Mahindra: ಮಹೀಂದ್ರಾ XUV700 ಮೇಲೆ ಬಹುದೊಡ್ಡ ಕಡಿತ: ರೂ.1.43 ಲಕ್ಷದವರೆಗೆ ಬೆಲೆ ಇಳಿಕೆ

ದೊಡ್ಡ SUV ಗಳಿಗೆ GST ಮತ್ತು ಪರಿಹಾರ ಸೆಸ್ ಕಡಿತಗೊಳಿಸಿದ ನಂತರ ಮಹೀಂದ್ರಾ XUV700 ಬೆಲೆಗಳು ಈಗ ರೂ.1.43 ಲಕ್ಷದವರೆಗೆ ಇಳಿದಿದೆ. XUV700 ನಂತಹ SUV ಗಳ GST ದರವನ್ನು ಶೇ48 ರಿಂದ 40 ಕ್ಕೆ ಇಳಿಸಲಾಗಿದೆ, ಇದರ ಪರಿಣಾಮವಾಗಿ ಎಲ್ಲಾ ವೇರಿಯೆಂಟ್‌ಗಳ ಮೇಲೆ ಗಮನಾರ್ಹ ಉಳಿತಾಯವಾಗಲಿದೆ. ಬೇಸ್‌ MX ಟ್ರಿಮ್ ಮೇಲೆ ಸುಮಾರು ರೂ. 88,900 ದಿಂದ ಟಾಪ್ - ಎಂಡ್ AX7 ಲಕ್ಸರಿ ಮೇಲೆ ರೂ. 1.43 ಲಕ್ಷದವರೆಗೆ ಬೆಲೆ ಇಳಿಕೆಯಾಗಿದೆ. ಸಂಪೂರ್ಣ ವೇರಿಯೆಂಟ್‌ವಾರು ವಿವರ ಇಲ್ಲಿದೆ.

ಸೆಪ್ಟೆಂಬರ್ 3, 2025 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ 56ನೇ GST ಕೌನ್ಸಿಲ್ ಸಭೆಯಲ್ಲಿ GST 2.0 ಘೋಷಣೆಯಾಗಿತ್ತು. ಸಣ್ಣ ಕಾರುಗಳ (ಹ್ಯಾಚ್‌ಬ್ಯಾಕ್‌) ಮೇಲೆ ಇದ್ದ ಶೇ 28 ಜಿಎಸ್‌ಟಿಯನ್ನು ಶೇ 18ಕ್ಕೆ ಇಳಿಸಿದ್ದು, ಹೆಚ್ಚುವರಿ ಸೆಸ್ ಅನ್ನು ತೆಗೆದುಹಾಕಲಾಗಿದೆ. ಇನ್ನು ದೊಡ್ಡ ಕಾರುಗಳು ಮತ್ತು ಎಸ್‌ಯುವಿಗಳ ಮೇಲೆ ಇದ್ದ ಶೇ 48 ಜಿಎಸ್‌ಟಿಯನ್ನು ಶೇ 40 ಕ್ಕೆ ಇಳಿಸಲಾಗಿದೆ.

mahindra-xuv700-gets-huge-discount-price-reduced-by-up-to-1-43-lakh

ಇದಕ್ಕೆ ಅನುಗುಣವಾಗಿ ಮಹೀಂದ್ರಾ ಕಂಪನಿಯು ಇತ್ತೀಚೆಗಷ್ಟೆ ತನ್ನ ಸಂಪೂರ್ಣ ಇಂಧನ ಚಾಲಿತ SUV ಗಳನ್ನು ಹೊಸ GST ಪರಿಷ್ಕರಣೆಗಳಿಗೆ ಅನುಗುಣವಾಗಿ ಬೆಲೆ ಇಳಿಕೆ ಮಾಡುವುದಾಗಿ ಘೋಷಿಸಿದೆ. ಸೆಪ್ಟೆಂಬರ್ 6, 2025 ರಿಂದ ಮಹೀಂದ್ರಾ ತನ್ನ ಕಾರುಗಳ ಮೇಲೆ ಈ ಪ್ರಯೋಜನಗಳನ್ನು ನೀಡುವುದಾಗಿ ಹೇಳಿದೆ. ಮಹೀಂದ್ರಾದ ಯಾವ ಕಾರಿನ ಮೇಲೆ ಎಷ್ಟು ಬೆಲೆ ಇಳಿಕೆಯಾಗಿದೆ ಎಂದು ಡ್ರೈವ್‌ಸ್ಪಾರ್ಕ್‌ನಲ್ಲಿ ವರದಿ ಮಾಡಲಾಗಿತ್ತು.

