ಬೆಂಗಳೂರಿನಿಂದ ಮಂಗಳೂರಿಗೆ ಕೇವಲ 60 ರೂಪಾಯಿ ಸಾಕು! ಬೆಚ್ಚಿಬೀಳಿಸಿದೆ ಹೊಸ ಕಾರು!

ಭಾರತದ ಪ್ರಮುಖ ಎಸ್‌ಯುವಿ ತಯಾರಕ ಕಂಪನಿಯಾದ ಮಹೀಂದ್ರಾ ಸದ್ಯ ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳೊಂದಿಗೆ ಹೊಸ ಯುಗಕ್ಕೆ ಎಂಟ್ರಿ ಕೊಟ್ಟಿದೆ. ತನ್ನ ಸಮರ್ಥ ಇವಿ ಎಸ್‌ಯುವಿಗಳು ಸುಧೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದಂತಿವೆ ಎಂಬುದನ್ನು ಸಾಭೀತು ಮಾಡುತ್ತಿದೆ. ಇತ್ತೀಚೆಗಷ್ಟೆ ಹೊಸ ಮಹೀಂದ್ರಾ ಎಕ್ಸ್‌ಇವಿ 9ಎಸ್ (Mahindra XEV 9S) ಎಂಬ 7-ಸೀಟರ್ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಉತ್ತಮ ಡಿಸೈನ್, ಅತ್ಯಾಧುನಿಕ ಫೀಚರ್ಸ್, ಸಿಂಗಲ್ ಚಾರ್ಜ್‌ನಲ್ಲಿ ಅತ್ಯಧಿಕ ರೇಂಜ್ (ಮೈಲೇಜ್) ನೀಡುವ ಕಾರಾಗಿದೆ.

ಮಹೀಂದ್ರಾ XEV 9S ಎಲೆಕ್ಟ್ರಿಕ್ ಕಾರು 59 kWh, 70 kWh ಮತ್ತು 79 kWh ಎಂಬ 3 ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿದೆ. ಪ್ರತಿ ಬ್ಯಾಟರಿಯು ತನ್ನದೇ ಆದ ರೇಂಜ್ (ಮೈಲೇಜ್) ನೀಡುತ್ತದೆ, 59 kWh ಬ್ಯಾಟರಿಯನ್ನು ಹೊಂದಿರುವ XEV 9S ಕಾರು ಒಮ್ಮೆ ಚಾರ್ಜ್ ಮಾಡಿದರೆ 521 ಕಿ.ಮೀ, 70 kWh ಬ್ಯಾಟರಿ ಹೊಂದಿರುವ ಕಾರು 600 ಕಿ.ಮೀ ಹಾಗೂ 79 kWh ಹೊಂದಿರುವ ಕಾರು ಬರೋಬ್ಬರಿ 679 ಕಿ.ಮೀ ಓಡಬಲ್ಲವು.

mahindra-xev-9s-driving-range-and-running-costs-details

ಕೇವಲ ರೇಂಜ್ ಮಾತ್ರವಲ್ಲ, ಎಲೆಕ್ಟ್ರಿಕ್ ಕಾರಿನ ಇಂಟೀರಿಯರ್ ಕೂಡ ಪ್ರೀಮಿಯಂ ಆಗಿದೆ. ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನ ಮುಂದೆ ಅದೇ ಗಾತ್ರದ 12.3 ಇಂಚಿನ ಮನರಂಜನಾ ಡಿಸ್ಪ್ಲೇ ಸೇರಿದಂತೆ ಒಟ್ಟು 3 ಡಿಸ್ಪ್ಲೇಗಳನ್ನು ನೀಡುವ ಮೂಲಕ ಅಂತರಾಷ್ಟ್ರೀಯ ಗುಣಮಟ್ಟದೊಂದಿಗೆ ನಿರ್ಮಿಸಲಾಗಿದೆ.

ಇವಿಷ್ಟೇ ಅಲ್ಲದೇ ಈ ಕಾರಿನಲ್ಲಿ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಪನೋರಮಿಕ್ ಸನ್‌ರೂಫ್, 540-ಡಿಗ್ರಿ ಕ್ಯಾಮೆರಾ, 16-ಸ್ಪೀಕರ್ ಹಾರ್ಮನ್ ಕಾರ್ಡನ್ ಆಡಿಯೊ ಸಿಸ್ಟಮ್, AR ಹೆಡ್ಸ್-ಅಪ್ ಡಿಸ್ಪ್ಲೇ, ಹಿಂಭಾಗದ AC ವೆಂಟ್‌ಗಳು, ಲೆಥೆರೆಟ್ ಅಪ್ಹೋಲ್ಸ್ಟರಿ, ಆಟೋ ಹೆಡ್‌ಲ್ಯಾಂಪ್‌ಗಳು, ಆಟೋ ವೈಪರ್‌ಗಳಂತಹ ವೈಶಿಷ್ಟ್ಯಗಳನ್ನು ಸಹ ಈ ಎಲೆಕ್ಟ್ರಿಕ್ ಕಾರಿನಲ್ಲಿ ಒದಗಿಸಿರುವುದು ಮತ್ತೊಂದು ಹೈಲೆಟ್ ಆಗಿದೆ.

