ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ಹೊಸ ಮಹೀಂದ್ರಾ 7-ಸೀಟರ್ SUV ಬಿಡುಗಡೆ
ದೇಶೀಯ ಕಾರು ತಯಾರಕ ಕಂಪನಿಯಾದ ಮಹೀಂದ್ರಾ' ಇಂದು XEV 9S ಎಂಬ ಭಾರತದ ಮೊದಲ ಅಧಿಕೃತ ಎಲೆಕ್ಟ್ರಿಕ್ 7-ಸೀಟರ್ SUV ಅನ್ನು ಬಿಡುಗಡೆ ಮಾಡಿದೆ. ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S ಪ್ರಯಾಣಿಕರಿಗೆ ವಿಮಾನದಲ್ಲಿ ಪ್ರಯಾಣಿಸಿಂದತಹ ಮೋಜನ್ನು ನೀಡುತ್ತದೆ. ಅಥ್ಲೆಟಿಕ್ ನಿಲುವು, ಮಸ್ಕುಲರ್ ಲೈನ್‌ಗಳು, ತಲ್ಲೀನಗೊಳಿಸುವ ತಂತ್ರಜ್ಞಾನ-ಸಮೃದ್ಧ ಇಂಟೀರಿಯರ್ ಜೊತೆಗೆ ಪ್ರೀಮಿಯಂ ಆಗಿ ಕಾಣುತ್ತದೆ. ಬೆಲೆಗಳು ರೂ. 19.95 ಲಕ್ಷದಿಂದ ಪ್ರಾರಂಭವಾಗುತ್ತವೆ, ಜನವರಿ 14 ರಂದು ಬುಕಿಂಗ್ ತೆರೆಯಲಿದ್ದು, ಜನವರಿ 23 ರಂದು ವಿತರಣೆಗಳು ಪ್ರಾರಂಭವಾಗುತ್ತವೆ.
ಮಹೀಂದ್ರಾ XEV 9S ವಿಶೇಷತೆಗಳು
ಮಹೀಂದ್ರಾದ ಸಾಬೀತಾದ INGLO ಪ್ಲಾಟ್‌ಫಾರ್ಮ್ ನಲ್ಲಿ ನಿರ್ಮಾಣವಾಗಿರುವ XEV 9S, ಒಮ್ಮೆ ಚಾರ್ಜ್ ಮಾಡಿದರೆ 500 ಕಿ.ಮೀ ಓಡಬಲ್ಲದು. 4076 ಲೀಟರ್‌ನ ಅತಿದೊಡ್ಡ ಕ್ಯಾಬಿನ್ ಸ್ಪೇಸ್ (ಮುಂಭಾಗ ಮತ್ತು ಎರಡನೇ ಸಾಲಿಗೆ), 527 ಲೀಟರ್ ವರೆಗಿನ ಬೂಟ್ ಸ್ಪೇಸ್, 150 ಲೀಟರ್‌ನ ಅತ್ಯುತ್ತಮ ಫ್ರಂಕ್ ಸ್ಪೇಸ್, 3ನೇ ಸಾಲಿನಲ್ಲಿ 50:50 ಸ್ಪ್ಲಿಟ್ ಸೀಟುಗಳನ್ನು ಒದಗಿಸಲಾಗಿದೆ.

ಎರಡನೇ ಸಾಲು ಐಷಾರಾಮಿಯಾಗಿದ್ದು, ಪವರ್ಡ್ ಬಾಸ್ ಮೋಡ್, ವೆಂಟಿಲೇಟೆಡ್ 2 ನೇ ಸಾಲಿನ ಸೀಟ್‌ಗಳು, ರಿಕ್ಲೈನ್ ಮತ್ತು ಸ್ಲೈಡಿಂಗ್ ಹೊಂದಾಣಿಕೆ, 2ನೇ ಸಾಲಿನ ಕಿಟಕಿಗಳಿಗೆ ಸನ್‌ಶೇಡ್, ಅಕೌಸ್ಟಿಕ್ "ಲ್ಯಾಮಿನೇಟೆಡ್" ಗ್ಲಾಸ್, ವೈರ್‌ಲೆಸ್ ಫೋನ್ ಚಾರ್ಜಿಂಗ್, 3 ಮೋಡ್‌ಗಳೊಂದಿಗೆ ಲೈವ್ ಯುವರ್‌ಮೂಡ್ ನಂತಹ ಆಧುನಿಕ ಫೀಚರ್ಸ್ ನೀಡಲಾಗಿದೆ.
ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, 7 ಏರ್‌ಬ್ಯಾಗ್‌ಗಳು, 5 ರಾಡಾರ್‌ಗಳು ಮತ್ತು 1 ವಿಷನ್ ಕ್ಯಾಮೆರಾದೊಂದಿಗೆ L2+ ADAS, ಡ್ರೈವರ್ ಅರೆನಿದ್ರಾವಸ್ಥೆ ಪತ್ತೆ DOMS (ಐಡೆಂಟಿಟಿ), Secure360 Pro - ಹೊಸ ಲೈವ್ ಸಂವಹನ ವೈಶಿಷ್ಟ್ಯದೊಂದಿಗೆ ಲೈವ್ ವೀಕ್ಷಣೆ ಮತ್ತು ರೆಕಾರ್ಡಿಂಗ್ ಸೇರಿದಂತೆ 140ಕ್ಕೂ ಹೆಚ್ಚು ಫೀಚರ್ಸ್‌ನೊಂದಿಗೆ ಡಿಜಿಟಲ್ ಕೀ, NFC, ಚಾರ್ಜ್ ಶೆಡ್ಯೂಲರ್ ನೀಡಲಾಗಿದೆ.

