Maruti Fronx: ಮಾರುತಿಯ ಅಗ್ಗದ ಪ್ರೀಮಿಯಂ ಕಾರು: 8 ಲಕ್ಷ ಬೆಲೆ... 28.51 ಕಿ.ಮೀ ಮೈಲೇಜ್
ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹಲವು ಕಾರುಗಳಿದ್ದರೂ, ಇತ್ತೀಚೆಗೆ ಮಾರುತಿಯ ಈ ಒಂದು ಕಾರು ಭಾರೀ ಸದ್ದು ಮಾಡುತ್ತಿದೆ. ಹ್ಯುಂಡೈ ವೆನ್ಯೂ, ಮಹೀಂದ್ರಾ XUV 3XO ನಂತಹ ಕಠಿಣ ಪ್ರತಿಸ್ಪರ್ಧಿಗಳಿದ್ದರೂ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಭಾರತದಲ್ಲಿ ಮಾರುತಿ ಸುಜುಕಿಗೆ ಹೆಚ್ಚಿನ ಲಾಭ ತಂದುಕೊಡುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಬಹಿರಂಗ ಪಡಿಸಿದ ಮಾಹಿತಿಯ ಪ್ರಕಾರ, ಮಾರುತಿ ಫ್ರಾಂಕ್ಸ್ (Maruti Fronx) ಕೇವಲ ಎರಡು ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಕಾರುಗಳು ಭಾರತದಲ್ಲಿ ಮಾರಾಟವಾಗಿವೆ. ಹೆಚ್ಚಿನ ಫೀಚರ್‌ಗಳು, ಸ್ಟೈಲಿಂಗ್ ನವೀಕರಣಗಳು ಮತ್ತು ಸ್ಪರ್ಧಾತ್ಮಕ ಬೆಲೆ ಹೊಂದಿರುವುದರಿಂದಲೆ ಜನ ಹೆಚ್ಚಾಗಿ ಈ ಕಾರನ್ನು ಖರೀದಿಸುತ್ತಿದ್ದಾರೆ.
ಪ್ರಸ್ತುತ ಮಾರುತಿ ಸುಜುಕಿ ಈ ಕಾರನ್ನು ಭಾರತದಲ್ಲಿ ಬೇಸ್ ವೇರಿಯೆಂಟ್ ಅನ್ನು ರೂ. 7.52 ಲಕ್ಷ ಹಾಗೂ ಟಾಪ್ ವೇರಿಯೆಂಟ್ ಅನ್ನು ರೂ. 13.04 ಲಕ್ಷಕ್ಕೆ (ಎರಡು ಎಕ್ಸ್ ಶೋರೂಂ ಬೆಲೆಗಳು) ಮಾರಾಟ ಮಾಡುತ್ತಿದೆ. ಕಂಪನಿಯು ಖರೀದಿದಾರರ ವೈವಿಧ್ಯಮಯ ಅಗತ್ಯಗಳು ಮತ್ತು ಬಜೆಟ್ ಅನ್ನು ಆಧರಿಸಿ ವಿವಿಧ ಟ್ರಿಮ್‌ಗಳು ಮತ್ತು ಎಂಜಿನ್ ಆಯ್ಕೆಗಳಲ್ಲಿ ಈ ಕಾರನ್ನು ಮಾರಾಟ ಮಾಡುತ್ತಿದೆ.

ಮಾರುತಿ ಸುಜುಕಿಯ ಮತ್ತೊಂದು ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಬಲೆನೊಗಿಂತ ಒಂದು ಹೆಜ್ಜೆ ಮುಂದಿರಿಸಲು ಫ್ರಾಂಕ್ಸ್ ಅನ್ನು ಇನ್ನೂ ಆಕರ್ಷಕ ಡಿಸೈನ್ ಹಾಗೂ ಫೀಚರ್ಸ್‌ನೊಂದಿಗೆ ತುಂಬಿದೆ. ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಕ್ರಾಸ್ಒವರ್ ಸ್ಟೈಲಿಂಗ್ ಅನ್ನು ನೀಡಿ ಮ್ಯಾನುವಲ್, ಎಎಂಟಿ ಮತ್ತು ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪವರ್‌ಫುಲ್ ಎಂಜಿನ್ ನೀಡಿದೆ.
ಫ್ರಾಂಕ್ಸ್ ಎಂಜಿನ್ ವಿಷಯಕ್ಕೆ ಬಂದರೆ 1.2-ಲೀಟರ್ ಡ್ಯುಯಲ್ - ಜೆಟ್ ಡ್ಯುಯಲ್ - ವಿವಿಟಿ ಪೆಟ್ರೋಲ್ ಮತ್ತು 1.0-ಲೀಟರ್ ಟರ್ಬೊ ಬೂಸ್ಟರ್ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.2-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿ ಅಥವಾ 5-ಸ್ಪೀಡ್ ಎಎಂಟಿ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಬರುತ್ತದೆ.

