ಭಯವಿಲ್ಲದೆ ಮಾರುತಿ ಎಲೆಕ್ಟ್ರಿಕ್ ಕಾರು ಖರೀದಿಸಬಹುದು... ಬಿಡುಗಡೆ ಮುನ್ನ ಬ್ರಾಂಡ್ ಹೇಳಿದ್ದೇನು?
ಮಾರುತಿ ಸುಜುಕಿ ತನ್ನ ಇ-ವಿಟಾರಾ ಬಿಡುಗಡೆಗೂ ಮುನ್ನ ಖರೀದಿದಾರರ ವಿಶ್ವಾಸವನ್ನು ಹೆಚ್ಚಿಸಲು ಮುಂದಿನ ಕೆಲವು ವರ್ಷಗಳಲ್ಲಿ ಹಂತ ಹಂತವಾಗಿ ಬ್ಯಾಟರಿ ಉತ್ಪಾದನೆ ಮತ್ತು ಪ್ರಮುಖ ಇವಿ ಘಟಕಗಳನ್ನು ಸ್ಥಳೀಯವಾಗಿ ನಿರ್ಮಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳುತ್ತಿರುವ ಮಾರುತಿ ಸುಜುಕಿ ಕಂಪನಿಯು, 2030 ರ ವೇಳೆಗೆ ಐದು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುವ ಮೂಲಕ ಶೇ13 ರಿಂದ 15 ರಷ್ಟು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮಾರಾಟದ ಪಾಲನ್ನು ಹೊಂದುವ ಗುರಿಯಿಟ್ಟುಕೊಂಡಿದೆ.
ಸ್ಥಳೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಆಮದು ಅವಲಂಬನೆಯನ್ನು ಕಡಿಮೆ ಮಾಡಿ ಭಾರತದ ಇವಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಇದು ಇ-ವಿಟಾರಾ ಮತ್ತು ಮುಂಬರುವ ಎಲೆಕ್ಟ್ರಿಕ್ ಎಂಪಿವಿಯಂತಹ ಮಾಡಲ್‌ಗಳ ಬೆಂಬಲಿಸುತ್ತದೆ. ಮಾರುತಿಯ ಖಾರ್ಖೋಡಾ ಮತ್ತು ಗುಜರಾತ್ ಸ್ಥಾವರಗಳಲ್ಲಿ ವಿಸ್ತರಣೆಗಳು ವಾರ್ಷಿಕವಾಗಿ 4 ಮಿಲಿಯನ್ ಯುನಿಟ್‌ಗಳಿಗೆ ಸಾಮರ್ಥ್ಯವನ್ನು ಹೆಚ್ಚಿಸಲಿವೆ ಎಂದು ವರದಿಯಾಗಿದೆ.

ಮೂಲಸೌಕರ್ಯ ವಿಸ್ತರಣೆ: ಮಾರುತಿ 1,100 ನಗರಗಳಲ್ಲಿ 1,500 ಇವಿ - ಸಿದ್ಧ ಕಾರ್ಯಾಗಾರಗಳನ್ನು ಯೋಜಿಸಿದೆ, ಈಗಾಗಲೇ 2,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. 2030 ರ ವೇಳೆಗೆ ಡೀಲರ್ ಪಾಲುದಾರಿಕೆಗಳ ಮೂಲಕ 1 ಲಕ್ಷ ಚಾರ್ಜಿಂಗ್ ನಿಲ್ದಾಣಗಳ ಗುರಿಯನ್ನು ಹೊಂದಿದೆ. ಖಚಿತವಾದ ಮರುಖರೀದಿ ಮತ್ತು ಚಂದಾದಾರಿಕೆ ಯೋಜನೆಗಳು ಮರುಮಾರಾಟದ ಕಾಳಜಿಗಳನ್ನು ಪರಿಹರಿಸಲಿವೆ ಎಂದು ಮಾರುತಿ ಹೇಳಿಕೊಂಡಿದೆ.
ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ (ಮಾರ್ಕೆಟಿಂಗ್ ಮತ್ತು ಮಾರಾಟ) ಪಾರ್ಥೋ ಬ್ಯಾನರ್ಜಿ ಮಾದ್ಯಮಗಳೊಂದಿಗೆ ಮಾತನಾಡಿ, "ಸದ್ಯಕ್ಕೆ ನಾವು ಬ್ಯಾಟರಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಆದರೆ, ಸ್ಥಳೀಕರಣಕ್ಕೆ ನಮ್ಮಲ್ಲಿ ಯೋಜನೆ ಇದೆ. ಮುಂದಿನ ಕೆಲವು ವರ್ಷಗಳಲ್ಲಿ ಹಂತ ಹಂತವಾಗಿ ಇದನ್ನು ಜಾರಿಗೆ ತರಲಿದ್ದೇವೆ" ಎಂದು ತಿಳಿಸಿದ್ದಾರೆ.

