Maruti e-Vitara: ಗ್ರಾಹಕರೆ ಬೇಗನೆ ಸಜ್ಜಾಗಿ... ಮಾರುತಿ ಎಲೆಕ್ಟ್ರಿಕ್ ಕಾರು ಸಿಗೋದಿಲ್ಲ! ಯಾಕೆ ಗೊತ್ತಾ?
ದೆಹಲಿಯಲ್ಲಿ ಇದೇ ವರ್ಷದ ಆರಂಭದಲ್ಲಿ ನಡೆದ ಭಾರತ್ ಮೊಬಿಲಿಟಿ ಎಕ್ಸ್ ಪೋ 2025 ರಲ್ಲಿ ಮಾರುತಿ ಸುಜುಕಿ ಇ ವಿಟಾರಾ (Maruti e-Vitara) ವನ್ನು ಮೊದಲ ಬಾರಿಗೆ ಭಾರತದಲ್ಲಿ ಅನಾವರಣಗೊಳಿಸಲಾಯಿತು. ಈ ಕಾರಿನ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿದ್ದು, ಮಾರುತಿಯಿಂದ ಬರುತ್ತಿರುವ ಮೊದಲ ಎಲೆಕ್ಟ್ರಿಕ್ ಕಾರಾಗಿರುವ ಕಾರಣ, ಬೆಲೆಯ ವಿಷಯದಲ್ಲಿ ತಯಾರಕರು ಕೈಗೆಟುಕುವಂತೆ ಮಾಡಲು ಯೋಜಿಸಿರುವ ಬಗ್ಗೆ ಮಾಹಿತಿ ಹೊರಬಂದಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮಾರುತಿ ಸುಜುಕಿಯ ಅಧ್ಯಕ್ಷ ಆರ್.ಸಿ.ಭಾರ್ಗವ ಅವರು ಇ-ವಿಟಾರಾ ವಿತರಣೆಯು ಸೆಪ್ಟೆಂಬರ್ 2025 ರ ವೇಳೆಗೆ ಭಾರತದಲ್ಲಿ ಪ್ರಾರಂಭವಾಗಲಿದೆ ಎಂದು ದೃಢಪಡಿಸಿದ್ದಾರೆ.
ಮಾರುತಿ ಸುಜುಕಿ ಕಂಪನಿಯು ತನ್ನ ಇ ವಿಟಾರಾ ಕಾರನ್ನು ದೇಶಿಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಬಿಡುಗಡೆಯನ್ನು ಮೇ ಅಥವಾ ಜೂನ್ ನಲ್ಲಿ ನಿರೀಕ್ಷಿಸಬಹುದು. ಮಾರುತಿ ಸುಜುಕಿ ಕಂಪನಿಯು ಎಲೆಕ್ಟ್ರಿಕ್ ವಾಹನಗಳನ್ನು ವಿಶೇಷ ಡೀಲರ್ ಶಿಪ್‌ಗಳ ಮೂಲಕ ಮಾರಾಟ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ತನ್ನ ಪ್ರಸ್ತುತ ಸಾಮರ್ಥ್ಯವನ್ನು ಮಾರಾಟಕ್ಕಾಗಿ ಬಳಸಲಿದೆ ಎಂದು ದೃಢಪಡಿಸಿದೆ.

ಮಾರುತಿ ಸುಜುಕಿಯ ಮೊಟ್ಟಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಆಗಿರುವುದರಿಂದ ಇದು ಹಲವಾರು ಡೀಲರ್‌ಶಿಪ್‌ಗಳಲ್ಲಿ ಹಲವಾರ ಗಮನ ಸೆಳೆಯಿತ್ತಿದೆ. ಈ ವರ್ಷ ಸುಮಾರು 70,000 ಇವಿ ಕಾರುಗಳನ್ನು ಉತ್ಪಾದಿಸಲು ತಯಾರಕರು ಸಜ್ಜಾಗಿದ್ದಾರೆ. ಈ 70,000 ಕಾರುಗಳಲ್ಲಿ, ಹೆಚ್ಚಿನ ಕಾರುಗಳನ್ನು ರಫ್ತು ಮಾಡಲಾಗುವುದು. ಬೇಡಿಕೆಗೆ ಅನುಗುಣವಾಗಿ ಭಾರತದಲ್ಲಿ ಮಾರಾಟ ಮಾಡಲಾಗುವುದು.