ಕಂಪನಿಯು ಈಗ XUV700 ಸೇರಿದಂತೆ ತನ್ನ ಸರಣಿಯಲ್ಲಿ ಆಯ್ದ ಮಾಡಲ್‌ಗಳಿಗೆ ವೇರಿಯೆಂಟ್-ವಾರು ಬೆಲೆ ಉಳಿತಾಯವನ್ನು ಬಹಿರಂಗಪಡಿಸಿದೆ ಎಂದು ಪ್ರಮುಖ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಇದು ನಿಖರವಾದ ಬೆಲೆಗಳನ್ನು ಬಹಿರಂಗಪಡಿಸಿಲ್ಲವಾದರೂ ಗ್ರಾಹಕರು ಆಯ್ಕೆ ಮಾಡಬಹುದಾದ ಟ್ರಿಮ್ ಅನ್ನು ಅವಲಂಬಿಸಿ ಎಷ್ಟು ಹಣ ಉಳಿಸಬಹುದು ಎಂಬುದನ್ನು ಕಂಪನಿ ಪಟ್ಟಿ ಮಾಡಿದೆ.

mahindra-xuv700-gets-huge-discount-price-reduced-by-up-to-1-43-lakh

ಮಹೀಂದ್ರಾ XUV700 ವೇರಿಯಂಟ್-ವಾರು ಬೆಲೆ ಕಡಿತ

ಬೇಸ್‌ ವೇರಿಯೆಂಟ್ MX: ರೂ. 88,900 ವರೆಗೆ ಇಳಿಕೆ
AX3 ವೇರಿಯೆಂಟ್ ರೂ. 1,06,500 ವರೆಗೆ ಇಳಿಕೆ
AX5 S ವೇರಿಯೆಂಟ್ ರೂ. 1,10,200 ವರೆಗೆ ಇಳಿಕೆ
AX5 ವೇರಿಯೆಂಟ್ ರೂ. 1,18,300 ವರೆಗೆ ಇಳಿಕೆ
AX7 ವೇರಿಯೆಂಟ್ ರೂ. 1,31,900 ವರೆಗೆ ಇಳಿಕೆ
ಟಾಪ್ ವೇರಿಯೆಂಟ್ AX7 L: ರೂ. 1,43,000 ವರೆಗೆ ಇಳಿಕೆ

ಗಮನಿಸಿ, ಇವು XUV700 ನ ತಾತ್ಕಾಲಿಕ ಕಡಿತ ಬೆಲೆಗಳು ಮಾತ್ರ. ನಿಖರವಾದ ಬೆಲೆ ಕಡಿತದ ಮಾಹಿತಿಗಾಗಿ ಸಂಭಾವ್ಯ ಖರೀದಿದಾರರು ಹತ್ತಿರದ ಮಹೀಂದ್ರಾ ಶೋರೂಂ ಅನ್ನು ಸಂಪರ್ಕಿಸಬೇಕು. XUV700 ಅನ್ನು ಎಸ್ ಯುವಿ ಎಂದು ವರ್ಗೀಕರಿಸಲಾಗಿದೆ, ಇದು 4,000 ಎಂಎಂ ಗಿಂತ ಹೆಚ್ಚಿನ ಉದ್ದ ಮತ್ತು 1,500 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿದೆ ಈ ಹಿಂದೆ ಶೇಕಡಾ 48 ರಷ್ಟು ಜಿಎಸ್‌ಟಿ ಹೊಂದಿತ್ತು.

mahindra-xuv700-gets-huge-discount-price-reduced-by-up-to-1-43-lakh

ದೊಡ್ಡ SUV ಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಭಾರತ ಸರ್ಕಾರ ಇತ್ತೀಚೆಗೆ ಘೋಷಿಸಿದ GST ಮತ್ತು ಸೆಸ್ ಸುಧಾರಣೆಯ ನೇರ ಪರಿಣಾಮವೇ ಬೆಲೆ ಕಡಿತವಾಗಿದೆ. ಖರೀದಿದಾರರು ತಮ್ಮ ನಗರವನ್ನು ಆಧರಿಸಿ ನವೀಕರಿಸಿದ ವೇರಿಯೆಂಟ್ ಬೆಲೆಗಳು ಮತ್ತು ಆನ್ - ರೋಡ್ ಬೆಲೆ ವಿವರಗಳಿಗಾಗಿ ಸ್ಥಳೀಯ ಮಹೀಂದ್ರಾ ಡೀಲರ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಇನ್ನು ಮಹೀಂದ್ರಾದ ಪ್ರಮುಖ ಮಾಡಲ್‌ ಆಗಿರುವ XUV3XO ಡೀಸೆಲ್ (ರೂ. 1.56 ಲಕ್ಷದವರೆಗೆ) ಮೇಲೆ ಅತಿದೊಡ್ಡ ಬೆಲೆ ಕಡಿತವಾಗಿದ್ದು, ಥಾರ್, ಸ್ಕಾರ್ಪಿಯೋ ಮತ್ತು ಬೊಲೆರೊ/ನಿಯೋದಂತಹ ಜನಪ್ರಿಯ ಮಾಡಲ್‌ಗಳ ಮೇಲೆ ರೂ. 1 ಲಕ್ಷ ಕಡಿತವಿದೆ. ಬೆಲೆ ಕಡಿತವನ್ನು ದೇಶಾದ್ಯಂತ ಎಲ್ಲಾ ಮಹೀಂದ್ರಾ ಡೀಲರ್‌ಶಿಪ್‌ಗಳು ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾರದರ್ಶಕವಾಗಿ ನವೀಕರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Friday, September 12, 2025, 16:38 [IST]
English summary
Mahindra xuv700 gets huge discount price reduced by up to 1 43 lakh
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+