Mahindra: ಮಹೀಂದ್ರಾ ಹೊಸ ಕಾರು ಬಿಡುಗಡೆ: ಎಬೊನಿ ಎಡಿಷನ್ ಹೆಸರಿನಲ್ಲಿ ಧೂಳೆಬ್ಬಿಸಲು ಸಜ್ಜು!
ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಳೆದ ಕೆಲವು ವಾರಗಳಲ್ಲಿ ಬ್ಲಾಕ್ ಎಡಿಷನ್ ಆವೃತ್ತಿಯಲ್ಲಿ ಬಿಡುಗಡೆಯಾದ ಎಸ್‌ಯುವಿಗಳ ಸಾಲಿಗೆ ಈಗ ಮಹೀಂದ್ರಾ ಎಕ್ಸ್‌ಯುವಿ 700 (Mahindra XUV 700) ಸೇರಿಕೊಂಡಿದೆ. ಹೌದು ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ (ಬ್ಲಾಕ್ ಎಡಿಷನ್) ಬಿಡುಗಡೆಯಾಗಿದೆ. ಹೊಸ ಎಬೊನಿ ಆವೃತ್ತಿಯು ಹೊರಭಾಗ ಮತ್ತು ಕ್ಯಾಬಿನ್ ಒಳಗೆ ಕಾಸ್ಮೆಟಿಕ್ ಅಪ್‌ಡೇಟ್‌ಗಳೊಂದಿಗೆ ಬರುತ್ತದೆ. ಈ ಹೊಸ ಎಸ್‌ಯುವಿ ಆರಂಭಿಕ ಬೆಲೆಯು ರೂ. 19.64 ಲಕ್ಷಗಳಾದರೆ, ಟಾಪ್ ವೇರಿಯೆಂಟ್ ಬೆಲೆಯು ರೂ. 24.14 ಲಕ್ಷಗಳಾಗಿದೆ (ಎಕ್ಸ್ ಶೋರೂಂ ಬೆಲೆಗಳು).
ಕಳೆದ ಎರಡು ವಾರಗಳಲ್ಲಿ ಡಾರ್ಕ್ ಎಡಿಷನ್ ಅಥವಾ ಬ್ಲ್ಯಾಕ್ ಎಡಿಷನ್ ಪಡೆದು ಬಿಡುಗಡೆಯಾದ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಇತರ ಎಸ್‌ಯುವಿಗಳ ನಂತರ, ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಅನ್ನು ಮಾರ್ಚ್ 17ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಎಸ್‌ಯುವಿಯನ್ನು ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲಿಸಿದರೆ ಹೊರಭಾಗ ಮತ್ತು ಕ್ಯಾಬಿನ್ ಒಳಗೆ ಕಾಸ್ಮೆಟಿಕ್ ಬದಲಾವಣೆಗಳನ್ನು ಬಿಟ್ಟು ಉಳಿದೆಲ್ಲವು ಸಾಮಾನ್ಯ ಆವೃತ್ತಿಯಂತೆಯೇ ಇರುತ್ತದೆ.

ಎಬೊನಿ ಎಡಿಷನ್ ಅಪ್‌ಡೇಟ್‌ಗಳು: ಹೊರಭಾಗದಲ್ಲಿ, ಎಸ್‌ಯುವಿ ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಥೀಮ್ ಹೊಂದಿದೆ. ಕೆಲವು ಪ್ರಮುಖ ವಿನ್ಯಾಸ ಅಂಶಗಳಲ್ಲಿ ಬ್ರಷ್ ಮಾಡಿದ ಸಿಲ್ವರ್ ಸ್ಕಿಡ್ ಪ್ಲೇಟ್‌ಗಳು, ಬ್ಲ್ಯಾಕ್ ಆನ್ ಬ್ಲ್ಯಾಕ್ ಗ್ರಿಲ್ ಇನ್ಸರ್ಟ್‌ಗಳು, ಬ್ಲ್ಯಾಕ್ ಔಟ್ ಒಆರ್‌ವಿಎಂಗಳು ಸೇರಿವೆ. ಇದು 18 ಇಂಚಿನ ಬ್ಲಾಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ.
ಹಾಗೆಯೇ ಹೊರಭಾಗದಲ್ಲಿರುವ ಬ್ಲಾಕ್ ಮತ್ತು ಸಿಲ್ವರ್ ಬಣ್ಣವು ಎಸ್‌ಯುವಿಗೆ ವಿಶಿಷ್ಟ ನೋಟವನ್ನು ನೀಡುತ್ತದೆ. ಉಳಿದಂತೆ ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಒಳಭಾಗದಲ್ಲಿ ಹಲವಾರು ಕಾಸ್ಮೆಟಿಕ್ ನವೀಕರಣಗಳನ್ನು ಮಾಡಲಾಗಿದೆ. ಕ್ಯಾಬಿನ್ ಬ್ಲಾಕ್ ಲೆದರೆಟ್ ಅಪ್ಹೋಲ್ಸ್ಟರಿಯನ್ನು, ಮಧ್ಯದ ಕನ್ಸೋಲ್ ಮತ್ತು ಡೋರ್ ಪ್ಯಾನೆಲ್‌ಗಳ ಉದ್ದಕ್ಕೂ ಬ್ಲಾಕ್ ಬಣ್ಣದ ಟ್ರಿಮ್‌ಗಳು ಮತ್ತು ಸಿಲ್ವರ್ ಆಕ್ಸೆಂಟ್‌ಗಳನ್ನು ಹೊಂದಿದೆ.

ಡ್ಯುಯಲ್ ಟೋನ್ ಥೀಮ್ ಅನ್ನು ನೀಡಲು ಲೈಟ್ ಗ್ರೇ ಬಣ್ಣದ ರೂಫ್ ಲೈನರ್ ನೀಡಲಾಗಿದೆ. ಎಕ್ಸ್‌ಯುವಿ 700 ಎಬೊನಿ ಎಡಿಷನ್ ಕ್ಯಾಬಿನ್ ಒಳಗಿನ ಇತರ ಕೆಲವು ವಿನ್ಯಾಸ ಅಂಶಗಳೆಂದರೆ ಡಾರ್ಕ್ ಕ್ರೋಮ್ ಎಸಿ ವೆಂಟ್‌ಗಳನ್ನು ಒಳಗೊಂಡಿರುವುದಾಗಿದೆ. ಉಳಿದಂತೆ ಕಾರು ಸ್ಟ್ಯಾಂಡರ್ಡ್ ಆವೃತ್ತಿಯಲ್ಲಿ ಕಾಣುವಂತೆಯೇ ಎಲ್ಲಾ ಫೀಚರ್ಸ್ ಇರಲಿವೆ.
ವೇರಿಯೆಂಟ್ ಹಾಗೂ ಬೆಲೆ: ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ AX7 ಮತ್ತು AX7L ಟ್ರಿಮ್‌ಗಳ 7 - ಸೀಟರ್ ಎಫ್‌ಡಬ್ಲ್ಯುಡಿ ಆವೃತ್ತಿಗಳನ್ನು ಆಧರಿಸಿದೆ. AX7 ಆಧಾರಿತ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 19.64 ಲಕ್ಷದಿಂದ ರೂ. 21.79 ಲಕ್ಷಗಳಾಗಿದೆ.

ಮಹೀಂದ್ರಾ XUV 700 ಎಬೊನಿ ಎಡಿಷನ್‌ನ AX7L ವೇರಿಯೆಂಟ್ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.23.34 ಲಕ್ಷದಿಂದ ರೂ.24.14 ಲಕ್ಷಗಳಾಗಿದೆ. ಸದ್ಯ ಭಾರತದಲ್ಲಿ ಬಹುತೇಕ ಬ್ರಾಂಡ್‌ಗಳು ಡಾರ್ಕ್ ಎಡಿಷನ್‌ಗಳನ್ನು ಹೆಚ್ಚಾಗಿ ಗ್ರಾಹಕರಿಗೆ ನೀಡುತ್ತಿದ್ದು, ಮಹೀಂದ್ರಾದ ಈ ಹೊಸ XUV 700 ಎಬೊನಿ ಎಡಿಷನ್ ಯಾವ ಮಟ್ಟಿಗೆ ಜನರನ್ನು ಆಕರ್ಷಿಸಲಿದೆ ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