"ಗ್ರಾಹಕರು ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ನಾವು ನಂಬುತ್ತೇವೆ. ಬಿಡುಗಡೆಯಾದ ಆರಂಭಿಕ ಕಾರುಗಳು ಮತ್ತು ಅವುಗಳಿಂದ ಬಂದ ಅನುಭವಗಳು ಚಾಲನಾ ಶ್ರೇಣಿಯ ಬಗ್ಗೆ ಜನರ ಮನಸ್ಸಿನಲ್ಲಿ ಭಾರಿ ಪ್ರಮಾಣದ ನಕಾರಾತ್ಮಕತೆಯನ್ನು ಸೃಷ್ಟಿಸಿವೆ. ಇಲ್ಲಿಯವರೆಗೆ, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುತ್ತಿರುವ ಗ್ರಾಹಕರು, ಅದರಲ್ಲೂ ಹೆಚ್ಚಿನವರು ಇವಿಗಳನ್ನು ತಮ್ಮ ದ್ವಿತೀಯ ವಾಹನವಾಗಿ ಬಳಸುತ್ತಿದ್ದಾರೆ'' ಎಂದು ಹೇಳಿದರು.
ಡ್ರೈವಿಂಗ್ ರೇಂಜ್, ಸಾರ್ವಜನಿಕ ಚಾರ್ಜಿಂಗ್ ಮೂಲಸೌಕರ್ಯದ ಅಸಮರ್ಪಕತೆ ಮತ್ತು ಮಾರಾಟದ ನಂತರದ ಸೇವೆ ಹಾಗೂ ಮರುಮಾರಾಟ ಮೌಲ್ಯದಲ್ಲಿನ ಸವಾಲುಗಳು ದೇಶದಲ್ಲಿ EV ಅಳವಡಿಕೆಯಲ್ಲಿನ ದೊಡ್ಡ ಸವಾಲುಗಳಾಗಿವೆ. ಇವನ್ನು ಮೊದಲು ನಿರ್ಮೂಲಿಸಿ ನಮ್ಮ ಎಲೆಕ್ಟ್ರಿಕ್ ಕಾರುಗಳ ಮೇಲೆ ಖರೀದಿದಾರರಿಗೆ ವಿಶ್ವಾಸ ಹೆಚ್ಚಿಸುವ ಜೊತೆಗೆ, 2030 ರ ಹೊತ್ತಿಗೆ ಮಾರುತಿ ಸುಜುಕಿ ತನ್ನ ಒಟ್ಟಾರೆ ಉತ್ಪನ್ನ ಪೋರ್ಟ್ಫೋಲಿಯೊದಲ್ಲಿ ಐದು EV ಮಾಡಲ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ.

ಇವು ಗ್ರಾಹಕರ ಖರೀದಿಯ ನಂತರ ಯಾವುದೇ ಅಡೆತಡೆಯಿಲ್ಲದೆ ಬಳಸುವಂತಹ ವಾತಾವರಣವನ್ನು ಸೃಷ್ಟಿಸಲು ಕಂಪನಿ ಕೆಲಸ ಮಾಡುತ್ತಿದೆ. ಹಾಗಾಗಿಯೇ ಮಾರುತಿ 1,100 ನಗರಗಳಲ್ಲಿ 1,500 ಇವಿ-ಸಿದ್ಧ ಕಾರ್ಯಾಗಾರಗಳನ್ನು ಯೋಜಿಸಿದೆ, ಈಗಾಗಲೇ 2,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಮಾರುತಿ ಎಲೆಕ್ಟ್ರಿಕ್ ಕಾರು ಖರೀದಿಸುವಲ್ಲಿ ಯಾವುದೇ ಅನಾನುಕೂಲತೆ ಇರದಂತೆ ನೋಡಿಕೊಳ್ಳುವುದು ಕಂಪನಿಯ ಗುರಿಯಾಗಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ದೇಶದಲ್ಲಿ ಒಟ್ಟಾರೆ ಇವಿ ವಾಹನಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಭಾಗವಾಗಿ, ಮುಂದಿನ ಕೆಲವು ವರ್ಷಗಳಲ್ಲಿ ಬ್ಯಾಟರಿ ಉತ್ಪಾದನೆ ಮತ್ತು ಇತರ ನಿರ್ಣಾಯಕ ಘಟಕಗಳನ್ನು ಸ್ಥಳೀಕರಿಸಲು ಮಾರುತಿ ಸುಜುಕಿ ಜೋರಾಗಿ ತಯಾರಿ ನಡೆಸುತ್ತಿದೆ. ಮುಂದಿನ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವಾದ - ಇ ವಿಟಾರಾವನ್ನು ಬಿಡುಗಡೆ ಮಾಡಲು ಯೋಜಿಸಿರುವ ಕಂಪನಿಯು, ಖರೀದಿದಾರರಲ್ಲಿ ವಿಶ್ವಾಸವನ್ನು ತುಂಬಲು ನೋಡುತ್ತಿದೆ.


Click it and Unblock the Notifications








