ಮಾರುತಿ ಬಲೆನೊಗೆ ನಿದ್ದೆಗೆಡಿಸಿದೆ ಹೊಸ ಟಾಟಾ ಕಾರು! ಪವರ್‌ಫುಲ್ ಹೊಡೆತಕ್ಕೆ ಕಂಗಾಲು

ಭಾರತದ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಸೆಗ್ಮೆಂಟಿನಲ್ಲಿ ಮೊದಲಿನಿಂದಲೂ ತುಂಬಾ ಹೆಸರು ಮಾಡಿರುವ ಮಾರುತಿ ಸುಜುಕಿ ಬಲೆನೊ ಈಗ ಟಾಟಾದ ಪ್ರಮುಖ ಕಾರಿಗೆ ಪೈಪೋಟಿ ನೀಡಲು ಹೆಣಗಾಡುತ್ತಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿರುವ 2025ರ ಆಲ್ಟ್ರೋಜ್ (Altroz) ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಲೆನೊಗೆ ಸರಿಯಾದ ಪ್ರತಿಸ್ಪರ್ಧಿಯಾಗಿಬಿಟ್ಟಿದೆ. ಕೇವಲ ಬಲೆನೊ (Baleno)ಗೆ ಮಾತ್ರವಲ್ಲದೆ ಈಗಿರುವ ಒಂದಷ್ಟು ಹ್ಯಾಚ್‌ಬ್ಯಾಕ್‌ಗಳಿಗೆ ನಡುಕ ಹುಟ್ಟಿಸಿದೆ. ಸದ್ಯ ಬಲೆನೊ ಹಾಗೂ ಆಲ್ಟ್ರೋಜ್ ನಡುವಿನ ವ್ಯತ್ಯಸವನ್ನು ನೋಡೋಣ ಬನ್ನಿ.

ಸುರಕ್ಷತೆ: ಹೊಸ 2025ರ ಟಾಟಾ ಆಲ್ಟ್ರೋಜ್ ಸುರಕ್ಷತೆಗೆ ಸಂಬಂಧಿಸಿದಂತೆ, ಆಟೋಮ್ಯಾಟಿಕ್ ವೈಪರ್‌ಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್-ಸ್ಪಾಟ್ ಮಾನಿಟರ್ ಮತ್ತು ರಿಯರ್ ವ್ಯೂ ಕ್ಯಾಮೆರಾಗಳು ಟಾಪ್‌ ವೇರಿಂಟ್‌ಗಳಲ್ಲಿ ಲಭ್ಯವಿದೆ. ವಿಶೇಷವಾಗಿ ಎಲ್ಲಾ ವೇರಿಯೆಂಟ್‌ಗಳಲ್ಲಿ ಈಗ ಆರು ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ.

maruti-baleno-vs-new-2025-tata-altroz-comparision

ಸುರಕ್ಷತೆಗೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಬಲೆನೊದಲ್ಲಿ ಎರಡು ಏರ್ ಬ್ಯಾಗ್‌ಗಳು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ಇದರ ಟಾಪ್ ವೇರಿಯೆಂಟ್‌ಗಳು ಆರು ಏರ್‌ಬ್ಯಾಗ್‌ಗಳನ್ನು ಹೊಂದಿವೆ. ಎಬಿಎಸ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಹಿಲ್-ಹೋಲ್ಡ್ ಅಸಿಸ್ಟೆನ್ಸ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳನ್ನು ಹೊಂದಿದೆ.

ಫೀಚರ್ಸ್: ಹೊಸ ಆಲ್ಟ್ರೋಜ್ ಸನ್‌ರೂಫ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಂ ಮತ್ತು 10.25-ಇಂಚಿನ ಟಿಎಫ್‌ಟಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಫ್ಲಶ್ ಡೋರ್ ಹ್ಯಾಂಡಲ್‌, ವೈರ್ ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, 16 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಫೀಚರ್ಸ್ ವಿಷಯದಲ್ಲಿ ಆಲ್ಟ್ರೋಜ್ ಒಂದು ಕೈ ಮೇಲಿದೆ.