mahindra-xev-9s-driving-range-and-running-costs-details

ಪ್ರಯಾಣಿಕರ ಸುರಕ್ಷತೆ ವಿಷಯದಲ್ಲೂ ಕಂಪನಿ ರಾಜಿಯಾಗದೆ, 6 ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ರಿಯರ್ ವ್ಯೂ ಕ್ಯಾಮೆರಾ, ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ರಿಯರ್ ಡಿಫಾಗರ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳು ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಈ ಎಲೆಕ್ಟ್ರಿಕ್ ಕಾರಿನ ಮತ್ತೊಂದು ಹೈಲೆಟ್ ಎಂದರೆ, ತುಂಬಾ ಕಡಿಮೆ ಚಾಲನಾ ವೆಚ್ಚ. ಮಹೀಂದ್ರಾದ ಅಧಿಕೃತ ವೆಬ್‌ಸೈಟ್ ಪ್ರಕಾರ, XEV 9S ಎಲೆಕ್ಟ್ರಿಕ್ ಕಾರು ಪ್ರತಿ ಕಿಲೋಮೀಟರ್ ಓಡಲು ಕೇವಲ 1.2 ರೂಪಾಯಿ ಮಾತ್ರ ಖರ್ಚಾಗುತ್ತದೆ. ಅಂದರೆ ಈ ಲೆಕ್ಕದಲ್ಲಿ, ಬೆಂಗಳೂರಿನಿಂದ ಮಂಗಳೂರಿಗೆ (ಗೂಗಲ್ ಮ್ಯಾಪ್ ಪ್ರಕಾರ 350 ಕಿ.ಮೀ) ಪ್ರಯಾಣಿಸಲು ಕೇವಲ 420 ರೂ. ವೆಚ್ಚವಾಗುತ್ತದೆ.

mahindra-xev-9s-driving-range-and-running-costs-details

ನಾವು ಈಗಾಗಲೇ ಹೇಳಿದಂತೆ, ಇದು 7-ಸೀಟರ್ ಕಾರು. ಆದ್ದರಿಂದ ಬೆಂಗಳೂರಿನಿಂದ ಮಂಗಳೂರಿಗೆ 7 ಜನರು ಪ್ರಯಾಣಿಸಿದರೆ, ಪ್ರತಿ ವ್ಯಕ್ತಿಗೆ ಕೇವಲ 60 ರೂಪಾಯಿ ವೆಚ್ಚವಾಗುತ್ತದೆ. ವಿವಿಧ ವೈಶಿಷ್ಟ್ಯಗಳಿಂದ ತುಂಬಿರುವ ಮಹೀಂದ್ರಾ XEV 9S ಎಲೆಕ್ಟ್ರಿಕ್ ಕಾರಿನ ಬೆಲೆಯು 19.95 ಲಕ್ಷ (ಎಕ್ಸ್‌ ಶೋರೂಂ) ರೂ.ಗಳಿಂದ ಆರಂಭವಾಗುತ್ತದೆ. ಇದರ ಟಾಪ್ ವೇರಿಯೆಂಟ್ ಬೆಲೆಯು 29.45 ಲಕ್ಷ (ಎಕ್ಸ್‌ ಶೋರೂಂ) ರೂ. ಇದೆ.

ಮಹೀಂದ್ರಾ XEV 9S ಕಾರಿನ ವಿಸ್ತಾರವಾದ ಕ್ಯಾಬಿನ್, ಮೂರು-ಸಾಲಿನ ವಿನ್ಯಾಸ ಹಾಗೂ ನಿಶ್ಯಬ್ಧ ಡ್ರೈವ್ ಅನುಭವ ನೀಡುವ XEV 9S, ತಲ್ಲೀನಗೊಳಿಸುವ ತಂತ್ರಜ್ಞಾನ-ಸಮೃದ್ಧ ಇಂಟೀರಿಯರ್ ಜೊತೆಗೆ ಪ್ರೀಮಿಯಂ ಆಗಿ ಕಾಣುತ್ತದೆ. ಈ ಕಾರಿಗಾಗಿ ಜನವರಿ 14 ರಂದು ಬುಕಿಂಗ್ ತೆರೆಯಲಿದ್ದು, ಜನವರಿ 23 ರಿಂದ ವಿತರಣೆಗಳು ಪ್ರಾರಂಭವಾಗುತ್ತವೆ ಎಂದು ಮಹೀಂದ್ರಾ ತಿಳಿಸಿದೆ.

More from DriveSpark

Article Published On: Monday, December 1, 2025, 18:24 [IST]
English summary
Mahindra xev 9s driving range and running cost details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+