ಮಾರುತಿ ಸುಜುಕಿ ಪ್ರತಿಷ್ಠೆ ಈ ಕಾರುಗಳ ಕೈಯಲ್ಲಿ! ಬಿಡುಗಡೆಗೆ ಸಜ್ಜು... ಎರ್ಟಿಗಾ ಎಲೆಕ್ಟ್ರಿಕ್?
ಮಾರುತಿ ಸುಜುಕಿಗೆ 2026 ಬಿಡುವಿಲ್ಲದ ವರ್ಷವಾಗಲಿದೆ, ಮೂಲಗಳ ಪ್ರಕಾರ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ನಾಲ್ಕು ಹೊಸ ಅಥವಾ ನವೀಕರಿಸಿದ ಮಾಡಲ್‌ಗಳು ಸದ್ದಿಲ್ಲದೆ ಹೊರಬರಲು ಸಜ್ಜಾಗುತ್ತಿವೆ. ಹೌದು, ಮಾರುತಿ ಸುಜುಕಿ 2026 ರಲ್ಲಿ ನಾಲ್ಕು ಪ್ರಮುಖ ಕಾರುಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ, ಇದರಲ್ಲಿ ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನ ಚಾಲಿತ ಕಾರುಗಳಿಗೆ ಒತ್ತು ನೀಡಲಾಗಿದೆ. ಇವುಗಳಲ್ಲಿ ಇ ವಿಟಾರಾ, ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್, ಎಲೆಕ್ಟ್ರಿಕ್ ಎಂಪಿವಿ ಮತ್ತು ಬ್ರೆಝಾ ಫೇಸ್‌ಲಿಫ್ಟ್ ಸೇರಿವೆ.
ಮಾರುತಿ ಇ-ವಿಟಾರಾ: ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಜನವರಿ 2026 ರಲ್ಲಿ ಬಿಡುಗಡೆಯಾಗಲಿದೆ. ಇದು 49kWh ಮತ್ತು 61kWh ಬ್ಯಾಟರಿ ಆಯ್ಕೆಗಳೊಂದಿಗೆ ಬರಲಿದ್ದು, ದೊಡ್ಡ ಬ್ಯಾಟರಿ ಸಿಂಗಲ್ ಚಾರ್ಜ್‌ನಲ್ಲಿ 500 ಕಿ.ಮೀ ವರೆಗೆ ರೇಂಜ್ ನೀಡಲಿದೆ. ಹೊಸ ಮೀಸಲಾದ EV ಪ್ಲಾಟ್‌ಫಾರ್ಮ್, HEARTECT-e ನಲ್ಲಿ ಮಾರುತಿ ಇ-ವಿಟಾರಾವನ್ನು ನಿರ್ಮಿಸಲಾಗಿದೆ.

ಮಾರುತಿ ಇ-ವಿಟಾರಾ ಈ ಕಾರಿನ ಮೇಲೆ ಭಾರೀ ನಿರೀಕ್ಷೆಗಳಿದ್ದು, ಭಾರತ್ NCAP ಕ್ರ್ಯಾಶ್ ಪರೀಕ್ಷೆಗಳಲ್ಲಿ ಈಗಾಗಲೇ 5 - ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಇದು ಹುಂಡೈ ಕ್ರೆಟಾ ಎಲೆಕ್ಟ್ರಿಕ್, ಟಾಟಾ ಕರ್ವ್ EV ಮತ್ತು MG ZS EV ಕಾರುಗಳಿಗೆ ಭಾರತೀಯ ಇವಿ ವಿಭಾಗದಲ್ಲಿ ಪ್ರತಿಸ್ಪರ್ಧಿಯಾಗಲಿದೆ.
ಫ್ರಾಂಕ್ಸ್ ಫ್ಲೆಕ್ಸ್ ಫ್ಯೂಯಲ್: ಈ ಕಾಂಪ್ಯಾಕ್ಟ್ SUV 2026 ರ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗಲಿದೆ. E85 (85% ಎಥೆನಾಲ್) ಮಿಶ್ರಣ ಇಂಧನದೊಂದಿಗೆ ಚಲಿಸಲಿದ್ದು, ಮಾರುತಿ ಮೊದಲ ಫ್ಲೆಕ್ಸ್-ಇಂಧನದ ಎಂಜಿನ್ ಅನ್ನು ಪರಿಚಯಿಸುತ್ತಿದೆ. ವಿನ್ಯಾಸ ಮತ್ತು ವೈಶಿಷ್ಟ್ಯಗಳು ಪ್ರಸ್ತುತ ಪೆಟ್ರೋಲ್ ಫ್ರಾಂಕ್ಸ್ ವೇರಿಯೆಂಟ್‌ಗಳಿಗೆ ಹೊಂದಿಕೆಯಾಗುತ್ತವೆ, ಭಾರತದ ಎಥೆನಾಲ್ ನೀತಿಯೊಂದಿಗೆ ಹೊಂದಿಕೆಯಾಗುತ್ತವೆ.

ಎಲೆಕ್ಟ್ರಿಕ್ MPV (YMC): ಎರ್ಟಿಗಾ ತರಹದ ಎಲೆಕ್ಟ್ರಿಕ್ MPV 2026 ರ ಕೊನೆಯಲ್ಲಿ ಆಗಮಿಸುತ್ತದೆ ಎಂದು ಆಟೋ ಮೂಲಗಳು ತಿಳಿಸಿವೆ. ಒಮ್ಮೆ ಚಾರ್ಜ್ ಮಾಡಿದರೆ 500 ರಿಂದ 550 ಕಿ.ಮೀ ಓಡಿಸುವಷ್ಟು ರೇಂಜ್ ನೀಡಲಿದೆ. ಈ ಕಾರು ಇ-ವಿಟಾರಾದ ಪ್ಲಾಟ್‌ಫಾರ್ಮ್ ಮತ್ತು ಬ್ಯಾಟರಿಗಳನ್ನು ಹಂಚಿಕೊಳ್ಳಲಿದೆ. ಇದು ಕಿಯಾ ಕ್ಯಾರೆನ್ಸ್ ಇವಿ ವಿರುದ್ಧ ಪೈಪೋಟಿ ನೀಡಲಿದೆ.
ಇ-ವಿಟಾರಾದಂತೆಯೇ ಮಾರುತಿ ಎರ್ಟಿಗಾ ಎಲೆಕ್ಟ್ರಿಕ್ ಕಾರು ಅದೇ HEARTECT-e ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳಲಿದೆ. ಅಸ್ತಿತ್ವದಲ್ಲಿರುವ ಎರ್ಟಿಗಾ ಮತ್ತು XL6 ಮಾಡಲ್‌ಗಳಿಗಿಂತ ಪ್ರೀಮಿಯಂ ಆಗಿರಬಹುದು. 49kWh ಮತ್ತು 61kWh ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಪಡೆಯುವ ಸಾಧ್ಯತೆಯಿದೆ, ವಿಶಾಲವಾದ 6 ಮತ್ತು 7-ಆಸನಗಳ ಸಂರಚನೆಗಳನ್ನು ನೀಡುವ ನಿರೀಕ್ಷೆಯಿದೆ.

ಬ್ರೆಝಾ ಫೇಸ್‌ಲಿಫ್ಟ್: 2026 ರ ಮಧ್ಯದಲ್ಲಿ ಬ್ರೆಝಾ ಫೇಸ್‌ಲಿಫ್ಟ್ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ರಿಫ್ರೆಶ್ ಮಾಡಿದ ನವೀಕೃತ ಸ್ಟೈಲಿಂಗ್, ದೊಡ್ಡ ಟಚ್‌ಸ್ಕ್ರೀನ್, ವೆಂಟಿಲೇಟೆಡ್ ಸೀಟುಗಳು ಮತ್ತು ಟಾಪ್ ಟ್ರಿಮ್‌ಗಳಲ್ಲಿ ಲೆವೆಲ್ - 2 ADAS ಪಡೆಯಲಿದೆ. 1.5L ಪೆಟ್ರೋಲ್, ಮ್ಯಾನುವಲ್/ಆಟೋ ಮತ್ತು CNG ಆಯ್ಕೆಗಳು ಮುಂದುವರಿಯುತ್ತವೆ ಎಂದು ತಿಳಿದುಬಂದಿದೆ.
2ನೇ ತಲೆಮಾರಿನ 2026 ರ ಹುಂಡೈ ವೆನ್ಯೂ, ಸ್ಕೋಡಾ ಕೈಲಾಕ್, ಟಾಟಾ ನೆಕ್ಸಾನ್, ಮಹೀಂದ್ರಾ XUV 3XO ಮತ್ತು ಇತರ ಕಾರುಗಳ ವಿರುದ್ಧ ಫೇಸ್‌ಲಿಫ್ಟೆಡ್ ಬ್ರೆಝಾ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇದು ಹೊಸ ಮಾರುತಿ ಸುಜುಕಿ ವಿಕ್ಟೋರಿಸ್‌ನಲ್ಲಿ ಕಂಡುಬರುವ ಹೆಚ್ಚು ಸ್ಥಳಾವಕಾಶ ಹಾಗೂ ಸಮರ್ಥ ಅಂಡರ್‌ಬಾಡಿ CNG ಟ್ಯಾಂಕ್ ಅನ್ನು ಒಳಗೊಂಡಿರಲಿದೆ.
ಆಟೋಕಾರ್ ಇಂಡಿಯಾ ವರದಿ ಮಾಡಿರುವಂತೆ, 2026 ರ ಹೊಸ ವೇಳಾಪಟ್ಟಿಯು ನೆಕ್ಸಾ ಡೀಲರ್‌ಶಿಪ್‌ಗಳ ಮೂಲಕ ಮಾರಾಟವಾಗುವ ಕಾರುಗಳು ಹಾಗೂ ತನ್ನ ಪ್ರತಿಸ್ಪರ್ಧಿಗಳಿಗಿಂತ ಭಿನ್ನವಾಗಿ, ಎಲೆಕ್ಟ್ರಿಕ್ ಆವೃತ್ತಿಗಳಿಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ಈ ಕಾರುಗಳ ಬಿಡುಗಡೆ ನಂತರ ಮಾರುತಿ ಯಾವ ಮಟ್ಟಿಗೆ ಇವಿ ವಲಯದಲ್ಲಿ ಯಶಸ್ವಿಯಾಗಲಿದೆ ಕಾದುನೋಡಬೇಕಿದೆ.


Click it and Unblock the Notifications