maruti-baleno-vs-new-2025-tata-altroz-comparision

ಮಾರುತಿ ಸುಜುಕಿ ಬಲೆನೊದಲ್ಲಿ ವೈರ್‌ಲೆಸ್ ಸ್ಮಾರ್ಟ್ ಫೋನ್ ಸಂಪರ್ಕ, 9 ಇಂಚಿನ ಟಚ್ ಸ್ಕ್ರೀನ್ ಸ್ಕ್ರೀನ್, ಪ್ರೊಜೆಕ್ಟರ್ ಹೆಡ್ ಲೈಟ್‌ಗಳು, ಹೆಡ್-ಅಪ್ ಡಿಸ್ ಪ್ಲೇ, 16 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದೆ. ಅದೇನೇ ಇದ್ದರೂ, ಇದು ಆಲ್ಟ್ರೊಜ್‌ನಂತೆ ಫುಲ್ಲಿ ಡಿಜಿಟಲ್ ಇನ್ಸ್‌ಟ್ರೂಮೆಂಟ್ ಕನ್ಸೋಲ್ ಮತ್ತು ಸನ್‌ರೂಫ್ ಹೊಂದಿಲ್ಲ.

ಎಂಜಿನ್: ಬಲೆನೊವನ್ನು ಪೆಟ್ರೋಲ್ ಎಂಜಿನ್ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಮಾತ್ರ ನೀಡಲಾಗುತ್ತಿದ್ದು, ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಸಿಗಲಿದೆ. ಆಲ್ಟ್ರೋಜ್ ವಿಷಯಕ್ಕೆ ಬಂದರೆ ಈ ಸೆಗ್ಮೆಂಟಿನಲ್ಲಿ ಡೀಸೆಲ್ ಎಂಜಿನ್ ಹೊಂದಿರುವ ಏಕೈಕ ಕಾರಾಗಿದೆ. ಅಲ್ಲದೇ ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳೊಂದಿಗೂ ಬರುತ್ತದೆ. ಮ್ಯಾನುವಲ್, ಎಎಂಟಿ, ಡಿಸಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಹೊಂದಿದೆ.

maruti-baleno-vs-new-2025-tata-altroz-comparision

ಬೆಲೆ: ಮಾರುತಿ ಸುಜುಕಿ ಬೇಸ್‌ ವೇರಿಯೆಂಟ್ ಬೆಲೆಯು ರೂ. 6.70 ಲಕ್ಷ (ಎಕ್ಸ್‌ ಶೊರೂಂ) ದಿಂದ ಟಾಪ್‌ ವೇರಿಯೆಂಟ್ ಬೆಲೆಯು ರೂ. 9.42 ಲಕ್ಷ (ಎಕ್ಸ್‌ ಶೊರೂಂ)ವರೆಗೆ ಇದೆ. 2025ರ ಟಾಟಾ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಬೇಸ್‌ ವೇರಿಯೆಂಟ್ ಬೆಲೆಯು ರೂ 6.89 (ಎಕ್ಸ್‌ ಶೊರೂಂ) ಲಕ್ಷದಿಂದ ಟಾಪ್‌ ವೇರಿಯೆಂಟ್ ಬೆಲೆಯು ರೂ. 11.49 (ಎಕ್ಸ್‌ ಶೊರೂಂ) ಲಕ್ಷದವರೆಗೆ ಇದೆ.

ಹೊಸ ಟಾಟಾ ಆಲ್ಟ್ರೋಜ್ ಈ ಸೆಗ್ಮೆಂಟಿನಲ್ಲಿ ಇತ್ತೀಚಿನ ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿರುವ ಕಾರಣ ಬಲೆನೊ ಹಿಂದುಳಿದಿದೆ. ಮಾರುತಿ ಸುಜುಕಿ ಕೂಡ ಬಲೆನೊಗೆ ಹೊಸ ಅಪ್‌ಡೇಟ್‌ಗಳನ್ನು ಪರಿಚಯಿಸುವ ಅಗತ್ಯವಿದೆ. ಈ ಎರಡೂ ಕಾರುಗಳು ಪ್ರೀಮಿಯಂ ಸೆಗ್ಮೆಂಟಿನಲ್ಲಿ ಪ್ರತ್ಯೇಕ ಅಭಿಮಾನಿಗಳನ್ನು ಹೊಂದಿವೆ. ಈ ಎರಡೂ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

Article Published On: Friday, June 20, 2025, 17:19 [IST]
English summary
Maruti baleno vs new 2025 tata altroz comparision
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+