1.2-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿಯೊಂದಿಗೆ ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿದ್ದರೇ, 1.0-ಲೀಟರ್ ಎಂಜಿನ್ 5-ಸ್ಪೀಡ್ ಎಂಟಿ ಮತ್ತು 6-ಸ್ಪೀಡ್ ಎಟಿ ಆಯ್ಕೆಗಳನ್ನು ಹೊಂದಿದೆ. 1.2 ಎಂಟಿಗೆ 21.79 ಕಿ.ಮೀ, 1.2 ಎಎಂಟಿಗೆ 22.89 ಕಿ.ಮೀ, 1.0 ಎಂಟಿಗೆ 21.5 ಕಿ.ಮೀ, 1.0 ಎಟಿಗೆ 20.01 ಕಿ.ಮೀ ಮತ್ತು 1.2 ಎಂಟಿ ಸಿಎನ್‌ಜಿಯಲ್ಲಿ 28.51 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.
ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನಲ್ಲಿ ಅರ್ಕಾಮಿಸ್ ಸರೌಂಡ್ ಸೌಂಡ್ ಸಿಸ್ಟಮ್, 360 ಡಿಗ್ರಿ ವ್ಯೂ ಕ್ಯಾಮೆರಾ ಮತ್ತು ವೈರ್ ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 9-ಇಂಚಿನ ಎಚ್‌ಡಿ ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್ ಮೆಂಟ್ ಸಿಸ್ಟಂ, ವೈರ್ ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ನೊಂದಿಗೆ ಹೆಡ್-ಅಪ್ ಡಿಸ್ ಪ್ಲೇ ಹೊಂದಿದೆ.

ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿನಲ್ಲಿ ಸುರಕ್ಷತೆಗೂ ಆದ್ಯತೆ ನೀಡಲಾಗಿದ್ದು, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ನೊಂದಿಗೆ ಎಬಿಎಸ್ ಮತ್ತು ಐಸೊಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಆರು ಏರ್ ಬ್ಯಾಗ್‌ಗಳು, ಹಿಲ್ - ಹೋಲ್ಡ್ ಅಸಿಸ್ಟ್ ಮತ್ತು ರೋಲ್ ಓವರ್ ತಗ್ಗಿಸುವಿಕೆಯೊಂದಿಗೆ ಇಎಸ್‌ಪಿ, 3-ಪಾಯಿಂಟ್ ಇಎಲ್ ಆರ್ ಸೀಟ್ ಬೆಲ್ಟ್ ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಭಾರತದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಪ್ರಮುಖ ಪ್ರತಿ ಸ್ಪರ್ಧಿಗಳಾಗಿ ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಕಿಯಾ ಸೊನೆಟ್, ಕಿಯಾ ಸೈರಸ್ ಮತ್ತು ಸ್ಕೋಡಾ ಕೈಲಾಕ್, ಮಹೀಂದ್ರಾ XUV 3XO ನಂತಹ ಕಾರುಗಳು ಪೈಪೋಟಿ ನೀಡುತ್ತವೆ. ಇವೆಲ್ಲವೂ ಉತ್ತಮ ಮಾರಾಟ ಕಾಣುವ ಕಾರುಗಳಾಗಿದ್ದರೂ, ಫ್ರಾಂಕ್ಸ್ ಮಾತ್ರ ಹೆಚ್ಚು ಮಾರಾಟವಾಗುವ ಕಾರಾಗಿ ಮುನ್ನುಗ್ಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications