Mahindra: ಮಹೀಂದ್ರಾ ಎಸ್‌ಯುವಿಗೆ ಫುಲ್ ಡಿಮ್ಯಾಂಡ್: ಹೊಸ ಸಿರೀಸ್ ಬಿಡುಗಡೆ... ಬೆಲೆಯೆಷ್ಟು?
ಭಾರತದ ಪ್ರಮುಖ ಎಸ್‌ಯುವಿ ತಯಾರಕರಾದ ಮಹೀಂದ್ರಾ (Mahindra), ಇಂದು ರೂ. 8.94 ಲಕ್ಷ ಆಕರ್ಷಕ ಬೆಲೆಯಿಂದ ಪ್ರಾರಂಭವಾಗುವ ಹೊಸ 'ಎಕ್ಸ್‌ಯುವಿ 3ಎಕ್ಸ್‌ಒ ಆರ್‌ಇವಿಎಕ್ಸ್' (XUV 3XO REVX) ಸಿರೀಸ್ ಅನ್ನು ಬಿಡುಗಡೆಗೊಳಿಸಿದೆ. REVX ಸಿರೀಸ್ ಮೂಲಕ ಹೊಸ XUV 3XO ಎಸ್‌ಯುವಿಯು ಪ್ರೀಮಿಯಂ ಫೀಚರ್ಸ್, ವಿಶಿಷ್ಟ ಡಿಸೈನ್ ಮತ್ತು ತನ್ನ ವಿಭಾಗದಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಆಕರ್ಷಕ ಮೌಲ್ಯದ ಕೊಡುಗೆಯೊಂದಿಗೆ ಮತ್ತಷ್ಟು ಅಪ್‌ಡೇಟ್ ಆಗಿದೆ. ಈ ಕಾರು ಗ್ರಾಹಕರ ಆದ್ಯತೆಗಳನ್ನು ಮೀರಿ ಹೊಸ ಅನುಭವ ನೀಡಲು ಸಜ್ಜಾಗಿದೆ ಎಂದು ಕಂಪನಿ ಹೇಳಿದೆ.
REVX ಸಿರೀಸ್ ಮುಖ್ಯಾಂಶಗಳು
REVX M (ಎಕ್ಸ್-ಶೋರೂಮ್ ಬೆಲೆ ರೂ. 8.94 ಲಕ್ಷ) - ಈ ವೇರಿಯೆಂಟ್ 1.2L mStallion TCMPFi ಎಂಜಿನ್ ಹೊಂದಿದ್ದು, ಇದು 82 kW ಪವರ್ ಮತ್ತು 200 Nm ಟಾರ್ಕ್ ಹೊರಹಾಕುತ್ತದೆ. ಇದರ ದಿಟ್ಟ ಹೊರಭಾಗವು ಬಾಡಿ - ಕಲರ್ ಗ್ರಿಲ್, ಪೂರ್ಣ - ಅಗಲದ LED DRLಗಳು, R16 ಬ್ಲಾಕ್ ವೀಲ್ ಕವರ್‌ಗಳು ಮತ್ತು ಸ್ಪೋರ್ಟಿ ಡ್ಯುಯಲ್ - ಟೋನ್ ರೂಫ್‌ನೊಂದಿಗೆ ಆಕರ್ಷಕ ಮುಂಭಾಗವನ್ನು ಹೊಂದಿದೆ.

ಇಂಟೀರಿಯರ್‌ನಲ್ಲಿ ಇದು ಪ್ಲಶ್ ಬ್ಲಾಕ್ ಲೆದರೆಟ್ ಸೀಟುಗಳು, ಸ್ಟೀರಿಂಗ್ - ಮೌಂಟೆಡ್ ಕಂಟ್ರೋಲ್‌ಗಳೊಂದಿಗೆ 26.03 ಸೆಂ.ಮೀ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 4 - ಸ್ಪೀಕರ್ ಆಡಿಯೊ ಸೆಟಪ್ ಹೊಂದಿದೆ. ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಕಂಟ್ರೋಲ್ (HHC) ಜೊತೆಗೆ ESC ಮತ್ತು 4 ಡಿಸ್ಕ್ ಬ್ರೇಕ್‌ಗಳು ಸೇರಿದಂತೆ 35 ಪ್ರಮಾಣಿತ ಫೀಚರ್‌ಗಳೊಂದಿಗೆ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
REVX M(O) (ಎಕ್ಸ್-ಶೋರೂಮ್ ಬೆಲೆ ರೂ. 9.44 ಲಕ್ಷ) - ಈ ವೇರಿಯೆಂಟ್ ಸಿಂಗಲ್ - ಪೇನ್ ಸನ್‌ರೂಫ್ ಸೇರ್ಪಡೆಯೊಂದಿಗೆ ಅತ್ಯಾಧುನಿಕ ಫೀಚರ್ಸ್ ಹೊಂದಿದೆ. REVXM ವೇರಿಯೆಂಟ್‌ಗಿಂತ ಕ್ಯಾಬಿನ್ ಅನುಭವ ಮತ್ತು ಒಟ್ಟಾರೆ ವಿನ್ಯಾಸದಲ್ಲಿ ಹೆಚ್ಚಿನ ಆಕರ್ಷಣೆಯನ್ನು REVX M(O) ವೇರಿಯೆಂಟ್ ಪಡೆದುಕೊಂಡಿದೆ.

