Maruti: ಗರಿಷ್ಟ ಸುರಕ್ಷತೆಯೊಂದಿಗೆ ಮಾರುತಿ ಹ್ಯಾಚ್‌ಬ್ಯಾಕ್ ಬೆಲೆ ಏರಿಕೆ... 6 ಏರ್‌ಬ್ಯಾಗ್ ಫಿಕ್ಸ್!

ಮಾರುತಿ ಸುಜುಕಿ (Maruti suzuki) ಕಂಪನಿಯು ತನ್ನ ಸೆಲೆರಿಯೊ ಹ್ಯಾಚ್ ಬ್ಯಾಕ್‌ಗಾಗಿ ಎರಡು ಪ್ರಮುಖ ಅಪ್‌ಡೇಟ್‌ಗಳನ್ನು ಹೊರತಂದಿದೆ. ಈ ಹಿಂದೆ ಎರಡು ಏರ್‌ ಬ್ಯಾಗ್‌ಗಳೊಂದಿಗೆ ನೀಡಲಾಗುತ್ತಿದ್ದ ಮಾರುತಿ ಸೆಲೆರಿಯೊ (Maruti Celerio) ಈಗ ಆರು ಏರ್‌ ಬ್ಯಾಗ್‌ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಕಾರು ತಯಾರಕರು ಕಾರಿನ ಸುರಕ್ಷತೆಯನ್ನು ಹೆಚ್ಚಸಿ ಬೆಲೆಯನ್ನು ಏರಿಸಿದ್ದಾರೆ. ಸುರಕ್ಷತಾ ವೈಶಿಷ್ಟ್ಯಗಳ ದೃಷ್ಟಿಯಿಂದ ಇದು ಕಾರಿಗೆ ದೊಡ್ಡ ನವೀಕರಣವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರುತಿ ಕಾರುಗಳಲ್ಲಿ ಇದೇ ರೀತಿ ಪರಿಚಯಿಸುವ ನಿರೀಕ್ಷೆಯಿದೆ. ಹೆಚ್ಚಿನ ವಿವರಗಳು ಈ ಕೆಳಗಿವೆ.

ಬೆಲೆ ಏರಿಕೆಯ ವಿಷಯಕ್ಕೆ ಬಂದರೆ, ಸೆಲೆರಿಯೊ 32,500 ರೂ.ಗಳವರೆಗೆ ದುಬಾರಿಯಾಗಿದೆ. ಟಾಪ್-ಸ್ಪೆಕ್ ZXI+ ಎಎಂಟಿ ರೂಪಾಂತರಕ್ಕೆ ಇದು ಅನ್ವಯಿಸುತ್ತದೆ. ಎಂಟ್ರಿ ಲೆವೆಲ್ LXI (MT), ZXI (MT) ಮತ್ತು ZXI+ (MT) ವೇರಿಯೆಂಟ್‌ಗಳು ಈಗಿರುವ ಬೆಲೆಗಳಿಗಿಂತ ತಲಾ 27,500 ರೂ.ಗಳ ಏರಿಕೆಯನ್ನು ಪಡೆದಿವೆ.

maruti-celerio-price-hike-and-gets-six-airbags-as-standard

ಅದೇ ಸಮಯದಲ್ಲಿ, ಸೆಲೆರಿಯೊದ VXI (AMT) ರೂಪಾಂತರವು 21,000 ರೂ.ಗಳ ಬೆಲೆ ಏರಿಕೆ, VXI (MT) ಮತ್ತು VXI CNG (MT) ತಲಾ 16,000 ರೂ.ಗಳ ಏಕರೂಪದ ಹೆಚ್ಚಳವನ್ನು ಪಡೆದಿವೆ. ವಿಶೇಷವೆಂದರೆ, ZXI AMT ರೂಪಾಂತರದ ಬೆಲೆಗಳು ಬದಲಾಗದೆ ಉಳಿದಿವೆ. ಸದ್ಯ ಮಾರುತಿ ಸೆಲೆರಿಯೊ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.5.64 ಲಕ್ಷದಿಂದ ರೂ.7.37 ಲಕ್ಷಗಳಾಗಿದೆ.

ವಿಶೇಷತೆಗಳು: ಈ ಪುಟ್ಟ ಕಾರಿನಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 313 ಲೀಟರ್‌ನ ಬೂಟ್ ಸ್ಪೇಸ್‌ನ್ನು ನೀಡಲಾಗಿದೆ. ಇದರ ಜೊತೆಗೆ ಹೊಸ ಸೆಲೆರಿಯೊ ಹ್ಯಾಚ್‌ಬ್ಯಾಕ್‌ನಲ್ಲಿ 5 ಜನರು ಸುಲಭವಾಗಿ ಪ್ರಯಾಣಿಸಬಹುದು. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ (7-ಇಂಚು), ಪುಶ್ ಬಟನ್ ಸ್ಟಾರ್ಟ್/ ಸ್ಟಾಪ್, ಕೀಲೆಸ್ ಎಂಟ್ರಿ ಮತ್ತು ಮ್ಯಾನುವಲ್ ಎಸಿಯಂತಹ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

maruti-celerio-price-hike-and-gets-six-airbags-as-standard

ಮಾರುತಿ ಸುಜುಕಿ ಸೆಲೆರಿಯೊ ಪುಟ್ಟ ಕಾರಾಗಿದ್ದರೂ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಯಾಣಿಕರ ರಕ್ಷಣೆಗಾಗಿ ಏರ್‌ಬ್ಯಾಗ್‌ಗಳು ಮಾತ್ರವಲ್ಲದೆ, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಅನ್ನು ಒಳಗೊಂಡಿದೆ. ಈ ಕಾರಿಗೆ ಟಾಟಾ ಟಿಯಾಗೊ ಮತ್ತು ಸಿಟ್ರನ್ ಸಿ3 ಹ್ಯಾಚ್‌ಬ್ಯಾಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

ಮಾರುತಿ ಸುಜುಕಿ ಸೆಲೆರಿಯೊ ಕಾರು ಪೆಟ್ರೋಲ್ ಮತ್ತು ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಇದರ 1 - ಲೀಟರ್ ಪೆಟ್ರೋಲ್ ಎಂಜಿನ್, 67 ಪಿಎಸ್ ಪವರ್ ಹಾಗೂ 89 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

maruti-celerio-price-hike-and-gets-six-airbags-as-standard

ಸಿಎನ್‌ಜಿ ಚಾಲಿತ ಸೆಲೆರಿಯೊ ವಿಷಯಕ್ಕೆ ಬಂದರೆ 1 - ಲೀಟರ್ ಸಾಮರ್ಥ್ಯದ ಎಂಜಿನ್‌ನ್ನು ಒಳಗೊಂಡಿದ್ದು, 57 ಪಿಎಸ್ ಪವರ್ ಮತ್ತು 82 ಎನ್ಎಂ ಟಾರ್ಕ್ ಹೊರಹಾಕುತ್ತದೆ. ಇದಕ್ಕೆ ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಮಾತ್ರ ನೀಡಲಾಗಿದೆ. ಈ ಕಾರು ಪೆಟ್ರೋಲ್‌ನಲ್ಲಿ 25.24 ಕಿ.ಮೀ ಹಾಗೂ ಸಿಎನ್‌ಜಿನಲ್ಲಿ 34.43 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 10, 2025, 15:33 [IST]
English summary
Maruti celerio price hike and gets six airbags as standard
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+