ ನೀಡಲಾಗಿದೆ. ಎರಡೂ ಕಾರುಗಳನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪರಿಚಯಿಸಲಾಗಿತ್ತು. ವಿತರಣೆಗಳು ಮಾರ್ಚ್ 2025 ರಲ್ಲಿ ಪ್ರಾರಂಭವಾಗಿದ್ದವು.

ಈ ಮಾರಾಟದ ಮೈಲಿಗಲ್ಲನ್ನು ದಾಟಲು ಎರಡೂ ಎಲೆಕ್ಟ್ರಿಕ್ ವಾಹನಗಳು ಸುಮಾರು 70 ದಿನಗಳನ್ನು ತೆಗೆದುಕೊಂಡಿವೆ. ವಿಶೇಷವೆಂದರೆ, ಮಹೀಂದ್ರಾ ಇಲ್ಲಿಯವರೆಗೆ ಎರಡೂ ಎಲೆಕ್ಟ್ರಿಕ್ ವಾಹನಗಳ ಟಾಪ್ ವೇರಿಯೆಂಟ್‌ಗಳನ್ನು ಮಾತ್ರ ಡೆಲಿವರಿ ನೀಡಿದೆ. ಕಡಿಮೆ ವೇರಿಯೆಂಟ್‌ಗಳ ವಿತರಣೆಯು ಈ ತಿಂಗಳಿನಿಂದ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

mahindra-xev-9e-and-be-6-10000-units-sold-in-70-days

ಮಹೀಂದ್ರಾ ಕಂಪನಿಯು ಎಕ್ಸ್ಇವಿ 9 ಇ ಮತ್ತು ಬಿಇ 6 ಎರಡೂ ಕಾರುಗಳಿಗೆ ಫೆಬ್ರವರಿ 14 ರಂದು ಬುಕಿಂಗ್ ತೆರೆದಿದ್ದು, ಮೊದಲ ದಿನವೆ ಬರೋಬ್ಬರಿ 30,000 ಕ್ಕೂ ಹೆಚ್ಚು ಬುಕಿಂಗ್‌ಗಳು ಹರಿದುಬಂದಿದ್ದವು. ಇದಲ್ಲದೆ, ಮಹೀಂದ್ರಾ ಮೊದಲ ದಿನವೇ ತನ್ನ ಗ್ರಾಹಕರಿಗೆ 3,000 ಎಲೆಕ್ಟ್ರಿಕ್ ವಾಹನಗಳನ್ನು ರವಾನಿಸಿದೆ ಎಂದು ವರದಿಯಾಗಿದೆ.

ಒಟ್ಟಾರೆ ಮಹೀಂದ್ರಾದ ಇತ್ತೀಚಿನ ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳಾದ ಎಕ್ಸ್‌ಇವಿ 9ಇ ಮತ್ತು ಬಿಇ 6 ಮಾರಾಟದಲ್ಲಿ ಧೂಳೆಬ್ಬಿಸುತ್ತಿವೆ. ಕಡಿಮೆ ಬೆಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನು ನೀಡುತ್ತಿದ್ದು, ದಾಖಲೆಯ ಡೆಲಿವರಿಗಳನ್ನು ಇದುವರೆಗೆ ನೀಡಿರುವುದು ಭಾರತೀಯ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

mahindra-xev-9e-and-be-6-10000-units-sold-in-70-days

ಕಾರುಗಳ ವಿಶೇಷತೆಗಳು: ಮಹೀಂದ್ರಾ ಬಿಇ 6 ವಿಶೇಷತೆಗಳು: ಎಲೆಕ್ಟ್ರಿಕ್ ಕಾರು, ರೂ.18.90 ಲಕ್ಷದಿಂದ ರೂ.26.90 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಮತ್ತೊಂದೆಡೆ ಮಹೀಂದ್ರಾ ಎಕ್ಸ್ಇವಿ 9ಇ ಎಲೆಕ್ಟ್ರಿಕ್ ಎಸ್‌ಯುವಿ, ರೂ.21.90 ಲಕ್ಷದಿಂದ ರೂ.30.50 ಲಕ್ಷ (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಮಹೀಂದ್ರಾ ಬಿಇ 6 ಮತ್ತು ಎಕ್ಸ್‌ಇವಿ 9ಇ ಎರಡೂ ಕಾರುಗಳು 59 ಕಿಲೋವ್ಯಾಟ್ ಮತ್ತು 79 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಬರುತ್ತವೆ. 59 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಮಹೀಂದ್ರಾ ಬಿಇ 6 ಕಾರು ಒಮ್ಮೆ ಚಾರ್ಜ್ ಮಾಡಿದರೆ 535 ಕಿ.ಮೀ ಹಾಗೂ 79 ಕಿಲೋವ್ಯಾಟ್ ಕಾರು 682 ಕಿ.ಮೀ ರೇಂಜ್ ನೀಡುತ್ತದೆ.

mahindra-xev-9e-and-be-6-10000-units-sold-in-70-days

ಹಾಗೆಯೇ ಮಹೀಂದ್ರಾ ಎಕ್ಸ್‌ಇವಿ 9ಇ 59 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು ಸಿಂಗಲ್ ಚಾರ್ಜ್‌ನಲ್ಲಿ 542 ಕಿ.ಮೀ ರೇಂಜ್ ನೀಡಿದರೆ, 79 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು ಸಿಂಗಲ್ ಚಾರ್ಜ್‌ನಲ್ಲಿ 656 ಕಿ.ಮೀ ಓಡಬಲ್ಲದು ಎಂದು ಮಹೀಂದ್ರಾ ಕಂಪನಿ ಹೇಳಿಕೊಂಡಿದೆ. ಎರಡೂ ಕಾರುಗಳು ಫೀಚರ್ಸ್ ವಿಷಯದಲ್ಲಿ ಸನ್‌ರೂಫ್ ಸೇರಿದಂತೆ ಆಧುನಿಕವಾಗಿ ಸಿಗುವ ಎಲ್ಲಾ ವೈಶಿಷ್ಟ್ಯಗಳನ್ನು ಒಳಗೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, June 5, 2025, 15:53 [IST]
English summary
Mahindra xev 9e and be 6 10000 units sold in 70 days
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+