REVX A (ಎಕ್ಸ್-ಶೋರೂಮ್ ಬೆಲೆ ರೂ. 11.79 ಲಕ್ಷದಿಂದ ಪ್ರಾರಂಭವಾಗುತ್ತದೆ) - ಈ ವೇರಿಯೆಂಟ್ ಸುಧಾರಿತ 1.2L mStallion TGDi ಎಂಜಿನ್ ಹೊಂದಿದೆ. ಇದು 96 kW ಅತ್ಯುತ್ತಮ ಪವರ್ ಮತ್ತು 230 Nm ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಹೊಂದಿದೆ.
REVX A ವೇರಿಯೆಂಟ್ ಪನೋರಮಿಕ್ ಸನ್‌ರೂಫ್, ಲೆದರ್ ಸೀಟುಗಳು, ಡ್ಯುಯಲ್-ಟೋನ್ ಇಂಟೀರಿಯರ್, ಆಟೋ-ಡಿಮ್ಮಿಂಗ್ IRVM ಇತ್ಯಾದಿಗಳನ್ನು ಒಳಗೊಂಡಂತೆ ಇನ್-ಕ್ಯಾಬಿನ್ ಅನುಭವವನ್ನು ಹೆಚ್ಚಿಸುವ ಪ್ರೀಮಿಯಂ ಫೀಚರ್‌ಗಳನ್ನು ಹೊಂದಿದೆ. ಹೊರಭಾಗದಲ್ಲಿ, ಇದು ಸಿಗ್ನೇಚರ್ REVX ವಿನ್ಯಾಸ ಅಂಶಗಳನ್ನು ಹೊಂದಿದೆ. ಹಾಗೆಯೇ ಬಾಡಿ ಕಲರ್ ಮುಂಭಾಗದ ಗ್ರಿಲ್, ವಿಶಿಷ್ಟ ಬ್ಯಾಡ್ಜಿಂಗ್, R16 ಪೇಂಟೆಡ್ ಬ್ಲಾಕ್ ಅಲಾಯ್ ವೀಲ್‌ಗಳು ಮತ್ತು ಡ್ಯುಯಲ್-ಟೋನ್ ರೂಫ್ ಹೊಂದಿದೆ.
REVX A ವೇರಿಯೆಂಟ್ ಎರಡು HD ಸ್ಕ್ರೀನ್‌ಗಳನ್ನು ಹೊಂದಿದ್ದು, ಒಂದು 26.03 cm ಇನ್ಫೋಟೈನ್‌ಮೆಂಟ್ ಮತ್ತು ಇನ್ನೊಂದು 26.03 cm ಪೂರ್ಣ ಡಿಜಿಟಲ್ ಕ್ಲಸ್ಟರ್ ಹೊಂದಿದೆ. ಇದು ಇಂಟಿಗ್ರೇಟೆಡ್ ಅಲೆಕ್ಸಾ, ಆನ್‌ಲೈನ್ ನ್ಯಾವಿಗೇಷನ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಅನ್ನು ಒಳಗೊಂಡಿರುವ ಅಡ್ರಿನಾಕ್ಸ್ ಕನೆಕ್ಟ್ ಅನ್ನು ಸಂಯೋಜಿಸುತ್ತದೆ.
REVX ಸಿರೀಸ್‌ನ ಎಲ್ಲಾ ಮೂರು ವೇರಿಯೆಂಟ್‌ಗಳು ಗ್ಯಾಲಕ್ಸಿ ಗ್ರೇ, ಟ್ಯಾಂಗೋ ರೆಡ್, ನೆಬ್ಯುಲಾ ಬ್ಲೂ, ಎವರೆಸ್ಟ್ ವೈಟ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಎಂಬ ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ಹಿಂದಿನ XUV 3XO ಇತ್ತೀಚೆಗೆ ಒಂದು ವರ್ಷದೊಳಗೆ 1 ಲಕ್ಷಕ್ಕೂ ಹೆಚ್ಚು ಮಾರಾಟದ ಮೈಲಿಗಲ್ಲನ್ನು ಸಾಧಿಸಿದೆ, ಈ ಮೈಲಿಗಲ್ಲನ್ನು ತಲುಪಿದ ಮಹೀಂದ್ರಾದ ಅತ್ಯಂತ ವೇಗದ SUV ಆಗಿದೆ.


Click it and Unblock the Notifications