ಕಾರಿನ ಉದ್ದಳತೆ ವಿಷಯಕ್ಕೆ ಬಂದರೆ ಕಮಾಂಡ್ ಸೀಟ್ ಸ್ಥಾನದೊಂದಿಗೆ 205 mm (222 mm ಬ್ಯಾಟರಿ ಗ್ರೌಂಡ್ ಕ್ಲಿಯರೆನ್ಸ್) ನ ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರು ತುಂಬಾ ಪವರ್‌ಫುಲ್ ಆಗಿದ್ದು, 210 kW ಪವರ್ ಹಾಗೂ 380 Nm ಟಾರ್ಕ್ ಹೊರಹಾಕುತ್ತದೆ. ಇದರ ವರ್ಗದಲ್ಲಿಯೇ ವೇಗವಾದ 7-ಆಸನಗಳ SUV (7.0 ಸೆಕೆಂಡುಗಳಲ್ಲಿ 0-100 ಕಿಮೀ/ಗಂ) ಆಗಿದೆ. ಇದರ ಟಾಪ್ ಸ್ಪೀಡ್ 202 ಕಿ.ಮೀ ಇದೆ.
ಚಾಲಕ ಕೇಂದ್ರೀಕೃತ ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, VisionX - AR HUD, ಐಡೆಂಟಿಟಿ - ಡ್ರೈವರ್ ಮತ್ತು ಪ್ಯಾಸಿಂಜರ್ ಮೇಲ್ವಿಚಾರಣಾ ವ್ಯವಸ್ಥೆ, ಆಟೋಪಾರ್ಕ್ ಅಸಿಸ್ಟ್, ಡ್ರೈವ್ ಮೋಡ್‌ಗಳು (ಡೀಫಾಲ್ಟ್, ರೇಂಜ್, ರೇಸ್, ಡೈಲಿ), 6-ವೇ ಪವರ್ಡ್ ಮೆಮೊರಿ ಸೀಟ್, ಕ್ಯಾಪ್‌ಟಚ್ ಸ್ಟೀರಿಂಗ್ ಸ್ವಿಚ್‌ಗಳು, ಲೈವ್‌ಯುವರ್‌ಮೂಡ್, ಸ್ಮಾರ್ಟ್ ಕ್ಲೈಮೆಟ್ ಕಂಟ್ರೋಲ್, ಬಿಗ್ ಆನ್ ಇನ್ಫೊಟೈನ್ಮೆಂಟ್ ಹೊಂದಿದೆ.

ಇವಿಷ್ಟೆ ಅಲ್ಲದೆ ಡಾಲ್ಬಿ ಅಟ್ಮಾಸ್‌ನೊಂದಿಗೆ 16 ಸ್ಪೀಕರ್ ಹರ್ಮನ್ ಕಾರ್ಡನ್ ಆಡಿಯೋ, ಮೂರು 31.24 ಸೆಂ.ಮೀ ಸ್ಕ್ರೀನ್‌ಗಳು, 5G ಸಂಪರ್ಕ, ಆಂಬಿಯೆಂಟ್ ಲೈಟ್‌ಗಳನ್ನು ಒದಗಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವಮಾನದ ಖಾತರಿಯೊಂದಿಗೆ ಸುಧಾರಿತ LFP ಬ್ಯಾಟರಿಯನ್ನು ಒದಗಿಸಿರುವುದು ಎಲ್ಲಕ್ಕಿಂತ ಪ್ರಮುಖ ಹೈಲೆಟ್ ಆಗಿದೆ.
ಹೊಸ XEV 9S ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಸುಧಾರಿತ ಪ್ರಯಾಣ ಅನುಭವಕ್ಕಾಗಿ ಮುಂಭಾಗದಲ್ಲಿ i-ಲಿಂಕ್ ಮತ್ತು ಹಿಂಭಾಗದಲ್ಲಿ 5-ಲಿಂಕ್ ಇಂಡಿಪೆಂಡೆಂಟ್ ಸಸ್ಪೆನ್ಷನ್ ನೀಡಲಾಗಿದೆ. ಜೊತೆಗೆ ಅತ್ಯಾಧುನಿಕ IEB ಯೊಂದಿಗೆ ಬ್ರೇಕ್ ಬೈ ವೈರ್, VGR ನೊಂದಿಗೆ ಹೈ ಪವರ್ ಸ್ಟೀರಿಂಗ್ ನೀಡಲಾಗಿದೆ. ಇದು ಕಾರನ್ನು ಸದ್ಯದ ಅತ್ಯಾಧುನಿಕ ಎಲೆಕ್ಟ್ರಿಕ್ 7-ಸೀಟರ್ SUV ಆಗಿ ಮಾಡಿದೆ.


Click it and Unblock the Notifications