ಮಾರುತಿ ಸುಜುಕಿ ಇ-ವಿಟಾರಾ ವಿಶೇಷತೆಗಳು: 49 ಕಿಲೋವ್ಯಾಟ್ ಮತ್ತು 61 ಕಿಲೋವ್ಯಾಟ್ ಎಂಬ ಎರಡು ಬ್ಯಾಟರಿ ಆಯ್ಕೆಗಳಲ್ಲಿ ಈ ಕಾರು ಲಭ್ಯವಿರಲಿದೆ. 49 ಕಿಲೋವ್ಯಾಟ್ ಹೊಂದಿರುವ ಕಾರಿನ ಮೋಟಾರ್ 142 ಬಿಹೆಚ್ ಪವರ್ ಮತ್ತು 189 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. 61 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಕಾರು 172 ಬಿಹೆಚ್ ಪವರ್ ಮತ್ತು 189 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದರಲ್ಲಿ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎಂಬ ಅನೇಕ ಡ್ರೈವ್ ಮೋಡ್ ಗಳನ್ನು ನೀಡಲಾಗಿದೆ. ಎಡಬ್ಲ್ಯುಡಿ ಆವೃತ್ತಿಯು ಉತ್ತಮ ಎಳೆತಕ್ಕಾಗಿ (ಟ್ರಾಕ್ಷನ್) ಸ್ನೋ ಮೋಡ್ ನೊಂದಿಗೆ ಬರುತ್ತದೆ. 150 ಕಿಲೋವ್ಯಾಟ್ ಚಾರ್ಜರ್‌ನೊಂದಿಗೆ, 61 ಕಿಲೋವ್ಯಾಟ್ ಬ್ಯಾಟರಿ 45 ನಿಮಿಷಗಳಲ್ಲಿ ಶೇ10% ರಿಂದ 80% ವರೆಗೆ ಚಾರ್ಜ್ ಆಗಬಲ್ಲದು.
ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ ಬೇಸ್ ಟ್ರಿಮ್ ಸುಮಾರು 345 ಕಿ.ಮೀ ರೇಂಜ್ ನೀಡುತ್ತದೆ. 61 ಕಿಲೋವ್ಯಾಟ್ ಎಡಬ್ಲ್ಯುಡಿ ಮಾದರಿಯು ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 426 ಕಿ.ಮೀ ರೇಂಜ್ ನೀಡುವುದಾಗಿ ಕಂಪನಿ ತಿಳಿಸಿದೆ. ಇ-ವಿಟಾರಾದಲ್ಲಿ ಟ್ವಿನ್ ಡಿಜಿಟಲ್ ಸ್ಕ್ರೀನ್ ಗಳಾದ 10.1-ಇಂಚಿನ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು 10.25-ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್, 10-ವೇ ಪವರ್ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ವೆಂಟಿಲೇಟೆಡ್ ಫ್ರಂಟ್ ಲೈನ್ ಸೀಟುಗಳು ಇರಲಿವೆ.

ಸ್ಲೈಡಿಂಗ್ ಮತ್ತು ರೆಕ್ಲೈನಿಂಗ್ ಸೀಟುಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಯುಎಸ್‌ಬಿ ಮತ್ತು ಟೈಪ್-ಸಿ ಚಾರ್ಜಿಂಗ್ ಪೋರ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಮಾರುತಿ ಸುಜುಕಿ ಇ ವಿಟಾರಾ ಎಲೆಕ್ಟ್ರಿಕ್ ಕಾರು ಬಿಡುಗಡೆ ನಂತರ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್, ಮಹೀಂದ್ರಾ ಬಿಇ 6, ಟಾಟಾ ಕರ್ವ್ ಇವಿ ಮತ್ತು ಎಂಜಿ ಝಡ್ಎಸ್ ಇವಿ ಕಾರುಗಳಿಗೆ ಪೈಪೋಟಿ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications