Mahindra: 8 ಲಕ್ಷದ ಪ್ರೀಮಿಯಂ ಕಾರಿಗೆ ಸಖತ್ ಡಿಮ್ಯಾಂಡ್: ಬುಕ್ ಮಾಡಿದ್ರೆ 52 ವಾರ ಕಾಯಬೇಕು!
ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಭಾರೀ ಬೇಡಿಕೆಯನ್ನು ಹೊಂದಿರುವ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒ (Mahindra XUV 3XUV), ಈಗ ವೇರಿಯೆಂಟ್ ಆಧಾರದ ಮೇಲೆ ಒಂದು ವರ್ಷದವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಈ ಮೂಲಕ ಈ ಎಸ್‌ಯುವಿಯ ಬೇಸ್ ವೇರಿಯೆಂಟ್ (MX1) ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿದೆ. ಮಾರ್ಚ್ 2025 ರ ಹೊತ್ತಿಗೆ, ಈ ಕಾರು 52 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇದು ಮಹೀಂದ್ರಾ ಸಬ್-4 ಮೀಟರ್ ಎಸ್‌ಯುವಿಯ ಹಿಂದೆಂದಿಗಿಂತ ಅಧಿಕ ಕಾಯುವ ಅವಧಿಯನ್ನು ಸೂಚಿಸುತ್ತದೆ.
ಇದರ ಎಂಜಿನ್ ಬಗ್ಗೆ ಹೇಳುವುದಾದ್ರೆ 1.2-ಲೀಟರ್ ಟಿಜಿಡಿಐ ಟರ್ಬೊ ಪೆಟ್ರೋಲ್ ಎಂಜಿನ್, 130 ಪಿಎಸ್ ಪವರ್ ಹಾಗೂ 250 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಹಾಗೆಯೇ ಮತ್ತೊಂದು 1.2-ಲೀಟರ್ ಪೆಟ್ರೋಲ್ ಎಂಜಿನ್, 110 ಪಿಎಸ್ ಪವರ್ ಮತ್ತು 200 ಎನ್ಎಂ ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಕಾರು ಡೀಸೆಲ್ ಪವರ್ ಟ್ರೇನ್ ಆಯ್ಕೆಗಳನ್ನು ಸಹ ಹೊಂದಿದೆ.

ಇದರ 1.5 - ಲೀಟರ್ ಡೀಸೆಲ್ ಎಂಜಿನ್, 117 ಪಿಎಸ್ ಪವರ್ ಮತ್ತು 300 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ನೂತನ ಎಕ್ಸ್‌ಯುವಿ 3ಎಕ್ಸ್ಒ, ರೂಪಾಂತರಗಳಿಗೆ ಅನುಗುಣವಾಗಿ 6 - ಸ್ಪೀಡ್ ಮ್ಯಾನುವಲ್/ 6 - ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 17.96 ರಿಂದ 21.2 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ.
ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಕಾರಿನಲ್ಲಿ, ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಡಿಸ್ಪ್ಲೇಗಳು (10.25 - ಇಂಚು), ಡುಯಲ್ ಝೋನ್ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ಪಡೆದಿದೆ. ಸುರಕ್ಷತೆಗಾಗಿ 6 - ಏರ್‌ಬ್ಯಾಗ್ ಹಾಗೂ ಎಡಿಎಎಸ್ (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ಅನ್ನು ಹೊಂದಿದೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಕಾರು ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳ ಒಳಗೊಂಡಿರುವ ಕಾರಣ, ಇದರ ಬೆಲೆ ವಿಚಾರಕ್ಕೆ ಬಂದರೆ ಇದು ರೂ.7.99 ಲಕ್ಷದಿಂದ ರೂ.15.49 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ. ಡೀಪ್ ಫಾರೆಸ್ಟ್ ಮತ್ತು ಡ್ಯೂನ್ ಬೀಜ್ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿ ಕೂಡ ಲಭ್ಯವಿದೆ.
5-ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಈ ಸಬ್-4 ಮೀಟರ್ ಈ ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಎಸ್‌ಯುವಿ ಟಾಟಾ ನೆಕ್ಸಾನ್, ಮಾರುತಿ ಸುಜುಕಿ ಬ್ರೆಝಾ, ಕಿಯಾ ಸೊನೆಟ್, ಹ್ಯುಂಡೈ ವೆನ್ಯೂ, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಪ್ರಮುಖವಾಗಿ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಹ್ಯುಂಡೈ ವೆನ್ಯೂ ಎಸ್‌ಯುವಿಗಳು ತೀವ್ರವಾಗಿ ಸ್ಪರ್ಧೆಯೊಡ್ಡುತ್ತಿವೆ.

ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್‌ಒನ ಇತರ ವೇರಿಯೆಂಟ್‌ಗಳ ಕಾಯುವ ಅವಧಿ: MX 2, MX 2 ಪ್ರೊ, MX 3 ಮತ್ತು MX 3 ಪ್ರೊ ವೇರಿಯೆಂಟ್‌ಗಳು ಈಗ 10 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿವೆ. AX 5 ರೂಪಾಂತರವು ಎಂಟು ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇತರ ಎಲ್ಲಾ ವೇರಿಯೆಂಟ್‌ಗಳು ಎರಡು ವಾರಗಳ ಏಕರೂಪದ ಕಾಯುವಿಕೆ ಅವಧಿಯನ್ನು ಹೊಂದಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








